ಮೋಸ್ಟ್ ಎಕ್ಸ್ಪೆಕ್ಟೆಡ್ KGF ಚಾಪ್ಟರ್- 2 ಚಿತ್ರಕ್ಕಾಗಿ ಅಭಿಮಾನಿಗಳು ಎಷ್ಟು ಕಾಯ್ತಿದ್ದಾರೆ ಅಂತ ಬಿಡಿಸಿ ಹೇಳೋದು ಬೇಕಿಲ್ಲ. ಪಾರ್ಟ್ 1ಗಿಂತ ಪಾರ್ಟ್ 2 ಸಿಕ್ಕಾಪಟ್ಟೆ ದೊಡ್ಡ ಸಿನಿಮಾ ಅನ್ನೋದು ಗೊತ್ತೇಯಿದೆ. ಶೂಟಿಂಗ್ ಮುಗಿದಿದೆ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಜುಲೈ 16ಕ್ಕೆ ಬಿಡುಗಡೆಗೂ ರೆಡಿಯಿದೆ. ಆದರೆ ಥಿಯೇಟರ್ ಬಾಗಿಲು ಬಂದ್ ಆಗಿರೋದ್ರಿಂದ ಸಿನಿಮಾ ಜುಲೈ 16ಕ್ಕೆ ಬರಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಅದನ್ನ ಪಕ್ಕಕಿಟ್ರೆ, ಕೆಜಿಎಫ್ ಟೀಸರ್ ಸೈಲೆಂಟ್ ಆಗಿ ಒಂದು ದಾಖಲೆ ಬರೆದಿದೆ.
ಚಾಪ್ಟರ್- 2 ಹೈವೋಲ್ಟೇಜ್ ಟೀಸರ್ ಇದೀಗ 1(10 ಲಕ್ಷ) ಮಿಲಿಯನ್ ಕಾಮೆಂಟ್ಸ್ ಪಡೆದುಕೊಂಡಿದೆ. ಕೆಜಿಎಫ್ ಸೀಕ್ವೆಲ್ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬರ್ತಿದೆ. ಚಿತ್ರತಂಡ ಬಹಳ ಬುದ್ದಿವಂತಿಕೆಯಿಂದ 5 ಭಾಷೆಗೂ ಸೇರಿ ಒಂದೇ ಟೀಸರ್ ರಿಲೀಸ್ ಮಾಡಿತ್ತು. ಅವರ ಪ್ಲಾನ್ ಸಕ್ಸಸ್ ಆಗಿತ್ತು. ಈವರೆಗೆ 185 ಮಿಲಿಯನ್ ಅಂದ್ರೆ, 18 ಕೋಟಿ ವೀವ್ಸ್ ಈ ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಗೆ ಸಿಕ್ಕಿದೆ. ಜೊತೆಗೆ 8.2 ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡು ಟೀಸರ್ ದಾಖಲೆ ಬರೆದಿದೆ. ಕನ್ನಡ ಚಿತ್ರವೊಂದರ ಟೀಸರ್ ಈ ಪಾಟಿ ಸೌಂಡ್ ಮಾಡ್ತಿರೋದು ಇದೇ ಮೊದಲು.
ಹೊಸ ದಾಖಲೆ ಏನಪ್ಪಾ ಅಂದ್ರೆ, ಕೆಜಿಎಫ್-2 ಟೀಸರ್, 1 ಮಿಲಿಯನ್ ಕಾಮೆಂಟ್ಸ್ ಪಡೆದುಕೊಂಡಿದೆ. ಇದು ಹೊಸ ದಾಖಲೆಯೇ ಸರಿ. ಅದ್ರಲ್ಲೂ ಬಹುತೇಕ ಸಿನಿಮಾ ಕ್ವಾಲಿಟಿನ ಮೆಚ್ಚಿ ಕೊಂಡಾಡಿರುವ ಕಾಮೆಂಟಗಳೇ ಇವೆ. ಕೆಜಿಎಫ್ 2 ಟೀಸರ್ 10 ಲಕ್ಷ ಕಾಮೆಂಟ್ಸ್ ಗಿಟ್ಟಿಸಿರೋ ವಿಚಾರ ಈಗ ಟ್ರೆಂಡ್ ಆಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಂತಸ ವ್ಯಕ್ತಪಡಿಸ್ತಿದ್ದಾರೆ. ಅಚ್ಚರಿ ಏನಂದ್ರೆ, ಇಷ್ಟೆಲ್ಲಾ ಸೌಂಡ್ ಮಾಡ್ತಿರೋ ಟೀಸರ್, ‘ಮಾಸ್ಟರ್’ ಸಿನಿಮಾ ದಾಖಲೆ ಮುರಿಯುವಲ್ಲಿ ಸೋತಿದೆ. ಬರೀ 65 ಮಿಲಿಯನ್ ವೀವ್ಸ್ ಸಾಧಿಸಿರೋ ‘ಮಾಸ್ಟರ್’ ಟೀಸರ್ 11 ಲಕ್ಷ ಕಾಮೆಂಟ್ಸ್ ಪಡೆದಿದೆ. ಇಳಯ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ‘ಮಾಸ್ಟರ್’ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿ, ಬಾಕ್ಸಾಫೀಸ್ ಶೇಕ್ ಮಾಡಿತ್ತು.