ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ರಿಲೀಸ್ ಆಗಿದ್ದೂ ಆಯ್ತು. ಯಶಸ್ವಿಯಾಗಿ 50 ದಿನ ಪೂರೈಸಿದ್ದೂ ಆಗಿದೆ. ಧ್ರುವ ಅಭಿಮಾನಿಗಳು ಈ ಖುಷಿಯಲ್ಲಿರುವಾಗ್ಲೇ, ಮತ್ತೊಂದು ಸಂಭ್ರಮದ ವಿಷಯ ಹರಿದಾಡ್ತಿದೆ. ಅದು ಚಂದನ್ ಶೆಟ್ಟಿಯ ಖರಾಬು ಸಾಂಗ್.
ಪೊಗರು ಚಿತ್ರದ ಖರಾಬು ಸಾಂಗ್ ಅನ್ನ ಕಿರಿಯರಿಂದ ಹಿರಿಯರವರೆಗೂ ಕೇಳಿ ಎಂಜಾಯ್ ಮಾಡಿದ್ರು. ಇದೇ ಹಾಡು ತೆಲುಗು, ತಮಿಳಿನಲ್ಲಿ ರಿಲೀಸ್ ಆದಾಗ್ಲೂ ಅಲ್ಲಿನ ಜನರೂ ಭೇಷ್ ಅಂದಿದ್ರು. ಆದ್ರೆ, ಕನ್ನಡದಲ್ಲಿ ಈ ಹಾಡು ಬರೆದ ದಾಖಲೆ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. ಖರಾಬು ಸಾಂಗ್ ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಸಾಂಗ್. ಇದೂವರೆಗೂ ಸುಮಾರು 234 ಮಿಲಿಯನ್ ಮಂದಿ ಈ ಹಾಡನ್ನ ವೀಕ್ಷಿಸಿದ್ದಾರೆ.
ಚಂದನ್ ಶೆಟ್ಟಿ ಮೊದಲ ಬಾರಿ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದಾಗ ಕಂಪೋಸ್ ಮಾಡಿದ ಹಾಡಿದು. ಇದೇ ಹಾಡು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಒಂದು ವರ್ಷದ ಹಿಂದೆ ಈ ಹಾಡನ್ನ ರಿಲೀಸ್ ಮಾಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಖರಾಬು ಹಾಡು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ.
ಎರಡು ವರ್ಷ ಆದ್ಮೇಲೆ ಅಣ್ಣಾ ಬರ್ತವ್ನೆ.. ಇದು ಹಾಡಿಗೂ ಮುನ್ನ ಬರೋ ಡೈಲಾಗ್. ಇಲ್ಲಿಂದ ಧ್ರುವ ಎಂಟ್ರಿ ಶುರು. ಹಾಡಿನ ಉದ್ದಕ್ಕೂ ರಶ್ಮಿಕಾರನ್ನ ಧ್ರುವ ಸರ್ಜಾ ಚೇಡಿಸುತ್ತಲ್ಲೇ ಹೆಜ್ಜೆ ಹಾಕ್ತಾರೆ. ಆ್ಯಕ್ಷನ್ ಪ್ರಿನ್ಸ್ ಸ್ಟೆಪ್ಸು.. ಮ್ಯಾನರಿಸಂಗೆ ಫ್ಯಾನ್ಸ್ ಶಿಳ್ಳೆ ಹೊಡೆದಿದ್ರು. ಈಗ ಒಂದು ವರ್ಷದ ಬಳಿಕವೂ ಖರಾಬು ಸಾಂಗ್ ನಂಬರ್ 1 ಸ್ಥಾನದಲ್ಲೇ ಇದೆ.