ಕೊರೊನಾ ಅದೆಷ್ಟೋ ಮಂದಿ ಜೀವನವನ್ನು ಬೀದಿಗೆ ತಂದು ನಿಲ್ಲಿಸಿದೆ. ನೆಮ್ಮದಿಯ ಬದುಕು ಕಟ್ಕೊಂಡಿದ್ದ ಜನರಿಗೆ ಕೊರೊನಾ ಕೊಟ್ಟ ಹೊಡೆತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಅದ್ರಲ್ಲೂ ಕೊರೊನಾದಿಂದ ಸಾವನ್ನಪ್ಪಿದ ರೈತರ ಪರಿಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ. ಹೀಗಾಗಿ ಕೊರೊನಾದಿಂದ ಸಾವನ್ನಪ್ಪಿದ ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೊರೊನಾದಿಂದ ಸಾವನ್ನಪ್ಪಿದ ರೈತನ ಒಂದು ಲಕ್ಷ ರೂಪಾಯಿ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ಸಹಕಾರ ಇಲಾಖೆ ಅಂತಿಮ ತಿರ್ಮಾನ ಪ್ರಕಟಿಸಲಿದೆ. ಈಗಾಗ್ಲೇ ಎಲ್ಲಾ ಸಹಕಾರ ಸಂಸ್ಥೆಗಳಿಂದ ಕೊರೊನಾದಿಂದ ಸಾವನ್ನಪ್ಪಿರುವ ರೈತರ ಮಾಹಿತಿ ನೀಡಲು ಸೂಚಿಸಲಾಗಿದೆ.
ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಮೂಲಕ ರೈತರ ಸಾಲಮನ್ನಾ ಯೋಜನೆ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಆರ್ಥಿಕವಾಗಿ ಸದೃಢವಾಗಿರೋ ಡಿಸಿಸಿ ಬ್ಯಾಂಕ್ಗಳ ಮೂಲಕ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದು, ಅಪೆಕ್ಸ್ ಬ್ಯಾಂಕ್ಗಳಿಂದ ಆರ್ಥಿಕ ನೆರವು ಸಿಗಲಿದೆ. ಈ ಸಾಲಮನ್ನಾ ಯೋಜನೆಯನ್ನು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದು, ಇನ್ನೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಶಾಸಕ ಜಿ ಟಿ ದೇವೇಗೌಡ ಬೆಂಬಲ
ಕೊರೊನಾದಿಂದ ಸಾವನ್ನಪ್ಪಿರುವ ರೈತರ ಸಾಲಮನ್ನಾ ಯೋಜನೆ ಮಾಡಲು ಮುಂದಾಗಿರೋ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸಹಕಾರ ಮಹಾಮಂಡಳ ಸ್ಬಾಗತಿಸಿದೆ. ಕೊರೊನಾದಿಂದ ಸಾವನ್ನಪ್ಪಿರೋ ರೈತರ ಕುಟುಂಬಕ್ಕೆ ಸಹಕಾರ ಕೊಡುವ ಚಿಂತನೆ ಒಳ್ಳೆಯದು. ಕಷ್ಟದಲ್ಲಿ ಇರುವ ರೈತರ ಕುಟುಂಬಕ್ಕೆ ಈ ಯೋಜನೆ ಅನುಕೂಲವಾಗಲಿದೆ. ನಮ್ಮ ಸಹಕಾರ ವಲಯದ ಬೆಂಬಲ ಸರ್ಕಾರಕ್ಕೆ ಸಿಗಲಿದೆ ಎಂದು ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಶಾಸಕ ಜಿ ಟಿ ದೇವೆಗೌಡ ಹೇಳಿದ್ದಾರೆ.