ಬಿಗ್ ಬಾಸ್ ಅಂದ್ರೆ ಎಂಟರ್ಟೈನ್ಮೆಂಟ್… ಎಂಟರ್ಟೈನ್ಮೆಂಟ್.. ಎಂಟರ್ಟೈನ್ಮೆಂಟ್.. ಆಟ, ಕಿತ್ತಾಟ, ಪರ-ವಿರೋಧ, ಕೋಪ-ಪ್ರೀತಿ ಇವೆಲ್ಲವೂ ಕಾಮನ್ ಆಗಿ ಇದ್ದೇ ಇರುತ್ತೆ. ಇದೇ ಕಾರಣಕ್ಕೆ ಕನ್ನಡಿಗರು ಒಂದೂವರೆ ಗಂಟೆಗಳ ಕಾಲ ಟಿವಿ ಮುಂದೆ ಕೂತುಬಿಡ್ತಾರೆ. ಆದ್ರೆ, ಈ ಬಾರಿ ಬಿಗ್ ಬಾಸ್ ಕೊವಿಡ್ ಕಾರಣದಿಂದಾಗಿ ಅರ್ಥಕ್ಕೆ ನಿಂತು ಹೋಗಿದೆ. ಆದ್ರೆ, ಮಲಯಾಳಂನಲ್ಲಿ ಮಾತ್ರ ಬಿಗ್ ಬಾಸ್ ಇನ್ನೂ ಮುಂದುವರೆದಿದೆ.
ಕೊರೊನಾ, ಲಾಕ್ಡೌನ್ ಅಂತ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ನಿಂತೋಗಿದೆ. ಸ್ಪರ್ಧಿಗಳೆಲ್ಲಾ ಈಗಾಗ್ಲೇ ತಮ್ಮ ಮನೆ ಸೇರಿದ್ದಾರೆ. ಲಾಕ್ಡೌನ್ ವೇಳೆ ಮನೆಯಲ್ಲಿದ್ದ ಜನರಿಗೆ ಮನರಂಜನೆ ನೀಡುತ್ತಿದ್ದ ಬಿಗ್ ಬಾಸ್ ಬದಲಿಗೆ ಏನ್ ನೋಡೋದು ಅನ್ನೋ ಗೊಂದಲದಲ್ಲಿದ್ದಾರೆ. ಸುರಕ್ಷತೆ ಕಾರಣದಿಂದ ಕನ್ನಡ ಬಿಗ್ ಬಾಸ್ ನಿಂತಿದ್ರೆ, ಮಲಯಾಳಂನಲ್ಲಿ 100 ಮುಗಿದಿದ್ರೂ, ಮತ್ತೂ ಎರಡು ವಾರ ವಿಸ್ತರಣೆ ಮಾಡಲಾಗಿದೆ.
ಮಲಯಾಳಂ ಬಿಗ್ ಬಾಸ್ ಸೂಪರ್ ಸ್ಟಾರ್ ರಿಯಾಲಿಟಿ ಶೋ.. ಮೋಹನ್ ಲಾಲ್ ನಿರೂಪಣೆ ಮಾಡ್ತಿರೋದ್ರಿಂದ ಬಿಗ್ ಬಾಸ್ ನೋಡುವವರ ಸಂಖ್ಯೆ ದೊಡ್ಡದೇ ಇದೆ. ಮಲಯಾಳಂ ಬಿಗ್ ಬಾಸ್ ಅನ್ನು 100 ದಿನಗಳ ರಿಯಾಲಿಟಿ ಶೋ ಎಂದು ಹೇಳಲಾಗಿತ್ತು. ಆದ್ರೀಗ ಮತ್ತೆರಡು ವಾರ ವಿಸ್ತರಣೆ ಮಾಡಲಾಗಿದೆಯೆಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ಹೇಳಿದೆ.
ಮಲಯಾಳಂನ ಬಿಗ್ ಬಾಸ್ ಮೂರನೇ ಆವೃತ್ತಿ ಮೇ ಕೊನೆವಾರದಲ್ಲಿ ಮುಗಿಯಬೇಕಿತ್ತು. ಆದ್ರೀಗ ಜೂನ್ ತಿಂಗಳಲ್ಲಿ ಫಿನಾಲೆ ಶುರುವಾಗಲಿದೆ. ಅಂದ್ಹಾಗೆ, ಬಿಗ್ಬಾಸ್ ಮನೆಯಲ್ಲಿದ್ದ ಹದಿನಾಲ್ಕು ಸ್ಪರ್ಧಿಗಳ ಪೈಕಿ ಎಲಿಮಿನೇಷನ್ ಪ್ರಕ್ರಿಯೆ ನಡೆದು 9 ಮಂದಿ ಮನೆಯಲ್ಲಿ ಉಳಿದುಕೊಂಡಿದ್ದಾರೆ.