ಸ್ಯಾಂಡಲ್ವುಡ್ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಜೋಗಿ ಪ್ರೇಮ್ ಪೊಗರು ನಾಯಕ ಧ್ರುವ ಸರ್ಜಾಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತು ಕೇಳಿಬರ್ತಿದೆ. ಪ್ರೇಮ್ ಏಕಲವ್ಯ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಿನಿಮಾ ಮಾಡ್ತಾರೆ ಅನ್ನೋ ಮಾತು ಕೂಡ ಹರಿದಾಡಿತ್ತು. ಆದ್ರೀಗ ಧ್ರುವ ಸರ್ಜಾ-ಪ್ರೇಮ್ ಕಾಂಬಿನೇಷನ್ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದೆ.
ಪ್ರೇಮ್ ಪಕ್ಕಾ ಕಮರ್ಷಿಯಲ್.. ಧ್ರುವ ಅಂದ್ರೆ ಪಕ್ಕಾ ಮಾಸ್. ಇಬ್ಬರೂ ಸೇರಿದ್ದಾರೆ ಅಂದ್ಮೇಲೆ ಮಾಸ್-ಕಮರ್ಷಿಯಲ್ ಸಿನಿಮಾ ತೆರೆಮೇಲೆ ಮೂಡೋದು ಖಚಿತ. ಈಗಾಗ್ಲೇ ಇವರಿಬ್ಬರ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಒಂದ್ವೇಳೆ ಇಬ್ಬರೂ ಸಿನಿಮಾ ಮಾಡಲು ಮುಂದಾದ್ರೆ, ದೊಡ್ಡ ನಿರ್ಮಾಣ ಸಂಸ್ಥೆಯೇ ಬಂಡವಾಳ ಹೂಡಲಿದೆ ಅನ್ನೋ ಮಾತು ಕನ್ನಡ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ಪ್ರೇಮ್ ಸದ್ಯ ಏಕಲವ್ಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ಪತ್ನಿ ರಕ್ಷಿತಾ ಸಹೋದರ ರಾಣಾನನ್ನು ತೆರೆಮೇಲೆ ಪರಿಚಯಿಸೋ ಜವಾಬ್ದಾರಿ ಪ್ರೇಮ್ ಮೇಲಿದೆ. ಇನ್ನೊಂದ್ಕಡೆ ಧ್ರುವ ಕೂಡ ಅದ್ಧೂರಿ ನಿರ್ದೇಶಕ ಎಪಿ ಅರ್ಜುನ್ ಜೊತೆ ಕೈ ಜೋಡಿಸಿದ್ದು, ಆಗಸ್ಟ್ 15ರಂದು ಸಿನಿಮಾ ಸೆಟ್ಟೇರಲಿದೆ ಅನ್ನೋ ಸುದ್ದಿಯಿದೆ. ಇಬ್ಬರೂ ತಮ್ಮ ಕಮಿಟ್ಮೆಂಟ್ಗಳನ್ನು ಮುಗಿಸಿದ ಬಳಿಕ ಬಹುನಿರೀಕ್ಷಿತ ಪ್ರೇಮ್- ಧ್ರುವ ಕಾಂಬಿನೇಷನ್ ಚಿತ್ರ ಸೆಟ್ಟೇರಲಿದೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಪ್ರೇಮ್-ಧ್ರುವ ಇಬ್ಬರೂ ಅಧಿಕೃತ ಹೇಳಿಕೆ ನೀಡಿಲ್ಲ.
ಏಕಲವ್ಯ ಬಳಿಕ ಪ್ರೇಮ್, ದರ್ಶನ್ಗಾಗಿ ಹೆಣೆದಿದ್ದರು. ಅವರಿಗೆ ನಿರ್ದೇಶನ ಮಾಡಲು ಮುಂದಾಗಿದ್ದರು ಅನ್ನೋ ಕೇಳಿಬಂದಿತ್ತು. ಆದರೆ ದರ್ಶನ್, ಪ್ರೇಮ್ರನ್ನು ಪುಡಾಂಗ್ ಎಂದು ಕರೆದಿದ್ದು ಇಬ್ಬರ ನಡುವಿನ ಮುನಿಸಿಗೆ ಕಾರಣವಾಗಿತ್ತು. ಹೀಗಾಗಿ ದರ್ಶನ್ ಜೊತೆ ಸಿನಿಮಾ ಮಾಡೋದನ್ನು ಬಿಟ್ಟು ಧ್ರುವಗೆ ಆಕ್ಷನ್ ಕಟ್ ಹೇಳೋಕೆ ಸಜ್ಜಾಗಿದ್ದಾರೆ ಅಂತ ಗಾಂಧಿನಗರದಲ್ಲಿ ಗುಸು ಗುಸು ಹಬ್ಬಿದೆ.