– ರೇವನ್ ಪಿ.ಜೇವೂರ್
ಒಂದು ಸುಂದರ ದಿನ.. ಆ ದಿನ.. ಆ ಹುಡ್ಗಿ ತಯಾರ್ ಆಗೋಕೆ ತುಂಬಾ ಟೈಮ್ ತೆಗೆದುಕೊಂಡಿದ್ದು ಯಾರಿಗೂ ಬೇಸರ ತರಿಸಲಿಲ್ಲ.. ಕಾರಣ ಆ ದಿನ ಇದದ್ದು ಒಂದ್ ಪೋಟೋ ಶೂಟ್.. ಫೋಟೋ ಶೂಟ್ ಅದ್ಮೇಲೆ ಟೈಮ್ ಬೇಕೆ ಬೇಕು ಅಲ್ವಾ? ಆ ನಟಿ ಕೂಡ ಅದನ್ನೇ ಮಾಡಿದ್ದರು. ಒಂದಷ್ಟು ಗಂಟೆಗಳು ಕಳೆದಿರಬಹುದು. ಅಲ್ಲಿ ಬೇರೆ ಲೋಕವೇ ಮೈದಳೆದಿತ್ತು.. ಲೈಫ್ ಇನ್ ಲೈಟ್ ಅನ್ನೋ ಥರವೇ ಅಲ್ಲಿ ಹೊಸ ಬೆಳಕು ಮೂಡಿತ್ತು. ಅದನ್ನ ಕಂಡ್ರೆ ಎಂತಹ ಕಲ್ಲು ಹೃದಯದಲ್ಲೂ ಹೊಸ ಬೆಳಕು ಮೂಡ್ಬೇಕು. ಅಂತಹ ಕ್ಷಣ ಅದು..
ಅಲ್ಲಿ ಆ ಕ್ಷಣ ರೆಡಿ ಆದದ್ದು ಮಾತ್ರ ಒಂದ್ ವೆಸ್ಟರ್ನ್ ಲೋಕ. ಎಲ್ಲಡೆ ಕೆಂಪು ಬಣ್ಣ. ಎಲ್ಲಡೆ ಬಂಗಾರ ಬಣ್ಣದ ಹೊಳಪು. ಅದು ಒಂದು ಸುಂದರ ಜಾಗವೇ ಆಗಿ ಹೋಗಿತ್ತು. ಅಷ್ಟು ಚೆಂದದ ಪ್ಲೇಸ್ ಅಲ್ಲಿ ಇಂಗ್ಲಿಷ್ ಹುಡ್ಗಿಯರು ತೊಡೋ ಬಟ್ಟೆ ಧರಿಸಿ ಪೋಜ್ ಕೊಟ್ಟೇ ಬಿಟ್ಟರು ಕನ್ನಡದ ಹುಡ್ಗಿ.. ಅವರೇ ಮೇಘನಾ ಗಾಂವ್ಕರ್. ಮೇಘನಾ ಗಾಂವ್ಕರ್ ಕನ್ನಡದ ಹುಡ್ಗಿ ಅನ್ನೋದೇ ವಿಶೇಷ. ಅದರಲ್ಲೂ ಇವರ ಮೂಲ ಉತ್ತರ ಕರ್ನಾಟಕದಲ್ಲಿಯೇ ಇದೆ ಅನ್ನೋದೂ ಕೂಡ ಈ ಕಡೆ ಮಂದಿಗೆ ಹೆಮ್ಮೆ ತರೋ ವಿಚಾರ. ಅದು ಬಿಡಿ ಈಗ ಈ ಫೋಟೋ ಶೂಟ್ಗೆ ವಾಪಾಸ್ ಬರೋಣ. ಮೇಘನಾ ಇಲ್ಲಿ ಇಂಗ್ಲಿಷ್ ಚಿತ್ರದ ಹಾಟ್ ಹೀರೋಯಿನ್ ಹಾಗೆ ಪೋಜ್ ಕೊಟ್ಟಿದ್ದಾರೆ. ಹಾಟೆಸ್ಟ್ ಅನ್ನೋ ಮಟ್ಟಿಗೆ ಹಾವ-ಭಾವಗಗಳನ್ನು ಪ್ರದರ್ಶಿಸಿ, ಕ್ಯಾಮೆರಾ ಕಣ್ಣೂ ಕೂಡ ಫುಲ್ ಗರಂ ಆಗೋ ಥರವೇ ಮೈಮಾಟ ಬಳುಕಿಸಿದ್ದಾರೆ. ಇಂಗ್ಲಿಷ್ ಶೈಲಿ ಅಂದ್ರೆ ಹಂಗೇ ಅಲ್ವೇ..?
