ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರೋ ಚಂದನ್ ಹಾಗೂ ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ ಜೋಡಿ ಚಂದನ್ ಹಾಗೂ ಕವಿತಾ ಗೌಡ ಮೇ 14 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಂದನ್ ಹಾಗೂ ಕವಿತಾಗೌಡ ಏಪ್ರಿಲ್ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೇ 14ರಂದು ಲಾಕ್ಡೌನ್ ನಿಯಮಗಳ ಅನ್ವಯ ಕೇವಲ 40 ಮಂದಿಯ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದನ್ ಹಾಗೂ ಕವಿತಾ ಗೆಳೆಯರಾಗಿ, ಪ್ರೇಮಿಗಳಾಗಿದ್ರು. ಈಗ ಇಬ್ಬರೂ ಮನೆಯವ್ರನ್ನು ಒಪ್ಪಿಸಿ ಸಪ್ತಪದಿ ತುಳಿದಿದ್ದಾರೆ. ಕನ್ನಡದ ಸೂಪರ್ ಹಿಟ್ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ರು. ಅಲ್ಲಿಂದ ಇಬ್ಬರಲ್ಲಿ ಸ್ನೇಹಿತ ಬೆಳೆದು ನಂತರ ಪ್ರೀತಿ ಚಿಗುರಿತ್ತು. ಆದ್ರೆ, ಈ ವಿಷಯವನ್ನೂ ಎಲ್ಲೂ ಬಹಿರಂಗ ಪಡಿಸಿರಲಿಲ್ಲ.
ಚಂದನ್ ಕನ್ನಡದ ಧಾರಾವಾಹಿಗಳ ಜೊತೆ ಜೊತೆಗೆ ತೆಲುಗು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಸಾವಿತ್ರಮ್ಮಗಾರಿ ಅಬ್ಬಾಯಿ ಅನ್ನೋ ಧಾರಾವಾಹಿಯ ಸುಮಾರು 500 ಕಂತುಗಳಲ್ಲಿ ನಟಿಸಿದ್ದಾರೆ. ವಿವಾಹ ಹಾಗೂ ಫ್ಯಾಮಿಲಿಗೆ ಸಮಯ ನೀಡುವ ದೃಷ್ಟಿಯಿಂದ ತೆಲುಗು ಧಾರಾವಾಹಿಯಿಂದ ಹೊರಬಂದಿದ್ದಾರೆ.
ಕಿರುತೆರೆಯ ಜೊತೆಗೆ ಬೆಳ್ಳಿಪರದೆ ಮೇಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ರು, ಅರ್ಜುನ್ ಸರ್ಜಾ ನಿರ್ದೇಶಿಸಿದ ಪ್ರೇಮ ಬರಹ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆದ್ರೆ, ಈ ಚಿತ್ರ ಬಾಕ್ಸಾಫೀಸ್ನಲ್ಲಿ ಅಂದ್ಕೊಂಡಷ್ಟು ಸದ್ದು ಮಾಡಿಲ್ಲ. ಕವಿತಾ ಗೌಡ ಕೂಡ ಬಿಗ್ ಬಾಸ್ ಬಳಿಕ ಕನ್ನಡಗರ ಮನೆಮನೆಯಲ್ಲೂ ಹೆಸರು ಮಾಡಿದ್ದಾರೆ.