ಕಾಜಲ್ ಅಗರ್ವಾಲ್ ದಕ್ಷಿಣ ಸಿನಿರಂಗದ ಬ್ಯೂಟಿಫುಲ್ ನಟಿ. ಅದ್ರಲ್ಲೂ ತೆಲುಗಿನ ಬಹುತೇಕ ಎಲ್ಲಾ ಸೂಪರ್ಸ್ಟಾರ್ಗಳ ಜೊತೆ ಕಾಜಲ್ ನಟಿಸಿದ್ದಾರೆ. ಮಗಧೀರ, ಆರ್ಯ 2, ಡಾರ್ಲಿಂಗ್, ಮಿ.ಪರ್ಫೆಕ್ಟ್, ಸಿಂಗಂ, ಬ್ಯುಸಿನೆಸ್ ಮ್ಯಾನ್ ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟಾಲಿವುಡ್ನಲ್ಲಿ ಸಾಕಷ್ಟು ಚಿರಪರಿಚಿತರಾಗಿರೋ ನಟಿ ಪುನೀತ್ ಅಭಿನಯದ ಚಕ್ರವ್ಯೂಹಕ್ಕೆ ಹಾಡನ್ನೂ ಹಾಡಿದ್ದಾರೆ. ಎಸ್ಎಸ್. ತಮನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಕಾಜಲ್ ಅಗರ್ವಾಲ್ ಕಳೆದ ವರ್ಷ ಲಾಕ್ಡೌನ್ ವೇಳೆ ಬಹುದಿನದ ಗೆಳೆಯ ಗೌತಮ್ ಕಿಚಲು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಅಲ್ಲಿಂದ ಇಲ್ಲಿವರೆಗೂ ಕಾಜಲ್ ಸಿನಿಮಾ ಬಿಟ್ಟು ಬಿಡ್ತಾರೆ ಅನ್ನೋ ವದಂತಿಗಳು ಕೇಳಿಬರ್ತಾನೇ ಇತ್ತು. ಅದಕ್ಕೆ ಕಾಜಲ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ.
‘‘ನಾನು ಎಲ್ಲಿವರೆಗೂ ಸಿನಿಮಾದಲ್ಲಿ ನಟಿಸುತ್ತೆನೋ ನನಗೆ ಗೊತ್ತಿಲ್ಲ. ನಮ್ ಯಜಮಾನ್ರು ಗೌತಮ್ ಯಾವ ನಟನೆ ಬಿಟ್ಟುಬಿಡು ಎಂದು ಹೇಳುತ್ತಾರೋ ಆಗ ನಾನು ಸಿನಿಮಾವನ್ನು ಬಿಟ್ಟುಬಿಡುತ್ತೇನೆ’’ ಎಂದು ವೈಬ್ ಸೈಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪತಿ ಗೌತಮ್ ಹಾಗೂ ಮನೆಯವರ ಬೆಂಬಲದಿಂದ ಸಿನಿಮಾಗಳಲ್ಲಿ ನಟಿಸುತ್ತಿರೋದಾಗಿ ಕಾಜಲ್ ಹೇಳಿಕೊಂಡಿದ್ದಾರೆ.
ಸದ್ಯ ಕಾಜಲ್ ಅಗರ್ವಾಲ್ ಕೈಯಲ್ಲಿರೋ ಸಿನಿಮಾಗಳನ್ನು ಸಂಪೂರ್ಣ ಮಾಡೋ ಬಗ್ಗೆ ಗಮನ ಕಾಜಲ್ ಅಗರ್ವಾಲ್ ಗಮನ ಹರಿಸಿದ್ದಾರೆ. ಲಾಕ್ಡೌನ್ನಿಂದ ಈ ಎಲ್ಲಾ ಸಿನಿಮಾಗಳೂ ನಿಂತಿದ್ದು, ಪರಿಸ್ಥಿತಿ ಸರಿ ಹೋದ್ಮೇಲೆ ಸಿನಿಮಾಗಳ ಚಿತ್ರೀಕರಣ ಮತ್ತೆ ಆರಂಭ ಆಗುತ್ತೆ ಎಂದು ಹೇಳಿದ್ದಾರೆ.
ಕಾಜಲ್ ಅಗರ್ವಾಲ್ ಕೈಯಲ್ಲೀಗ 5 ತಮಿಳು ಸಿನಿಮಾಗಳಿವೆ. ಹಾಗೇ 2 ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವುಗಳಲ್ಲಿ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಚಿತ್ರೀಕರಣ ತಡವಾಗಿದೆ. ಹೀಗಾಗಿ ಈ ಎಲ್ಲಾ ಸಿನಿಮಾ ಮುಗಿದ ಬಳಿಕ ಕಾಜಲ್ ಅಗರ್ವಾಲ್ ಚಿತ್ರರಂಗಕ್ಕೆ ಗುಡ್ಬೈ ಹೇಳ್ತಾರಾ ಅನ್ನೋ ಅನುಮಾನ ಹುಡ್ಕೊಂಡಿದೆ.