ಮುಂದುವರೆದ ಅಧ್ಯಾಯ.. ಸ್ಯಾಂಡಲ್ವುಡ್ನ ಮತ್ತೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಡೆಡ್ಲಿ ಸೋಮ, ಎದೆಗಾರಿಕೆಯಂತಹ ಕ್ರೈಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ಆದಿತ್ಯ ಈ ಚಿತ್ರದ ಹೀರೋ. ಬಹಳ ದಿನಗಳ ಬಳಿಕ ಆದಿತ್ಯ ನಟಿಸಿರೋ ಈ ಸಿನಿಮಾದ ಈಗ ರಿಲೀಸ್ಗೆ ರೆಡಿಯಾಗಿದೆ.
ಮುಂದುವರೆದ ಅಧ್ಯಾಯ ಮಾರ್ಚ್ 18ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಗೂ ಮುನ್ನ ಟೀಸರ್ ಒಂದು ರಿಲೀಸ್ ಆಗಿತ್ತು. ಅದೇ ಟೀಸರ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಡೈಲಾಗ್ ಟೀಸರ್ಗೆ ಎಲ್ಲೆಡೆಯಿಂದ ಮೆಚ್ವುಗೆ ವ್ಯಕ್ತವಾಗಿದೆ. ಮೆಚ್ಚಿ ಹೊಗಳಿ ಕೊಂಡಾಡ್ತಿರೋ ಡೈಲಾಗ್ಗಳು ಹೇಗಿವೆ ನೋಡಿ..
“ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನ ಬೈತೀವಿ,
ನಮ್ಮನ್ನ ಕಾಯೋ ಪೊಲೀಸ್ ರನ್ನ ಬೈತೀವಿ,
ಸುದ್ದಿ ಮುಟ್ಟಿಸೋ ವಾಹಿನಿಗಳನ್ನ ಬೈತೀವಿ,
ಕಷ್ಟ ನಿವಾರಿಸೋ ಡಾಕ್ಟರ್ಗಳನ್ನ ಬೈತೀವಿ,
ಅನ್ನ ಹಾಕೋ ರೈತ, ಪಾಠ ಮಾಡೋ ಮೇಷ್ಟ್ರು,
ಊಟ ಕೊಡೊ ಹೋಟ್ಲು,
ಮನೆ ತಲುಪಿಸೋ ಡ್ರೈವರ್ ,
ನಮ್ಮನ್ನ ತಿದ್ದೋ ಕಲಾವಿದ ಹೀಗೆ…
ಎಲ್ಲರನ್ನೂ ಬೈತಿವಿ!
ಆದ್ರೆ ನಾವೂ ಇವ್ರಲ್ಲೇ ಒಬ್ಬರಾಗಿದ್ದೀವಿ ಅನ್ನೋದೇ ಮರೀತಿವಿ.”
“ಬದಲಾವಣೆ ಬಯಸುವುದಲ್ಲ.
ನಾವು ಬದಲಾಗೋದು.”
ಇವೇ ಡೈಲಾಗ್ಗಳು ಸಿನಿಪ್ರೇಮಿಗಳಿಗೆ ಕಿಕ್ ಕೊಡ್ತಿವೆ. ಈಗಾಗ್ಲೇ ಬಂದಿರೋ ಅದೆಷ್ಟೋ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆಯೇ ಮುಂದುವರೆದ ಅಧ್ಯಾಯ ಅಂತಿದೆ ಟೀಮ್.
ಬಾಲು ಚಂದ್ರಶೇಖರ್ ಚೊಚ್ಚಲ ನಿರ್ದೇಶನದ ಈ ಸಿನಿಮಾದಲ್ಲಿ ಆದಿತ್ಯ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನೂಪ್ ಸೀಳಿನ್ ಹಿನ್ನಲೆ ಸಂಗೀತ, ಜಾನಿ ನಿತಿನ್ ಸಂಗೀತ ಸಂಯೋಜನೆ ಇದೆ. ದಿಲೀಪ್ ಛಾಯಾಗ್ರಹಣದ. ಉಗ್ರಂ ಶ್ರೀಕಾಂತ್ ಸಂಕಲನವಿದೆ. ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್, ಸಂದೀಪ್ ಕುಮಾರ್, ಅಜಯ್ ರಾಜ್, ಚಂದನ ಗೌಡ, ಆಶೀಕಾ ಸೋಮಶೇಖರ್, ವಿನಯ್ ಕೃಷ್ಣಸ್ವಾಮಿ, ವಿನೋದ್ , ಶೋಭನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.