ಶ್ರೀಲಂಕನ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಕೊನೆಗೂ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದ್ದಾಳೆ. ಇನ್ನು ಮೂರು ದಿನ ಬೆಂಗಳೂರಿನಲ್ಲೇ ಉಳಿಯಲಿರೋ ಬಿಂದಾಸ್ ಚೆಲುವೆ ವಿಕ್ರಾಂತ್ ರೋಣ ಕಿಚ್ಚ ಸುದೀಪ್ ಪಕ್ಕ ಹೆಜ್ಜೆ ಹಾಕಲಿದ್ದಾಳೆ. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ನಿರ್ಮಾಣವಾಗ್ತಿರೋ ವಿಕ್ರಾಂತ್ ರೋಣ ಚಿತ್ರಕ್ಕೆ ಭಾರೀ ಕ್ರೇಜ್ ಇರೋ ನಟಿಯನ್ನೇ ಸ್ಪೆಷಲ್ ಸಾಂಗ್ಗೆ ಕರ್ಕೊಂಡ್ ಬಂದಿದೆ ಟೀಮ್. ಅನೂಪ್ ಭಂಡಾರಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಭಾರೀ ನಿರೀಕ್ಷೆ ಮೂಡಿದೆ. ಬಹುಕೋಟಿ ವೆಚ್ಚದಲ್ಲಿ ಜಾಕ್ ಮಂಜು ಈ ಚಿತ್ರವನ್ನು ತ್ರಿಡಿಯಲ್ಲಿ ನಿರ್ಮಿಸ್ತಿದ್ದಾರೆ. ಪೋಸ್ಟರ್ಗಳು ಮತ್ತು ಸಣ್ಣ ಸಣ್ಣ ಟೀಸರ್ ಝಲಕ್ ನಿಂದಲೇ ವಿಕ್ರಾಂತ್ ರೋಣ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ.
ಮೊದಲು ವಿಕ್ರಾಂತ್ ರೋಣ ಚಿತ್ರದಲ್ಲಿ ಕತ್ರಿನಾ ಕೈಫ್ ಕುಣಿಯುತ್ತಾರೆ ಅಂತ ಹೇಳಲಾಗಿತ್ತು. ಕೊನೆಗೆ ಜಾಕ್ವೆಲಿನ್ ಫರ್ನಾಂಡೀಸ್ ಅನ್ನ ಕರೆತಂದಿದೆ ಚಿತ್ರತಂಡ. ಅಜನೀಶ್ ಲೋಕನಾಥ್ ಚಿತ್ರದ ಸ್ಪೆಷಲ್ ಸಾಂಗ್ ಗೆ ಭರ್ಜರಿ ಟ್ಯೂನ್ ಹಾಕಿದ್ದು, ಜಾಕ್ವೆಲಿನ್ ಮಾದಕವಾಗಿ ಹೆಜ್ಜೆ ಹಾಕಲಿದ್ದಾರೆ. ವಿಕ್ರಾಂತ್ ರೋಣ ಚಿತ್ರಕ್ಕೆ ಈ ಐಟಂ ನಂಬರ್ ಸ್ಪೆಷಲ್ ಅಟ್ರಾಕ್ಷನ್ ಆಗೋದ್ರಲ್ಲಿ ಸಂದೇಹವಿಲ್ಲ. ಅದ್ಧೂರಿ ಸೆಟ್ ನಲ್ಲಿ ಬಹಳ ಕಲರ್ ಫುಲ್ ಆಗಿ ಸಾಂಗ್ ಶೂಟಿಂಗ್ ನಡೆಯಲಿದೆ. ಶ್ರೀಲಂಕನ್ ಬ್ಯೂಟಿಗಾಗಿ ಬೊಂಬಾಟ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿಸಿದೆ ಟೀಂ.
ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಜೊತೆಗೆ ನಿರೂಪ್ ಭಂಡಾರಿ ಕೀ ರೋಲ್ ಪ್ಲೇ ಮಾಡ್ತಿದ್ದಾರೆ. ನೀತಾ ಅಶೋಕ್, ಆರ್ಮುಗ ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ವಿದೇಸದ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಗೆ ಪ್ಲಾನ್ ನಡೀತಿದೆ. ಅದಕ್ಕೆ ತಕ್ಕಂತೆ ಸಾಂಗ್ ಇರಬೇಕು ಅನ್ನೋ ಕಾರಣಕ್ಕೆ 3 ಕೋಟಿ ಸಂಭಾವನೆ ಕೊಟ್ಟು ಜಾಕ್ವೆಲಿನ್ ಫರ್ನಾಂಡಿಸ್ ನ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಾಕ್ವೆಲಿನ್ ಬೆಂಗಳೂರಿಗೆ ಬಂದಿಳಿದಿದ್ದು, ನಿರ್ಮಾಪಕ ಜಾಕ್ ಮಂಜು ಬರಮಾಡಿ ಕೊಂಡಿದ್ದಾರೆ. ಆಗಸ್ಟ್ ನಲ್ಲಿ ವಿಕ್ರಾಂತ್ ರೋಣ ರಿಲೀಸ್ ತಯಾರಿ ನಡೆಸಿತ್ತು. ಆದ್ರೀಗ ಕೊರೊನಾ ಆ ಲೆಕ್ಕಾಚಾರಕ್ಕೆ ಕಂಟಕವಾಗಿದೆ.