ಬಾಲಿವುಡ್ ಫೈಯರ್ ಬ್ರ್ಯಾಂಡ್ ಕಂಗನಾ ರಾನೌತ್ (Kangana Ranaut). ಚಾಲೆಂಜಿಂಗ್ ರೋಲ್ ಗಳನ್ನ ಮಾಡುತ್ತಾ ಬಾಲಿವುಡ್ ಸೂಪರ್ ಸ್ಟಾರ್ ಗಳಿಗೆ ಸಲಾವ್ ಆಗ್ತಿರೋ ಬಿಟೌನ್ ಕ್ವೀನ್. ಮಣಿಕರ್ಣಿಕಾ (Manikarnika) ನಂತರ ಕಂಗನಾ ಅಭಿನಯದ ತಲೈವಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜೀವನಾಧರಿತ ಚಿತ್ರಕ್ಕೆ ಕಂಗನಾ ಬಣ್ಣ ಹಚ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಬರೀ ಸಿನಿಮಾಗಳಿಂದ ಮಾತ್ರವಲ್ಲ ಕಿರಿಕ್ ಗಳಿಂದ ವಿವಾದಗಳಿಂದಲೂ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಾನೌತ್. ಸದ್ಯ ಲಾಕ್ಡೌನ್ ನಿಂದ ಶೂಟಿಂಗ್ ಇಲ್ಲದೇ ಮನೆಯಲ್ಲಿರುವ ಕಂಗನಾ ಕುದುರೆ ಸವಾರಿ ಕಲಿತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು, ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ.
ಕಂಗನಾ ರಾನೌತ್ ಕುದುರೆ ಸವಾರಿ ಕಲಿಯುವುದರಲ್ಲಿ ವಿಶೇಷ ಏನು ಅಂತೀರಾ ? ಇದೆ ವಿಶೇಷತೆ ಇದೆ. ಮಣಿಕರ್ಣಿಕಾ ಸಿನಿಮಾ ವೇಳೆ ಚಿತ್ರದ ಮೇಕಿಂಗ್ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು. ಚಿತ್ರದ ವಾರ್ ಸೀಕ್ವೆನ್ಸ್ ಶೂಟಿಂಗ್ ಸಮಯದಲ್ಲಿ ಕಂಗನಾ ಗೊಂಬೆ ಕುದುರೆ ಮೇಲೆ ಕೂತು ಸವಾರಿ ಮಾಡ್ತಿದ್ದ ವೀಡಿಯೋ ಅದು. ಈ ವೀಡಿಯೋ ಸಿಕ್ಕಾಪಟ್ಟೆ ಟ್ರೋಲಾಗಿತ್ತು. ಝಾನ್ಸಿ ರಾಣಿ ಪಾತ್ರ ಮಾಡುವ ನಟಿಗೆ ಕುದುರೆ ಸವಾರಿನೇ ಬರಲ್ಲ ಅಂತ ಬಹಳ ತಮಾಷೆ ಮಾಡಿದ್ದರು. ಸಿನಿಮಾಗಳಲ್ಲಿ ಇಂತಹ ಡ್ಯೂಪ್ ಗಳನ್ನ ಸಾಕಷ್ಟು ಮಾಡ್ತಿರ್ತಾರೆ. ಆದರೆ ಅದನ್ನ ಗೌಪ್ಯವಾಗಿ ಇಡಲಾಗುತ್ತೆ. ಆದರೆ ಈ ವೀಡಿಯೋ ಲೀಕ್ ಆಗಿ ಬಾಲಿವುಡ್ ಕ್ವೀನ್ ಭಾರೀ ಅಪಹಾಸ್ಯಕ್ಕೆ ಗುರಿಯಾಗಿದ್ದರು.
ಅಂದು ಗೇಲಿ ಮಾಡಿದವರಿಗೆ ಉತ್ತರ ಕೊಡೋದಕ್ಕೆ ಅಂತಲೇ ಕಂಗನಾ ಈಗ ಕುದುರೆ ಸವಾರಿ ಕಲಿತಂತಿದೆ. ಆಕೆಯ ಪೋಸ್ಟ್ ಗಳಿಗೆ ನೆಟ್ಟಿಗರು ಮಾಡ್ತಿರೋ ಕಾಮೆಂಟ್ ಗಳಿಂದ ಅದು ಅರ್ಥವಾಗ್ತಿದೆ. ಕಂಗನಾ ನಿಜಕ್ಕೂ ಗಟ್ಟಿಗಿತ್ತಿ. ಅಷ್ಟಿಲ್ಲದೇ ಬಾಲಿವುಡ್ ನಲ್ಲಿ ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕೆ ಏರೋಕೆ ಸಾಧ್ಯವಿಲ್ಲ. ಕಂಗನಾ ರಾನೌತ್ ಕುದುರೆ ಸವಾರಿ ನೋಡ್ತಿದ್ರೆ, ಶೀಘ್ರವೇ ಯಾವುದಾದರೂ ಸಿನಿಮಾದಲ್ಲಿ ನಿಜವಾದ ಕುದುರೆ ಏರಿ ಅಬ್ಬರಿಸಿದರೂ ಅಚ್ಚರಿಪಡ್ಬೇಕ್ಕಿಲ್ಲ.