ನಿಮ್ಗೆ ಡೈಸಿ ಬೋಪಣ್ಣ ನೆನಪಿದ್ಯಾ? ರಾಮ ಶ್ಯಾಮ ಭಾಮ, ಗಾಳಿಪಟ ಮುಂತಾದ ಯಶಸ್ವೀ ಚಿತ್ರಗಳ ಮುದ್ದಾದ ನಾಯಕಿ.. ಇಂಥಾ ಡೈಸಿ ಸಡನ್ನಾಗಿ ಒಂದಿನ ಮಾಯವಾಗ್ಬಿಟ್ರು. ಏನಾಯ್ತು ಅಂತ ನೋಡಿದ್ರೆ ಮುಂಬೈ ಮೂಲದ ಅಮಿತ್ ಜಾಜು ಎನ್ನುವ ಯುವಕನನ್ನು ಮದುವೆಯಾಗಿ ಮುಂಬೈನಲ್ಲೇ ಸೆಟಲ್ ಆಗ್ಬಿಟ್ಟಿದ್ದಾರೆ ಅಂತ ಗೊತ್ತಾಯ್ತು. ಸರಿ, ಇಷ್ಟು ಸಮಯ ಆಯ್ತಲ್ಲಾ ಈಗೇನು ಮಾಡುತ್ತಿದ್ದಾರೆ ಡೈಸಿ? ಹುಡುಕಿದರೆ ಭಗವಂತನೂ ಸಿಗ್ತಾನಂತೆ.. ಡೈಸಿ ಬೋಪಣ್ಣ ಸಿಗಲ್ವಾ? ಅವ್ರೂ ಸಿಕ್ರು ನೋಡಿ….
ಡೈಸಿ ಬೋಪಣ್ಣ ಕೊಡಗಿನ ಕುವರಿ. ಕನ್ನಡದ ಅನೇಕ ಚಿತ್ರಗಳಲ್ಲಿ ಉತ್ತಮ ಅಭಿನಯ ಪ್ರದರ್ಶಿಸಿ ಅಭಿಮಾನಿಗಳನ್ನು ಗಳಿಸಿದಾಕೆ. ಬಾಲಿವುಡ್-ಹಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾಳ ಮಾಜಿ ಮ್ಯಾನೇಜರ್ ಪ್ರಕಾಶ್ ಜಾಜು ಪುತ್ರ ಅಮಿತ್ ಜಾಜುರನ್ನು ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಬರೀ ಇಷ್ಟೇ ಅಲ್ಲ, ಡೈಸಿ ಈಗ ಬಹುಬೇಡಿಕೆಯ ಫೊಟೊಗ್ರಫರ್ ಆಗಿದ್ದಾರೆ. ಕ್ಯಾಮೆರಾ ಮುಂದಿದ್ದ ಚೆಲುವೆ ಈಗ ಕ್ಯಾಮೆರಾ ಹಿಂದೆ ತನ್ನ ಕೈಚಳಕ ತೋರಿಸುತ್ತಿದ್ದಾರೆ.
ಆದ್ರೆ ಕನ್ನಡದ ಅವರ ಅಭಿಮಾನಿಗಳಿಗೆ ಆಶ್ಚರ್ಯ ಆಗೋದು ಡೈಸಿ ಪೋಪಣ್ಣ ತಮ್ಮ ಹೆಸರನ್ನು ಡೈಸಿ ನಾಯ್ಡು ಎಂದು ಹೇಳಿರುವ ಬಗ್ಗೆ, ಯಾಕೆಂದರೆ ಇದು ನಮಗೆ ಸ್ವಲ್ಪ ಹೊಸತು. ಡೈಸಿ ನಾಯ್ಡು ಫೊಟೊಗ್ರಫಿ ಎನ್ನುವ ಇನ್ಸ್ಟಾ ಪೇಜ್ ನೋಡಿದ್ರೆ ಡೈಸಿಯ ಕ್ಯಾಮೆರಾ ಕೈಚಳಕದ ಅದ್ಭುತ ಪರಿಚಯ ಆಗುತ್ತೆ. ಪೋರ್ಟ್ ಫೊಲಿಯೋ, ಮೆಟರ್ನಿಟಿ ಶೂಟ್, ನ್ಯೂ ಬಾರ್ನ್ ಬೇಬಿ ಶೂಟ್ ಸೇರಿದಂತೆ ನಾನಾ ಬಗೆಯ ಫೋಟೊ ಶೂಟ್ ಮಾಡಿಕೊಡ್ತೀನಿ ಎಂದು ತಮ್ಮ ವೆಬ್ ಸೈಟಿನಲ್ಲೂ ಬರೆದುಕೊಂಡಿದ್ದಾರೆ ಈಕೆ. ಇದರ ಜೊತೆಗೆ ಪತಿ, ಸ್ನೇಹಿತರ ಜೊತೆಗೆ ನೆಮ್ಮದಿಯಾಗಿ ದೇಶ ಸುತ್ತಿಕೊಂಡು, ಬೈಕ್ ರೈಡ್ ಮಾಡ್ಕೊಂಡು ಖುಷಿಯಾಗಿದ್ದಾರೆ. ಬೋಪಣ್ಣನೋ ನಾಯ್ಡುನೋ ಒಟ್ನಲ್ಲಿ ಪ್ರತಿಭಾವಂತ ಸುಂದರಿ ಡೈಸಿ ಸಂತೋಷದಿಂದಿದ್ದಾರೆ.
ಆದ್ರೆ, ಇಲ್ಲಿನ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸೋ ವಿಷಯ ಏನಪ್ಪಾ ಅಂದ್ರೆ, ತಮ್ಮ ಪ್ರೊಪೈಲ್ನಲ್ಲಿ ತನ್ನ ಮೂಲ ಮುಂಬೈ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಕೊಡಗಿನ ಕುವರಿ ಕರ್ನಾಟಕ, ಕೊಡಗುವನ್ನೇ ಮರೆತುಬಿಟ್ರಾ? ಅಸಲಿಗೆ ಹೀಗ್ಯಾಗೆ ಬರೆದುಕೊಂಡಿದ್ದಾರೆ ಅನ್ನೋದು ಗೊಂದಲ ಅಂತೂ ಇದ್ದೇ ಇದೆ.