ಟೈಟಲ್ ಕೇಳಿದ್ಕೂಡ್ಲೇ ಇದ್ಯಾವುದೋ ಪೌರಾಣಿಕ ಸಿನಿಮಾ ಅಂದ್ಕೊಳ್ಬೇಡಿ. ಇದು ಪಕ್ಕಾ ಮಾಸ್ ಸಿನಿಮಾ. ಇದ್ರಲ್ಲೂ ಆ್ಯಕ್ಷನ್ ಇರುತ್ತೆ. ಲವ್ ಸ್ಟೋರಿ ಇರುತ್ತೆ. ಸೆಂಟಿಮೆಂಟ್ ಇರುತ್ತೆ. ಹಾಗಿದ್ಮೇಲೆ ಪೌರಾಣಿಕ ಸಿನಿಮಾದ ಶೀರ್ಷಿಕೆ ಯಾಕೆ ಅನ್ನೋ ಅನುಮಾನ ಮೂಡೋದು ಸಹಜ. ಆದರೆ ಸಿನಿಮಾ ನೋಡಿದ್ಮೇಲೆ ಈ ಎಲ್ಲಾ ಗೊಂದಲಕ್ಕೂ ಉತ್ತರ ಸಿಗುತ್ತೆ.
ಶ್ರೀಕೃಷ್ಣಜನ್ಮಾಷ್ಟಮಿ ದಿನದಂದು ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಭರತ್ ವಿಷ್ಣುಕಾಂತ್ ನಿರ್ದೇಶಿಸ್ತಿರೋ ಈ ಸಿನಿಮಾಗೆ ಅನೂಪ್ ಆಂಟೋನಿ ನಿರ್ದೇಶಕರು. ಈ ಹಿಂದೆ ಕಥಾವಿಚಿತ್ರ ಹಾಗೂ ಮೆಹಬೂಬ ಚಿತ್ರಗಳನ್ನು ಅನೂಪ್ ನಿರ್ದೇಶಿಸಿದ್ದಾರೆ. ಸಂಭಾಷಣೆಯನ್ನು ಬಹದ್ದೂರ್ ಚೇತನ್ ಬರೆದಿದ್ದಾರೆ.
‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಚಿತ್ರದಲ್ಲಿ ಐದು ಹಾಡುಗಳಿವೆ. ಅರ್ಜುನ್ ಜನ್ಯ ಐದೂ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಮನುಗೌಡ ಅವರ ಸಂಕಲನ ಈ ಚಿತ್ರಕ್ಕಿದೆ. ಧ್ರುವನ್ಗೆ ಈ ಚಿತ್ರದ ಚಿತ್ರ ಮೊದಲ ಸಿನಿಮಾ. ಇವ್ರೊಂದಿಗೆ ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.