RRR ಬಳಿಕ ಜೂ.ಎನ್ಟಿಆರ್ ಹಾಗೂ ತ್ರಿವಿಕ್ರಮ್ ಸಿನಿಮಾ ಅನ್ನೋದು ಪ್ರಚಾರ ಆಗಿದೆ. ಇನ್ನೊಂದ್ಕಡೆ ntr30 ಸಿನಿಮಾ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಜೂ.ಎನ್ಟಿಆರ್ ಅಭಿಮಾನಿಗಳು ಬ್ಯಾಕ್ ಟು ಬ್ಯಾಕ್ ಈ ಸಿನಿಮಾವನ್ನ ಟ್ವೀಟ್ ಮಾಡುತ್ತಿದ್ದಾರೆ.
ಎನ್ಟಿಆರ್ 30 ಬಗ್ಗೆ ಯಾಕಿಷ್ಟು ಚರ್ಚೆಯಾಗ್ತಿದೆ ಅನ್ನೋದಕ್ಕೆ ಟಾಲಿವುಡ್ನಲ್ಲೀಗ ಗುಸುಗುಸು ಶುರುವಾಗಿದೆ. RRR ಬಳಿಕ ಸೆಟ್ಟೇರಬೇಕಿದ್ದ ಜೂ.ಎನ್ಟಿಆರ್ ಹಾಗೂ ತ್ರಿವಿಕ್ರಮ್ ಸಿನಿಮಾ ನಿಂತಿದೆ. ಅಧಿಕೃತವಾಗಿ ಘೋಷಣೆಯೊಂದೇ ಬಾಕಿಯಿದೆ ಎನ್ನಲಾಗುತ್ತಿದೆ. RRR ತಡವಾಗ್ತಿರೋದ್ರಿಂದ ತ್ರಿವಿಕ್ರಮ್ ಈ ಪ್ರಾಜೆಕ್ಟ್ನಿಂದ ಹೊರ ಹೋಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.
ಆದ್ರೆ, ಟಾಲಿವುಡ್ ಮಂದಿ ಬೇರೆನೇ ಮಾತಾಡಿಕೊಳ್ತಿದ್ದಾರೆ. ಜೂ.ಎನ್ಟಿಆರ್ ಸಿನಿಮಾ ವಿಚಾರದಲ್ಲಿ ತ್ರಿವಿಕ್ರಮ್ ಡಬಲ್ ಗೇಮ್ ಆಡಿದ್ದಾರೆ ಅಂತ ಮಾತಾಡಿಕೊಳ್ತಿದ್ದಾರೆ. ಜೂ.ಎನ್ಟಿಆರ್ಗೆ ತ್ರಿವಿಕ್ರಮ್ ಮೂರು ಕಥೆಯನ್ನ ಹೇಳಿದ್ದರು. ಅದ್ರಲ್ಲಿ ಎರಡು ಕಥೆ ಜೂ.ಎನ್ಟಿಆರ್ಗೆ ಇಷ್ಟ ಆಗಿತ್ತು. ಈ ಎರಡು ಕಥೆಗಳನ್ನ ಡೆವಲಪ್ ಮಾಡಲು ಸೂಚಿಸಿದ್ದರು. ಆದ್ರೆ, ಇದೇ ಕತೆಗಳನ್ನ ತ್ರಿವಿಕ್ರಮ್ ಮಹೇಶ್ ಬಾಬು ಹಾಗೂ ರಾಮ್ ಚರಣ್ಗೂ ಹೇಳಿದ್ದಾರೆ, ಈ ವಿಷಯ ಎನ್ಟಿಆರ್ಗೆ ಗೊತ್ತಾಗಿ, ತ್ರಿವಿಕ್ರಮ್ ಸಿನಿಮಾದಿಂದ ಹೊರಬರೋಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಸಲಿಗೆ ಕಳೆದೊಂದು ದಿನದಿಂದ Ntr30 ಸಿನಿಮಾ ನಿಂತು ಹೋಗಿದೆ ಅನ್ನೋ ಮಾತು ಕೇಳಿಬಂದಿತ್ತು. ಆದ್ರೀಗ, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಎನ್ನಲಾಗುತ್ತಿದೆ. ಅಂದ್ಹಾಗೆ, ತ್ರಿವಿಕ್ರಮ್ ಈಗ ಮಹೇಶ್ ಬಾಬುಗೆ ನಿರ್ದೇಶನ ಮಾಡಲು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ.