ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಮೋಷನ್ ಪೋಸ್ಟರ್ ಎಲ್ಲೆಡೆ ಬೇಜಾನ್ ಸದ್ದು ಮಾಡುತ್ತಿದೆ. ಆರ್.ಚಂದ್ರು ನಿರ್ದೇಶನ, ಉಪೇಂದ್ರ, ಕಿಚ್ಚ ಸುದೀಪ್ ಕಾಂಬಿನೇಷನ್ ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ.
ಕಬ್ಜ ಮೋಷನ್ ಪೋಸ್ಟರ್ ಕರ್ನಾಟಕದಲ್ಲಷ್ಟೇ ಅಲ್ಲದೇ ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಈ ಮೋಷನ್ ಪೋಸ್ಟರ್ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಶೇ.60 ಭಾಗದಷ್ಟು ಚಿತ್ರೀಕರಣವನ್ನು ಆರ್.ಚಂದ್ರು ಈಗಾಗ್ಲೇ ಮುಗಿಸಿದ್ದು, ಇನ್ನೊಂದು ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ರೆಡಿಯಾಗುತ್ತಿದೆ. ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಅದ್ಧೂರಿ ಸೆಟ್ ಹಾಕಿದ್ದು, ಕಬ್ಜ ಶೂಟಿಂಗ್ ಶೀಘ್ರದಲ್ಲೇ ಆರಂಭ ಆಗಲಿದೆ.
ಬಿಡುಗಡೆಗೂ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದೆ. ಆರ್.ಚಂದ್ರು ನಿರ್ದೇಶನ ಒಂದ್ಕಡೆಯಾದ್ರೆ, ಉಪ್ಪಿ-ಕಿಚ್ಚ ಕಾಂಬಿನೇಷನ್ ಮತ್ತೊಂದ್ಕಡೆ. ಎಲ್ಲಕ್ಕಿಂತ ಹೆಚ್ಚಾಗಿ ರವಿ ಬಸ್ರೂರು ಸಂಗೀತ ನಡುತ್ತಿರೋದು ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಟ್ಟಿದೆ.
ಕಬ್ಜದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಜೊತೆ ದಿಗ್ಗಜರೇ ನಟಿಸಿದ್ದಾರೆ. ಜಗಪತಿ ಬಾಬು, ರಾಹುಲ್ ಜಗತಪ್, ಕಾಮರಾಜನ್, ಜಾನ್ ಕೊಕ್ಕಿನ್, ರಾಹುಲ್ ದೇವ್ ನಟಿಸುತ್ತಿದ್ದು ಕುತೂಹಲ ದುಪ್ಪಟ್ಟಾಗಿದೆ. ಉಪ್ಪಿ ಹಾಗೂ ಕಿಚ್ಚನ ಅಭಿಮಾನಿಗಳು ದೀಪಾವಳಿಗೆ ಬಿಡುಗಡೆಯಾಗ್ತಿರೋ ಕಬ್ಜ ಟೀಸರ್ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