ಯುವರತ್ನ ಬಿಡುಗಡೆಯಾಗಿ ಕೇವಲ 9 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದುವರೆಗೂ ರಿಲೀಸ್ ಆಗಿರೋ ಪವರ್ಸ್ಟಾರ್ ನಟಿಸಿದ ಸಿನಿಮಾ ಹಿಂದೆಂದು ಹೀಗೆ ರಿಲೀಸ್ ಆಗಿರ್ಲಿಲ್ಲ. ಆದ್ರೀಗ, ಹೊಂಬಾಳೆ ಫಿಲಂಸ್ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅಷ್ಟಕ್ಕೂ ಯುವರತ್ನ ಇಷ್ಟು ಬೇಗ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಯಾಕೆ? ಅಂತಹ ಅರ್ಜೆಂಟ್ ಏನಿತ್ತು? ಇಂತಹ ಚರ್ಚೆಗಳು ಅಪ್ಪು ಅಭಿಮಾನಿ ವಲಯದಲ್ಲೇ ಚರ್ಚೆಯಾಗ್ತಿದೆ.
ಯುವರತ್ನ ರಿಲೀಸ್ ಆಗಿ ಕೇವಲ 9 ದಿನಗಳಲ್ಲೇ ಒಟಿಟಿಗೆ ಮಣೆ ಹಾಕೋಕೆ ಎರಡು ಪ್ರಮುಖ ಕಾರಣಗಳನ್ನ ಗುರುತಿಸಲಾಗಿದೆ. ಮೊದಲನೆಯದು ಕೊರೊನಾ ಕಾಟದಿಂದ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಆದೇಶ ನೀಡಿರೋದು. ಇನ್ನೊಂದು ಪೈರಸಿ ಕಾಟ. ಯುವರತ್ನ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೈರಸಿ ಆಗಿತ್ತು. ಈ ಎರಡು ಪ್ರಮುಖ ಕಾರಣಗಳೇ ಯುವರತ್ನ ಒಟಿಟಿ ರಿಲೀಸ್ಗೆ ಕಾರಣ ಎನ್ನಲಾಗಿದೆ. ಆದ್ರೆ ಇಲ್ಲ ಬಿಟ್ಟು ಇನ್ನೂ ಒಂದು ಕಾರಣವಿದೆ ಅದು ಐಪಿಎಲ್.
ಏಪ್ರಿಲ್ 9ರಿಂದ ಐಪಿಎಲ್ ಮ್ಯಾಚ್ ಆರಂಭ ಆಗಲಿವೆ. ನಿರಂತರವಾಗಿ ಒಂದೂವರೆ ತಿಂಗಳು ಪಂದ್ಯಗಳು ನಡೆಯಲಿವೆ. ಇದ್ರಿಂದ ಸೆಕೆಂಡ್ ಶೋ, ನೈಟ್ ಶೋಗಳಿಗೆ ಜನರು ಬರೋದು ಡೌಟು. ಅಲ್ಲದೆ, 50 ಪರ್ಸೆಂಟ್ಗೆ ಥಿಯೇಟರ್ ಬಾಡಿಗೆ ಕೊಟ್ಟು ಸಿನಿಮಾ ತೋಡಿಸೋದು ನಷ್ಟವನ್ನ ಮೈ ಮೇಲೆ ಎಳೆದುಕೊಂಡಂತೆ. ಹೀಗಾಗಿ ಅಮೆಜಾನ್ ಪ್ರೈಮ್ಗೆ ಸಿನಿಮಾವನ್ನ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.
ಕೆಲವರು ಇದು ಒಳ್ಳೆ ನಿರ್ಧಾರ ಎನ್ನುತ್ತಿದ್ರೆ, ಮತ್ತೆ ಕೆಲವರು ಇಷ್ಟು ಸಿನಿಮಾವನ್ನ ಒಟಿಟಿಗೆ ಕೊಡೋಕೆ ಅಷ್ಟೆಲ್ಲಾ ಹೋರಾಟ ಮಾಡ್ಬೇಕಿತ್ತಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಸಿನಿಮಾದ ಹಿತ ದೃಷ್ಟಿಯಿಂದ ನೋಡೋದಾದ್ರೆ, ಯುವರತ್ನ ತೆಗೆದುಕೊಂಡು ಈ ನಿರ್ಧಾರ ಸರಿ ಅಂತಿದೆ ಚಿತ್ರರಂಗ.