ಬಾಹುಬಲಿ ಸ್ಟಾರ್ ಪ್ರಭಾಸ್ ಮುಂದಿನ ಚಿತ್ರ ‘ಆದಿಪುರುಷ್’. ಈಗಾಗಲೇ ಗೊತ್ತಿರುವ ಹಾಗೆ ಇದು ರಾಮಾಯಣ ಆಧಾರಿತ ಸಿನಿಮಾ. ಪ್ರಭಾಸ್ ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಅಭಿನಯಿಸ್ತಿದ್ದಾರೆ. ಒಂದು ಸಣ್ಣ ಗ್ಯಾಪ್ ನಂತರ ‘ಆದಿಪುರುಷ್’ ಶೂಟಿಂಗ್ ಮುಂಬೈನಲ್ಲಿ ಮತ್ತೆ ಶುರುವಾಗಿದೆ.
ಈಗ ಸದ್ಯಕ್ಕೆ ಸುದ್ದಿಯಲ್ಲಿರೋದು ಆದಿಪುರುಷ್ ನಲ್ಲಿ ರಾಮನ ಪಾತ್ರದ ಬಗ್ಗೆ, ಅಂದ್ರೆ ಪ್ರಭಾಸ್ ರೋಲ್ ಬಗ್ಗೆ. ಪ್ರಭಾಸ್ ಈಗಾಗಲೇ ಬಾಹುಬಲಿಯಲ್ಲಿ ಪೌರಾಣಿಕ ಪಾತ್ರಕ್ಕೆ ಸೂಟಬಲ್ ಅನ್ನೋದನ್ನ ಜಗತ್ತಿಗೇ ತೋರಿಸಿದ್ದಾರೆ. ಆದಿಪುರುಷ್ ಅದಕ್ಕಿಂತ ಭಿನ್ನವಾಗಬೇಕಿದೆ. ಇಲ್ಲಿ ಪ್ರಭಾಸ್ ಶ್ರೀರಾಮನ ಅವತಾರ ಎತ್ತಲಿದ್ದಾರೆ. ಆದ್ರೆ ಈ ರಾಮನಿಗೆ ಮೀಸೆ ಇರಲಿದ್ಯಂತೆ.
ಇದೇ ಮೊದಲ ಬಾರಿಗೆ ಶ್ರೀರಾಮನ ಪಾತ್ರದಲ್ಲಿ ರಾಮನಿಗೆ ಮೀಸೆ ಇರಲಿದೆ. ಇದುವರಗೆ ಎಲ್ಲೂ ಮೀಸೆ ಇರುವ ರಾಮ ಇಲ್ಲ. ಆದ್ರೆ ಯಾವ ಬಗೆಯ ಮೀಸೆ, ಅದು ಪ್ರಭಾಸ್ ಗೆ ಎಷ್ಟು ಒಪ್ಪುತ್ತೆ, ರಾಮನ ಪಾತ್ರಕ್ಕೆ ಸೂಟ್ ಆಗುತ್ತಾ ಅನ್ನೋದನ್ನೆಲ್ಲಾ ಸಾಕಷ್ಟು ವರ್ಕ್ ಮಾಡಿ ಅನೇಕ ಲುಕ್ ಟೆಸ್ಟ್ ಮಾಡಿದೆಯಂತೆ ಚಿತ್ರತಂಡ. ಎಲ್ಲಾ ಒಕೆ ಆದ್ಮೇಲೆ ಮೀಸೆ ಇರುವ ರಾಮನ ಶೂಟಿಂಗ್ ಶುರು ಮಾಡಲಾಗಿದೆಯಂತೆ.
ಮೀಸೆಯ ಲುಕ್ ಜೊತೆಗೆ ಪ್ರಭಾಸ್ ಸಖತ್ ಮೋಡಿ ಮಾಡುವ ನಿರೀಕ್ಷೆ ಇದೆ. ಹೇಳಿ ಕೇಳಿ ಪ್ರಭಾಸ್ ಸ್ಟೈಲಿಶ್ ಸ್ಟಾರ್. ಅವರ ಪ್ರತೀ ಚಿತ್ರದಲ್ಲೂ ಹೊಸಾ ಟ್ರೆಂಡ್ ಶುರುವಾಗುತ್ತದೆ. ಈಗ ಈ ಮೀಸೆ ಕೂಡಾ ಅದೇ ಟ್ರೆಂಡ್ ಗೆ ನಾಂದಿ ಹಾಡೋ ನಿರೀಕ್ಷೆ ಇದೆ. ಇದರ ಜೊತೆಗೆ ಪ್ರಭಾಸ್ ನ ಒಟ್ಟಾರೆ ಲುಕ್ ಗೂ ಹೆಚ್ಚಿನ ಒತ್ತು ಕೊಡಲಾಗಿದೆಯಂತೆ. ಹಾಗಾಗಿ ಆದಿಪುರುಷ್ ಇಂಟರೆಸ್ಟಿಂಗ್ ಆಗಿ ಮೂಡಿಬರುವ ಎಲ್ಲಾ ನಿರೀಕ್ಷೆ ಇದೆ. 2022 ರ ಆಗಸ್ಟ್ 11 ಕ್ಕೆ ಆದಿಪುರುಷ್ ತೆರೆ ಕಾಣಲಿದೆ. ಒ ಕೆ ರಾವತ್ ನಿರ್ದೇಶನದ ಈ ಚಿತ್ರವನ್ನು ಟಿ ಸೀರೀಸ್ ನಿರ್ಮಿಸುತ್ತಿದೆ.