90ರ ದಶಕ ಆಗಿನ್ನೂ ಸಿನಿಮಾಗಳನ್ನ ಲಕ್ಷಗಳಲ್ಲಿ ನಿರ್ಮಾಣ ಮಾಡಿ, ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದ ಕಾಲ. ಆ ವೇಳೆ ರಾಮು ಕೋಟಿ ಸುರಿದು ಸಿನಿಮಾ ನಿರ್ಮಾಣ ಮಾಡಿದ ಅಚ್ಚರಿ ಮೂಡಿಸಿದ್ದರು. ಅದಕ್ಕೆ ಸ್ಯಾಂಡಲ್ವುಡ್ ರಾಮುಗೆ ಕೋಟಿ ನಿರ್ಮಾಪಕ ಅಂತ ಕರೆದಿದ್ರು. ಅದೇ ನಿರ್ಮಾಪಕ ಕೊರೊನಾಗೆ ಬಲಿಯಾಗಿದ್ದಾರೆ. ರಾಮು ಸಾವಿನ ಸುದ್ದಿ ಕೇಳಿ ಇಡೀ ಸ್ಯಾಂಡಲ್ವುಡ್ ಮರುಕಪಟ್ಟಿದೆ.
ರಾಮು ಕನಸಿನ ರಾಣಿ ಮಾಲಾಶ್ರೀಯನ್ನ ವಿವಾಹವಾಗಿದ್ದರು. ತಮ್ಮ ಸಂಸ್ಥೆಯ ನಿರ್ಮಾಣದಲ್ಲಿ ಪತ್ನಿಗಾಗಿ ಸಾಕಷ್ಟು ಸಿನಿಮಾ ನಿರ್ಮಿಸಿದ್ದಾರೆ. ಆದ್ರೆ, ರಾಮುವನ್ನ ಗುರುತಿಸೋದು ಲಾಕಪ್ಡೆತ್, ಎಕೆ-47, ಗೋಲಿಬಾರ್ಯಿಂದ ಶುರುವಾಗಿ ಇನ್ನೂ ರಿಲೀಸ್ ಆಗ್ಬೇಕಿರೋ ಅರ್ಜುನ್ ಗೌಡವರೆಗೂ ಸುಮಾರು 39 ಸಿನಿಮಾಗಳನ್ನ ನಿರ್ಮಿಸಿದ್ದಾರೆ. ಕನ್ನಡ ಚಿತ್ರವನ್ನ ಕೋಟಿ ಸಿನಿಮಾಗಳನ್ನ ನಿರ್ಮಿಸುವ ಮಟ್ಟಕ್ಕೆ ತಂದು ನಿಲ್ಲಿಸಿದ್ದ ನಿರ್ಮಾಪಕ ಸಿನಿಪ್ರೇಮಿಗಳನ್ನ ಹಾಗೂ ಕುಟುಂಬವನ್ನ ಬಿಟ್ಟು ಅಗಲಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗ ರಾಮು ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದ ಪ್ಯಾಷನೇಟ್ ಸಿನಿಮಾ ನಿರ್ಮಾಪಕ ರಾಮು ಸರ್ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪುನೀತ್ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಖ್ಯಾತ ನಿರ್ಮಾಪಕ, ವಿತರಕ ಶ್ರೀ ರಾಮುರವರ ಅಕಾಲಿಕ ಮರಣ ಅತೀವ ಧಿಗ್ಭ್ರಮೆ, ನೋವು ತಂದಿದೆ. ಅವರ ಪತ್ನಿ ಮಾಲಾಶ್ರೀ ಅವರ ಮಕ್ಕಳು ಹಾಗೂ ಅವರ ಕುಟುಂಬದವರಿಗೆ ಈ ನೋವು ಬರಿಸುವ ಶಕ್ತಿ ಆ ಭಗವಂತ ನೀಡಲಿ. ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು – ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ. ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ನಿಜಕ್ಕೂ ಶಾಕಿಂಗ್.. ನಂಬೋಕೆ ಆಗುತ್ತಿಲ್ಲ ಎಂದು ಗಣೇಶ್ ಟ್ವೀಟ್ ಮೂಲಕ ದು:ಖ ವ್ಯಕ್ತಪಡಿಸಿದ್ದಾರೆ.