ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿಲ್ಲ. ಆದ್ರೂ, ಕರ್ನಾಟಕವನ್ನು ಅನ್ಲಾಕ್ ಮಾಡಲು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಿ.ಎಂ ಯಡಿಯೂರಪ್ಪ ಸಭೆ ಮಾಡಿ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸುವ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರದಂತೆ ಜುಲೈ 19ರಿಂದ ಏನಿರುತ್ತೆ? ಏನಿರಲ್ಲ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಸಿನಿಮಾ ಮಂದಿರಗಳಿಗೆ ಅನುಮತಿ
ಶೇ.50 ರ ಸೀಟ್ ಭರ್ತಿಯೊಂದಿಗೆ ಸಿನಿಮಾ ಮಂದಿರಗಳು ತೆರೆಯಲು ಅನುಮತಿ ನೀಡಲಾಗಿದ್ದು, ಜುಲೈ 19ರಿಂದಲೇ ಥಿಯೇಟರ್ಗಳು ಓಪನ್ ಆಗಲಿವೆ. ಆದ್ರೆ, ಸ್ಟಾರ್ ಸಿನಿಮಾಗಳು ಬಿಡುಗಡೆಯಾಗೋ ಅನುಮಾನವಿದೆ. ಆದರೆ, ಒಳಾಂಗಣ ಚಿತ್ರೀಕರಣ ಮತ್ತು ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡಿಲ್ಲ.
ನೈಟ್ ಕರ್ಫ್ಯೂ-ಒಂದು ಗಂಟೆ ಕಡಿತ
ರಾತ್ರಿ 9 ಗಂಟೆಯ ಬಳಿಕ ನೈಟ್ ಕರ್ಪ್ಯೂ ಜಾರಿಯಲ್ಲಿತ್ತು. ಆದ್ರೀಗ ಜುಲೈ 19ರ ಬಳಿಕ ರಾತ್ರಿ 9 ರ ಬದಲು 10 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತೆ.
ಪದವಿ ಕಾಲೇಜುಗಳಿಗೆ ಅನುಮತಿ
ಪದವಿ ಮಟ್ಟದ ಕಾಲೇಜುಗಳು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಜುಲೈ 26ರಿಂದ ಪದವಿ ಕಾಲೇಜುಗಳು ಆರಂಭ ಆಗಲಿವೆ. ಆದರೆ, ಒಂದು ಡೋಸ್ ಲಸಿಕೆ ಪಡೆದವರಿಗೆ ಕಾಲೇಜಿಗೆ ಬರಲು ನೀಡಿದೆ.
ಈಜು ಕೊಳಗಳಿಗೆ ಇಲ್ಲ ಪರ್ಮಿಷನ್
ಅನ್ಲಾಕ್ 4.Oನಲ್ಲೂ ಈಜು ಕೊಳಗಳಿಗೆ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಸರ್ಕಾರ ಮತ್ತೊಮ್ಮೆ ಅನ್ಲಾಕ್ ಘೋಷಣೆ ಮಾಡೋವರೆಗೂ ಈಜು ಕೊಳಗಳಿಕೆ ಅನುಮತಿ ಇರೋದಿಲ್ಲ.
ಬಾರ್ಗಳಲ್ಲಿ ಮಾತ್ರ ಮದ್ಯ ಸೇವನೆ
ಬಾರ್ಗಳಲ್ಲಿ ಮಾತ್ರ ಮಧ್ಯ ಸೇವನೆ ಮಾಡ್ಬೇಕು ಅಂತಿದ್ದ ನಿಯಮವನ್ನು ಮುಂದುವರೆಸಲಾಗಿದೆ. ಶೇ.50 ರಷ್ಟು ಮಿತಿಯಲ್ಲಿ ಬಾರ್ಗಳಲ್ಲಿ ಮಧ್ಯ ಸೇವನೆ ಮಾಡಬಹುದಾಗಿದೆ. ಆದ್ರೆ, ರಾತ್ರಿ 10ರವರೆಗೆ ಮಧ್ಯೆ ಸೇವನೆಗೆ ಅವಕಾಶ ನೀಡಲಾಗಿದೆ. ಪಬ್ಗಳಲ್ಲಿ ಮದ್ಯ ಸೇವನೆ ಹಾಗೂ ನೈಟ್ ಪಾರ್ಟಿಗಳಿಗೆ ಅವಕಾಶ ನೀಡಿಲ್ಲ.
ಮದುವೆ, ಅಂತ್ಯ ಸಂಸ್ಕಾರಕ್ಕೆ ಮಿತಿ ಮುಂದೂಡಿಕೆ
ಮದುವೆ ಸಮಾರಂಭದಲ್ಲಿ 100 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಹಾಗೇ ಅಂತ್ಯ ಸಂಸ್ಕಾರಕ್ಕೂ 20 ಜನರಷ್ಟೇ ಸೇರಬೇಕೆಂದು ನಿಯಮವನ್ನು ಮುಂದುವರೆಸಲಾಗಿದೆ.