ಕೊರೊನಾ ಈಗ ಎಲ್ಲರನ್ನೂ ಮನೆಯಲ್ಲೇ ಸುಮ್ಮನೆ ಕೂರುವಂತೆ ಮಾಡಿದೆ. ಅದ್ರಲ್ಲಿ ಕನ್ನಡದ ಕಲಾವಿದರೂ ಹೊರತಾಗಿಲ್ಲ. ಎರಡನೇ ಅಲೆಯಿಂದ ಶೂಟಿಂಗ್ಗೆ ಬ್ರೇಕ್ ಬಿದ್ದಿರೋದ್ರಿಂದ ಕನ್ನಡದ ನಟರೆಲ್ಲ ಬೇರೆನೇನೋ ಕೆಲಸಕ್ಕೆ ಮುಂದಾಗಿದ್ದಾರೆ. ಅದ್ರಲ್ಲೂ ಸ್ಯಾಂಡಲ್ವುಡ್ನ ಬ್ಯುಸಿ ಹಾಸ್ಯನಟ ಚಿಕ್ಕಣ್ಣ ತಮ್ಮ ಹಳೆ ಕೆಲಸಕ್ಕೆ ಮರಳಿದ್ದಾರೆ.
ಸಿನಿಮಾಗಳ ಶೂಟಿಂಗ್ ನಿಂತಿರೋದ್ರಿಂದ ಚಿಕ್ಕಣ್ಣ ಮೈಸೂರಿನ ಸಮೀಪ ಖರೀದಿಸಿರೋ ಫಾರ್ಮ್ ಹೌಸ್ನಲ್ಲಿ ಸೆಟೆಲ್ ಆಗಿದ್ದಾರೆ. ತೋಟದ ಮನೆಯಲ್ಲಿ ಹೊಸ ಮನೆಯೊಂದನ್ನ ಕಟ್ತಿರೋ ಚಿಕ್ಕಣ್ಣ, ಫ್ರೀ ಇರೋದ್ರಿಂದ ತಾವೇ ಗಾರೆ ಕೆಲಸ ಮಾಡೋಕೆ ಮುಂದಾಗಿದ್ದಾರೆ. ಸದ್ಯ ಚಿಕ್ಕಣ್ಣ ಗಾರೆ ಕೆಲಸ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ
.
ಚಿಕ್ಕಣ್ಣ ಸಿನಿಮಾಗಳಲ್ಲಿ ನಟಿಸೋಕೂ ಮುನ್ನ ಅವ್ರ ಹುಟ್ಟೂರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ರು. ಮೇಸ್ತ್ರಿಯ ಕೈ ಕೆಳಗೆ ದಿನಗೂಲಿಯಾಗಿ ದುಡಿಯುತ್ತಿದ್ದ ಚಿಕ್ಕಣ್ಣ, ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ರು. ಕಾಮಿಡಿ ಕಿಲಾಡಿಗಳು ಅಂತಹ ರಿಯಾಲಿಟಿ ಶೋಗಳಲ್ಲಿ ನಟಿಸಿ ಹೆಸರು ಮಾಡಿದ ಬಳಿಕ ಸಿನಿಮಾದಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡ್ರು.
ಚಿಕ್ಕಣ್ಣ ಈಗ ಸ್ಯಾಂಡಲ್ವುಡ್ನ ಎಷ್ಟೇ ದೊಡ್ಡ ನಟನಾಗಿದ್ರೂ, ತನ್ನ ಹಳೆ ವೃತ್ತಿಯನ್ನ ಮಾತ್ರ ಮರೆತಿಲ್ಲ. ಲಾಕ್ಡೌನ್ನಲ್ಲಿ ಟೈಂನಲ್ಲಿ ಫ್ರೀಯಾಗಿರೋದ್ರಿಂದ ತಮ್ಮ ಹಳೆ ವೃತ್ತಿಯನ್ನ ಮತ್ತೆ ನೆನಪಿಸಿಕೊಂಡಿದ್ದಾರೆ.