ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ ಯಾರಿಗೆ ಗೊತ್ತಿಲ್ಲಾ. ಭಾರತದ ಮಾಜಿ ಅಥ್ಲೆಟ್ ಮಿಲ್ಕಾ ಸಿಂಗ್ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯೇನು ಕಮ್ಮಿಯಿಲ್ಲ. ಕೆಲವು ದಿನಗಳ ಹಿಂದೆ ಕೊರೊನಾದಿಂದ ಬಳಲುತ್ತಿದ್ದ ಮಿಲ್ಕಾಗೆ ಕೊರೊನಾ ಗೆದ್ದಿದ್ದರು. ಆದ್ರೆ, ಜೂನ್ 18ರಂದು ಮಿಲ್ಕಾ ಸಿಂಗ್ ಆರೋಗ್ಯದಲ್ಲಿ ಏರು-ಪೇರಾಗಿತ್ತು. ವೈದ್ಯರು ಸ್ಥಿತಿ ಗಂಭೀರವಿದೆಯೆಂದು ಹೇಳಿದ್ದರು. ಆದ್ರೀಗ 91 ವರ್ಷದ ಮಿಲ್ಕಾ ಸಿಂಗ್ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಇದೇ ಜೂನ್ 3ರಂದು ಮಿಲ್ಕಾ ಸಿಂಗ್ಗೆ ಕೊರೊನಾ ಸೋಂಕು ತಗುಲಿತ್ತು. ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಜೂನ್ 16ರಂದು ಮಿಲ್ಕಾಗೆ ಕೊರೊನಾ ನೆಗೆಟಿವ್ ಅನ್ನೋ ವರದಿ ಕೂಡ ಬಂದಿತ್ತು. ಹೀಗಾಗಿ 91 ವರ್ಷದ ಮಿಲ್ಕಾ ಸಿಂಗ್ರನ್ನು ಜನರಲ್ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಐಸಿಯುಗೆ ಶಿಫ್ಟ್ ಮಾಡಿದ ಕೂಡಲೇ ದಿಢೀರನೇ ಜ್ವರ ಕಾಣಿಸಿಕೊಂಡಿತ್ತು. ಆಕ್ಸಿಜನ್ ಲೆವೆಲ್ ಕೂಡ ಕುಸಿಯುತ್ತಾ ಹೋಗಿತ್ತು. ದಿಢೀರನೇ ಮಿಲ್ಕಾ ಸಿಂಗ್ ಆರೋಗ್ಯದಲ್ಲಾದ ಬದಲಾವಣೆ ಕಂಡು ವೈದ್ಯರು ಪರಿಸ್ಥಿತಿ ಗಂಭೀರವಿದೆಯೆಂದು ಹೇಳಿದ್ದರು. ವೈದ್ಯರು ಗಂಭೀರವೆಂದ ಕೆಲವೇ ಗಂಟೆಗಳಲ್ಲಿ ಫ್ರೈಯಿಂಗ್ ಸಿಖ್ ಕೊನೆಯುಸಿರೆಳೆದಿದ್ದಾರೆ.
ಮಿಲ್ಕಾ ಸಿಂಗ್ ಸಾಧನೆಗಳೇನು ಕಮ್ಮಿಯಿಲ್ಲ. ಭಾರತದ ಹೆಮ್ಮೆ ಎನಿಸಿಕೊಂಡಿದ್ದರ ಹಿಂದೆ ಸಾಕಷ್ಟು ಸಾಧನೆಗಳಿವೆ. ಏಷ್ಯನ್ ಗೇಮ್ಸ್ನಲ್ಲಿ ಮಿಲ್ಕಾ ಸಿಂಗ್ ನಾಲ್ಕು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ವೇಳೆ 1958ರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲೂ ಮಿಲ್ಕಾ ವೇಗಕ್ಕೆ ಇಡೀ ವಿಶ್ವವೇ ದಂಗಾಗಿತ್ತು. 1960ರ ಒಲಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಿಲ್ಕಾ ಸಿಂಗ್ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡು ಕಂಚಿನ ಪದಕದಿಂದ ವಂಚಿತರಾಗಿದ್ದರು.
ಮಿಲ್ಕಾ ಸಿಂಗ್ ಮಾಡಿದ ಈ ಸಾಧನೆಯನ್ನು ಬಾಲಿವುಡ್ ಚಿತ್ರರಂಗ ತೆರೆಮೇಲೆ ತಂದಿದೆ. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಮಿಲ್ಕಾ ಸಿಂಗ್ ಪಾತ್ರದಲ್ಲಿ ಮಿಂಚಿದ್ದರು. ‘ಭಾಗ್ ಮಿಲ್ಕ ಬಾಗ್’ ಸಿನಿಮಾವನ್ನು ಮೆಚ್ಚಿಕೊಂಡಾಡಿದ್ದಷ್ಟೇ ಅಲ್ಲ. ಬಾಕ್ಸಾಫೀಸ್ನಲ್ಲೂ ಧೂಳೆಬ್ಬಿಸಿತ್ತು. ಅಲ್ಲದೆ ಹಲವು ಬರೋಪಿಕ್ ಸಿನಿಮಾಗಳ ನಿರ್ಮಾಣಕ್ಕೂ ಕಾರಣವಾಯ್ತು.