2022ರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ಯಂಗ್ ರೆಬೆಲ್ ಸ್ಟಾರ್ ಸಿನಿಮಾ ಸಲಾರ್ ಕೂಡ ಒಂದು. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ಹೇಗಿರುತ್ತೆ? ಅಂತ ನೋಡೋಕೆ ಫ್ಯಾನ್ಸ್ ಕಾತುರದಿಂದ ಕಾದು ಕೂತಿದ್ದಾರೆ. ಈ ಮಧ್ಯೆ ಸಲಾರ್ ಚಿತ್ರಕ್ಕೆ ವಿಲನ್ ಯಾರು? ಅನ್ನೋ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಖಳನಾಯಕನ ಬಗ್ಗೆ ಚರ್ಚೆಯಾಗೋಕೆ ಎರಡು ಪ್ರಮುಖ ಕಾರಣಗಳಿವೆ. ಅವುಗಳನೇನು ಅನ್ನೋದನ್ನು ಮುಂದೆ ಓದಿ.
ಸಲಾರ್ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಸಿನಿಮಾದ ಒಂದೊಂದು ಸ್ಟಾರ್ ಕಾಸ್ಟ್ ಅನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಿದೆ. ಸಿನಿಮಾದಲ್ಲಿ ನಟಿಸೋ ಒಬ್ಬೊಬ್ಬ ಸ್ಟಾರ್ ಒಂದೊಂದು ಚಿತ್ರರಂಗದಿಂದ ಆಯ್ಕೆಯಾದ್ರೆ, ವ್ಯಾಪಾರಕ್ಕೆ ಅನುಕೂಲವಾಗಲಿದೆ. ಈ ಕಾರಣಕ್ಕೆ ಒಂದಿಷ್ಟು ಲೆಕ್ಕಾಚಾರಗಳನ್ನು ಹಾಕಲಾಗಿದೆ ಎನ್ನಲಾಗಿದೆ. ಅಷ್ಟಕ್ಕೂ ವಿಲನ್ ಬಗ್ಗೆ ಚರ್ಚೆಯಾಗ್ತಿರೋದಕ್ಕೆ ಪ್ರಮುಖ ಕಾರಣ ಬೃಹತ್ ಸೆಟ್ಟು.
ಖಳನಾಯಕನಿಗಾಗಿ ಬೃಹತ್ ಸೆಟ್ಟು ನಿರ್ಮಾಣ
ಸಲಾರ್ ಸಿನಿಮಾಗಾಗಿ ಬೃಹತ್ ಸೆಟ್ಟುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಮುಖ್ಯ ವಿಲನ್ ಮನೆಯಾಗಿದ್ದು, ಇದೇ ಸೆಟ್ಟಿನಲ್ಲಿ ಸಲಾರ್ ಚಿತ್ರದಲ್ಲಿ ಸಾಕಷ್ಟು ಸೀನ್ಗಳನ್ನು ಚಿತ್ರೀಕರಣ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಹೊಂಬಾಳೆ ಫಿಲಂಸ್ ಈ ಸೆಟ್ಟಿಗಾಗಿ ಕೋಟಿಗಟ್ಟಲೆ ಹಣವನ್ನು ಸರಿಯುತ್ತಿದೆ. ಈ ಕಾರಣಕ್ಕೆ ವಿಲನ್ ಯಾರು ಅನ್ನೋ ಪ್ರಶ್ನೆ ಚರ್ಚೆಯಲ್ಲಿದೆ.
ಕೆಜಿಎಫ್ಗೆ ಸಂಜಯ್ ದತ್.. ಸಲಾರ್ಗೆ ಯಾರು?
ಸಲಾರ್ ಖಳನಾಯಕನ ಬಗ್ಗೆ ಚರ್ಚೆಯಾಗ್ತಿರೋದಕ್ಕೆ ಪ್ರಮುಖ ಕಾರಣ ಸಂಜಯ್ ದತ್. ಕೆಜಿಎಫ್ 2ಚಿತ್ರದ ಖಳನಾಯಕನಾಗಿ ಸಂಜಯ್ ದತ್ ಕುತೂಹಲ ಕೆರಳಿಸಿದ್ದಾರೆ. ಸಂಜಯ್ ದತ್ ಲುಕ್, ಖದರ್ ಇವುಗಳನ್ನ ನೋಡಿದ್ಮೇಲೆ ಸಿನಿಮಾ ಬಿಡುಗಡೆಗಾಗಿ ಕೂತೂಹಲದಿಂದ ಕಾಯ್ತಿದ್ದಾರೆ. ಕೆಜಿಎಫ್ಗೆ ಸಂಜಯ್ ದತ್ ಅಂತ ದೊಡ್ಡ ನಟನನ್ನು ಕರ್ಕೊಂಡು ಬಂದ್ಮೇಲೆ ಸಲಾರ್ಗೆ ಯಾರನ್ನು ಕರೆತರುತ್ತಾರೋ ಅನ್ನೋ ಚರ್ಚೆಯಂತೂ ಶುರುವಾಗಿದೆ.
ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಲಾರ್ ಸಾಕಷ್ಟು ಕುತೂಹಲಗಳನ್ನು ಸೃಷ್ಟಿಸಿದೆ. 2022 ಏಪ್ರಿಲ್ 14ರಂದು ಸಿನಿಮಾ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿದೆ. ಹೀಗಾಗಿ ಚುರುಕುನಿಂದ ಚಿತ್ರೀಕರಣ ಆರಂಭ ಆಗಿದ್ದು, ನಿಗದಿಪಡಿಸಿದ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ನಡೆಯುತ್ತಿದೆ.