ಸ್ಯಾಂಡಲ್ವುಡ್ನ ಕನಸುಗಾರ ರವಿಚಂದ್ರನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 60ನೇ ವರ್ಷಕ್ಕೆ ಕಾಲಿಟ್ಟಿರೋ ಕ್ರೇಜಿಸ್ಟಾರ್ ತನ್ನ ಹೊಸ ಕನಸುಗಳನ್ನು ಅಭಿಮಾನಿಗಳಿಗೆ ತಲುಪಿಸೋಕೆ ಸಜ್ಜಾಗಿದ್ದಾರೆ. ಅವ್ರ ಹುಟ್ಟುಹಬ್ಬದಂದು ಹೊಸ ಸಿನಿಮಾಗಳ ಬಗ್ಗೆ ಅವರೇ ಅಪ್ಡೇಟ್ ಕೊಡಲಿದ್ದಾರೆ. ಹುಟ್ಟುಹಬ್ಬದಂದು ರವಿಚಂದ್ರನ್ ಅಭಿಮಾನಿಗಳು ಸಂಭ್ರಮದಿಂದ ಇರುತ್ತಿದ್ರು. ಆದ್ರೆ, ಲಾಕ್ಡೌನ್ನಿಂದಾಗಿ ರವಿಮಾಮಾನ ಬರ್ತ್ಡೇ ಆಚರಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲೇ ಶುಭಾಶಯ ಕೋರಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಕೊಡ್ತಿರೊ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲಿದ್ದಾರೆ. ನಟನೆಯ ಜೊತೆ ನಿರ್ದೇಶನಕ್ಕೂ ಕೈ ಹಾಕಿರೋ ಕ್ರೇಜಿಸ್ಟಾರ್ ರಾಜೇಂದ್ರ ಭೋಪಣ್ಣ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಳಿಕ ಗಾಢ್, 60 ಹಾಗೂ ಬ್ಯಾಡ್ಬಾಯ್ಸ್ ಈ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಮಾಡಿ ಸುಳಿವು ನೀಡಿದ್ದಾರೆ.
ಕ್ರೇಜಿ ಹುಟ್ಟುಹಬ್ಬದ ಪ್ರಯುಕ್ತ ಬಿಎಂ ಗಿರಿರಾಜ್ ನಿರ್ದೇಶನದ ಕನ್ನಡಿಗ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಗಿರಿರಾಜ್ ಇಷ್ಟೋತ್ತಿಗಾಗ್ಲೇ ಸಿನಿಮಾ ಬಿಡುಗಡೆ ಮಾಡ್ಬೇಕಿತ್ತು. ಆದ್ರೆ, ಲಾಕ್ಡೌನ್ ಕೊರೊನಾದಿಂದಾಗಿ ಅದು ಸಾಧ್ಯವಾಗಿಲ್ಲ. ಹೀಗಾಗಿ ರವಿಚಂದ್ರನ್ ಹುಟ್ಟುಹಬ್ಬಕ್ಕೆ ಮೊದಲ ಟೀಸರ್ ಬಿಡುಗಡೆ ಮಾಡಲಿದ್ದಾರೆ.