ಸೌತ್ ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಸಿನಿಮಾ ವಿಕ್ರಾಂತ್ ರೋಣ. ಜಗತ್ತಿನ ಅತಿ ಎತ್ತರದ ಬುರ್ಜ್ ಖಲೀಫಾ ಕಟ್ಟಡದಲ್ಲಿ ಟೀಸರ್ ರಿಲೀಸ್ ಮಾಡಿ ಚಿತ್ರ ವಿಶ್ವದಾದ್ಯಂತ ಸದ್ದು ಮಾಡಿತ್ತು. ಅನೂಪ್ ಭಂಡಾರಿ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಆಫೀಸರ್ ರೋಲ್ ಪ್ಲೇ ಮಾಡಿದ್ದಾರೆ. ಪ್ಯಾನ್ ವರ್ಲ್ಡ್ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.ಇಂತಹ ಹೊತ್ತಲ್ಲೇ ಚಿತ್ರತಂಡಕ್ಕೆ ಕಹಿ ಸುದ್ದಿ ಬಂದಿದೆ.
ವಿಕ್ರಾಂತ್ ರೋಣ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ ರಘುರಾಮ್ ಅನ್ನುವ ಆನೆ ಕೊನೆಯುಸಿರೆಳೆದಿದೆ. ಭಾರೀ ಎತ್ತರದ ರಘುರಾಮ ಆನೆ ಕೇರಳದಲ್ಲಿ ಬಹಳ ಪ್ರಸಿದ್ಧಿ ಆಗಿತ್ತು. ಇದೇ ಆನೆಯನ್ನು ಬಳಸಿ ಚಿತ್ರದ ಹಾಡೊಂದನ್ನ ಚಿತ್ರೀಕರಿಸಲಾಗಿತ್ತು. ತೆಲುಗಿನ ಜಾನಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದರು. ಆನೆ ಬಳಸಿ ಚಿತ್ರೀಕರಣ ಮಾಡಿದ ವಿಚಾರವನ್ನ ಚಿತ್ರತಂಡ ರಹಸ್ಯವಾಗಿಯೇ ಇಟ್ಟಿತ್ತು. ಒಂದು ದಿನಕ್ಕೆ ಈ ಆನೆಗೆ ₹1.2ಲಕ್ಷ ಸಂಭಾವನೆ ನೀಡಬೇಕಿತ್ತು.
ಕೇರಳ ಶೆಡ್ಯೂಲ್ ನಲ್ಲಿ ರಘುರಾಮ್ ಆನೆಯನ್ನ ಬಳಸಿ ಅಲ್ಲೇ ಚಿತ್ರೀಕರಣ ನಡೆಸಲಾಗಿತ್ತು. ಜಾಕ್ ಮಂಜು ಯಾವುದಕ್ಕೂ ರಾಜಿ ಆಗದೇ ಬಹಳ ಅದ್ಧೂರಿಯಾಗಿ ವಿಕ್ರಾಂತ್ ರೋಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 19ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ತ್ರೀಡಿ ಚಿತ್ರವನ್ನ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲು ತಯಾರಿ ನಡೀತಿದೆ. ಅದಕ್ಕೂ ಮೊದಲು ರಘುರಾಮ್ ಆನೆ ಕೊನೆಯುಸಿರೆಳೆದಿರೋದು ಚಿತ್ರತಂಡಕ್ಕೆ ಬೇಸರ ತಂದಿದೆ.