ಕೊರೊನಾ ಹಾವಳಿಯಿಂದ ನಲುಗಿ ಹೋಗಿದ್ದ ಚಿತ್ರರಂಗ ಈಗ ಮತ್ತೆ ಚಿತ್ರೀಕರಣ ಆರಂಭ ಮಾಡಿದೆ. ಒಂದೊಂದೇ ಸಿನಿಮಾಗಳು ಮೈಕೊಡವಿಕೊಂಡು ಮತ್ತೆ ಕಾರ್ಯೋನ್ಮುಖರಾಗಿದ್ದಾರೆ. ಅದ್ರಲ್ಲಿ ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್ನ ಮೂರನೇ ಸಿನಿಮಾ ರಂಗನಾಯಕ ಕೂಡ ಸೇರಿದೆ. ಈಗಾಗ್ಲೇ ಚಿತ್ರೀಕರಣ ಆರಂಭ ಆಗಿದ್ದು, ಜಗ್ಗೇಶ್ ರಂಗನಾಯಕನ ಅವಾತಾರ ಪ್ರೇಕ್ಷಕರಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ.
ರಂಗನಾಯಕನಿಗಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. ಸುಮಾರು 50ರಷ್ಟು ಸಿನಿಮಾ ಸೆಟ್ಟಿನಲ್ಲೇ ನಡೆಯಲಿದೆ. ಹೀಗಾಗಿ ದುಬಾರಿ ಸೆಟ್ ಹಾಕಿದ್ದು, ಇದೊಂದು ಬಿಗ್ ಬಜೆಟ್ ಸಿನಿಮಾ ಅನ್ನೋದನ್ನು ಸಾಭೀತುಪಡಿಸಿದೆ. ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದ ರಾಜಕೀಯ ವ್ಯವಸ್ಥೆಯನ್ನು ರಂಗನಾಯಕ ಸಿನಿಮಾದಲ್ಲಿ ವಿಡಂಬನಾತ್ಮಕವಾಗಿ ತೋರಿಸುವ ಪ್ರಯತ್ನ ಇದಾಗಿದೆ.
ಗುರುಪ್ರಸಾದ್ ರಂಗನಾಯಕ ಸಿನಿಮಾಗೆ ಕಥೆ ಹೆಣೆಯೋದಕ್ಕೆ 10 ವರ್ಷ ತೆಗೆದುಕೊಂಡಿದ್ದಾರೆ. ಇಲ್ಲಿವರೆಗೂ ಸ್ಮಾಲ್ ಬಜೆಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದ, ನಿರ್ದೇಶಕ ಬಿಗ್ ಬಜೆಟ್ ಸಿನಿಮಾವನ್ನು ನಿರ್ದೇಶನ ಮಾಡ್ತಿದ್ದಾರೆ.
ಈಗಾಗ್ಲೇ ರಂಗನಾಯಕ ಚಿತ್ರದ ಚಿತ್ರೀಕರಣ ಆರಂಭ ಆಗಿದ್ದು, ಗುರುಪ್ರಸಾದ್ ಆದಷ್ಟು ಬೇಗ ಸಿನಿಮಾ ಮುಗಿಸೋ ತರಾತುರಿಯಲ್ಲಿದ್ದಾರೆ. ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ಬಳಿಕ ಈ ಕಾಂಬಿನೇಷನ್ನ ಮೂರನೇ ಸಿನಿಮಾ ಯಾವಾಗ ನೋಡ್ತಿವೋ ಅಂತ ಸಿನಿಮಾ ಪ್ರೇಮಿಗಳ ಕಾದು ಕೂತಿದ್ದಾರೆ.