ಮೇಘನಾ ಇಲ್ಲಿ ಹತ್ತು ಹಲವು ಪೋಸ್ಗಳನ್ನ ಕೊಟ್ಟಿದ್ದಾರೆ. ಒಂದಕ್ಕಿಂತ ಒಂದು ಇಲ್ಲಿ ನಿಮ್ಮಲ್ಲಿ ಬೇರೆ ಭಾವನೆಯನ್ನೇ ಮೂಡಿಸುತ್ತವೆ. ಹಾಟ್ ಫೋಟೋ ಶೂಟ್ನ ತರೀಕಾ ಅದೇ ಅನ್ನೋ ಸತ್ಯ ಎಲ್ಲರಿಗೂ ಗೊತ್ತಿರೋ ಸತ್ಯವೇ. ಆದರೆ, ಮೇಘನಾ ಈ ವಸ್ಟರ್ನ್ ಗೆಟಪ್ನ ಪೋಟೋ ಶೂಟ್ ಅಲ್ಲದೇ ಇಂಡಿಯನ್ ಗೆಟಪ್ ಅಲ್ಲೂ ಕಾಣಿಸಿಕೊಂಡಿದ್ದಾರೆ. ಅದೂ ಕೂಡ ನಿಜಕ್ಕೂ ಖುಷಿ ಕೊಡೋ ಹಾಗೇನೆ ಇದೆ. ಅದನ್ನ ನೋಡಿದಾಕ್ಷಣ ನಮ್ಮನೆ ಹೆಣ್ಮಗಳು ಅನ್ನೋ ಫೀಲ್ ಬರುತ್ತದೆ. ಇಂಡಿಯನ್ ವೇರ್ನ ಈ ರೂಪದಲ್ಲಿ ಬ್ಯಾಗ್ ಗ್ರೌಂಡ್ ಅಲ್ಲಿ ನೀಲಿ ಬಣ್ಣ ಹಳೇ ಕಾರ್ ಇದೆ. ಹಳೇ ಕಾರು ಹೊಸ ಪೋಸು.. ಸೂಪರ್ ಸ್ಮೈಲ್ ಅಂದ್ರೆ, ಸ್ವತ: ಮೇಘನಾಗೂ ಸಂತೋಷ ಆಗುತ್ತದೆ. ವಿವಿಧ ಸುಂದರ ಭಾವಗಳಲ್ಲಿಯೇ ಮೇಘನಾ ಪೋಜ್ ಕೊಟ್ಟು ದಿಲ್ ಖುಷ್ ಆಗಿದ್ದಾರೆ.
ಆದರೆ, ಇಷ್ಟೆಲ್ಲ ಪೋಟೋಗಳನ್ನ ಪೋಸ್ಗಳನ್ನ ಕಂಡು ಮೈಮನ ತಣಿಸಿಕೊಂಡಿರೋ ನಿಮ್ಮ ಮನದ ಮೂಲೆಯಲ್ಲಿ ಒಂದ್ ಪ್ರಶ್ನೆ ಮೂಡುತ್ತಲೇ ಇದೆ.. ಹೌದು..? ಯಾಕ್ ಈ ಪೋಟೋ ಶೂಟ್ ಅಂತ ಕೇಳಿ ಕೊಳ್ಳೋರಿಗೆ ಉತ್ತರ ಸಿಂಪಲ್ ಆಗಿಯೇ ಇದೆ. ಮೇಘನಾ ಗಾಂವ್ಕರ್ ಹೇಳೋವಂತೆ ಇದು ಒಂದು ಕ್ಯಾಸೂವಲ್ ಶೂಟ್ ಸಿನಿಮಾಗಾಗಿ ಅಲ್ವೇ ಅಲ್ಲ ಅಂತ ಹೇಳಿಕೊಂಡಿದ್ದಾರೆ. ಮೇಘನಾ ಗಾಂವ್ಕರ್ ಈ ಕ್ಯಾಸೂವಲ್ ಶೂಟ್ ಹಿಂದೆ ಪ್ರತಿಭಾನ್ವಿತ ತಂಡವೇ ಇದೆ. ನಿಮ್ಗೆ ಗೊತ್ತಿರಲಿ, ಈ ಪೋಟೋ ಶೂಟ್ ಮಾಡಿದ ಆ ಮಾಂತ್ರಿಕ ನವೀನ್ ಕೃಷ್ಣ ಬ್ರದರ್, ನಿತಿಲ್ ಕೃಷ್ಣ. ಮೇಘನಾರನ್ನ ಅದ್ಬುತವಾಗಿಯೇ. ರೋಮಾಂಚನವಾಗೋ ಹಾಗೇನೆ ಸೆರೆ ಹಿಡಿದು ಬಿಟ್ಟಿದ್ದಾರೆ.
ಮೇಘನಾ ಮೇಕ್ ಅಪ್ ಚೆಲುವಿನ ಹಿಂದೆ ಪನ್ನಾ ಪೂರ್ಣಿಮಾ ಇದ್ದಾರೆ. ಸ್ಟೈಲ್ ಅಂತ ಬಂದ್ರೆ, ಸಚಿನಾ ಹೆಗ್ಗರ್ ಆ ಕೆಲಸ ಮಾಡಿದ್ದಾರೆ. ಈ ಎಲ್ಲ ಒಂದೇ ಮನಸ್ಸಿನ ಶ್ರಮ ಜೀವಿಗಳ ಫಲವೇ. ಧರೆ ಮೇಲಿನ ನಕ್ಷತ್ರದ ಹಾಗೆ. ಅದನ್ನ ಮತ್ತೆ ಮತ್ತೆ ನೋಡ್ಬೇಕು ಅಂದ್ರೆ.. ಮೇಘನಾ ಪೋಟೋಗಳು ನಿಮ್ಗೆ ಖಂಡಿತಾ ಹೆಲ್ಪ್ ಮಾಡುತ್ತೆ ನೋಡ್ತಾಯಿರಿ.
ಅಂದ್ಹಾಗೆ, ಮೇಘನಾ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಒಳ್ಳೆ ಹೆಸರು ತಂದು ಕೊಟ್ಟಿದೆ. ನೆನಪಿರಲಿ ಪ್ರೇಮ್ ಜೊತೆಗಿನ ಚಾರ್ಮಿನಾರ್ ಕೂಡ ಮೇಘನಾ ಹೆಸರು ನೆನಪಿಡೋ ಥರವೇ ಮಾಡಿದೆ. ವಿ.ನಾಗೇಂದ್ರ ಪ್ರಸಾದ್ ಅವರ ವಿನಾಯಕ ಗೆಳೆಯರ ಬಳಗ ಬೇರೆ ಫೀಲ್ ಕೊಟ್ಟ ಸಿನಿಮಾ. ಅದರ ಹಿಂದಿನ ಸಿನಿಮಾಗಳು ಅಷ್ಟಕಷ್ಟೆ. ಆದರೆ, ಮುಂದೆ ಬರೋ ಒಂದಷ್ಟು ಪ್ರಾಜೆಕ್ಟ್ಗಳು ಮೇಘನಾರಲ್ಲಿ ಹೊಸ ಹುಮ್ಮಸು ಮೂಡಿಸಿವೆ. ವೇಟ್ ಮಾಡಿ..