ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ವಿಕ್ರಾಂತ್ ರೋಣ. ಕಳೆದ ವರ್ಷ ಲಾಕ್ಡೌನ್ನಿಂದ ಕೊಂಚ ರಿಲೀಫ್ ಸಿಕ್ತಿದಂತೆ ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಿ ಮುಗಿಸಿದೆ ಚಿತ್ರತಂಡ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣ ಅನ್ನೋ ಪವರ್ ಫುಲ್ ಪೊಲೀಸ್ ಆಫೀಸರ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಪೋಸ್ಟರ್ಸ್, ಸಣ್ಣ ಸಣ್ಣ ಟೀಸರ್ ನಿಂದ ಸಿನಿಮಾ ಇನ್ನಿಲ್ಲದ ಕುತೂಹಲ ಮೂಡಿಸಿದೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೀಸರ್ ಲಾಂಚ್ ಮಾಡಿ ಭಾರೀ ಸೌಂಡ್ ಮಾಡಿದ್ದ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗಪ್ಪಳಿಸ್ತಿದೆ. ಇವತ್ತು ನಟ ರವಿಶಂಕರ್ ಗೌಡ ವಿಕ್ರಾಂತ್ ರೋಣ ಸಿನಿಮಾ ನೋಡಿ ಹುಬ್ಬೇರಿಸಿದ್ದಾರೆ.
ಲಾಕ್ಡೌನ್ ಆಗಿ ಥಿಯೇಟರ್ ಬಂದ್ ಆಗಿದೆ. ಇಂತಹ ಹೊತ್ತಲ್ಲಿ ರವಿಶಂಕರ್ ವಿಕ್ರಾಂತ್ ರೋಣ ಸಿನಿಮಾ ಹೆಂಗೆ ನೋಡಿದ್ರು, ಅನ್ನೋ ಅನುಮಾನ ಮೂಡೋದು ಸಹಜ. ವಿಷಯ ಇಷ್ಟೇ ರವಿಶಂಕರ್ ಕೂಡ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಪಾತ್ರಕ್ಕೆ ಡಬ್ ಮಾಡುವಾಗ ಇಡೀ ಸಿನಿಮಾ ನೋಡಿ ಶಾಕ್ ಆಗಿದ್ದಾರೆ. ಅನೂಪ್ ಭಂಡಾರಿ ಮೇಕಿಂಗ್, ಸುದೀಪ್ ಪರ್ಫಾರ್ಮೆನ್ಸ್ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ರವಿಶಂಕರ್ ಬರೆದುಕೊಂಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
‘ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ, ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರ, Flushed face, ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲಾ. ಹೊಸ ಕಲಾವಿದರದು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಸಾರ್” ಅಂತ ರವಿಶಂಕರ್ ಗೌಡ ಟ್ವೀಟ್ ಮಾಡಿದ್ದಾರೆ. ಆಗಸ್ಟ್ 19ಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ವಿಕ್ರಾಂತ್ ರೋಣ ರಿಲೀಸ್ ಪ್ಲ್ಯಾನ್ ನಡೀತಿದೆ. ಕೊರೊನಾ ಲಾಕ್ಡೌನ್ ನಡುವೆ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ನೋಡಬೇಕು.