ಕಳೆದ ಮೂರ್ನಾಲ್ಕು ದಿನಗಳಿಂದ ದರ್ಶನ್ ಹಾಗೂ ಉಮಾಪತಿ ಹೆಸರಲ್ಲಿ ₹25 ಕೋಟಿ ಸಾಲ ಪಡೆಯಲು ಯತ್ನಿಸಿದ್ದ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇತ್ತು. ಆರೋಪ ಎದುರಿಸುತ್ತಿರುವ ಅರುಣಾಕುಮಾರಿ ಇಷ್ಟಕ್ಕೆಲ್ಲಾ ನಿರ್ಮಾಪಕ ಉಮಾಪತಿನೇ ಕಾರಣ ಆರೋಪಿಸುತ್ತಲೇ ಇದ್ದಾರೆ. ಇದರ ಹೊರತಾಗಿಯೂ ದರ್ಶನ್ ಹಾಗೂ ಉಮಾಪತಿ ನಡುವೆ ಸಂಧಾನ ನಡೆದಿದೆ. ಹಾಗಿದ್ರೆ, ಈ ಪ್ರಕರಣದಲ್ಲಿ ದರ್ಶನ್ ಕಂಡುಕೊಂಡ ಸತ್ಯವೇನು? ಸ್ಯಾಂಡಲ್ವುಡ್ ಈ ಸಂಧಾನದ ಬಗ್ಗೆ ಏನು ಹೇಳುತ್ತಿದೆ? ಅನ್ನೋದು ಮಾಹಿತಿ ಇಲ್ಲಿದೆ.
ದರ್ಶನ್ ಬೆಂಗಳೂರು ಮತ್ತು ಮೈಸೂರು ಎರಡೂ ಕಡೆ ಓಡಾಡಿಕೊಂಡಿರ್ತಾರೆ. ಫ್ರೀ ಇದ್ದಾಗ ಮೈಸೂರಿನಲ್ಲೇ ವಾಸ್ತವ್ಯ ಹೂಡುವುದು ಮೊದಲಿನಿಂದಲೂ ಅಭ್ಯಾಸ. ಹೀಗಾಗಿ ಬೆಂಗಳೂರಿನಲ್ಲಿ ಸ್ನೇಹಿತರು ಇರುವಂತೆ, ಮೈಸೂರಿನಲ್ಲೂ ಸ್ನೇಹಿತರಿದ್ದಾರೆ. ದರ್ಶನ್ ಮೈಸೂರಿಗೆ ಹೋದಾಗ ಅಲ್ಲಿರೋ ಸ್ನೇಹಿತರು ಡಿ ಬಾಸ್ ಜೊತೆನೇ ಇರ್ತಾರೆ. ಅದೇ ಬೆಂಗಳೂರಿಗೆ ಬಂದಾಗ ಇಲ್ಲಿನ ಸ್ನೇಹಿತರು ಜೊತೆಯಾಗುತ್ತಾರೆ. ಈ ಮಧ್ಯೆ ರಾಬರ್ಟ್ ಸಿನಿಮಾ ಮಾಡಿದ ಬಳಿಕ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಬಹಳ ಕ್ಲೋಸ್ ಆಗಿದ್ದರು. ದರ್ಶನ್ ಕೂಡ ಉಮಾಪತಿಯನ್ನು ಬಹಳ ನಂಬಿದ್ದರು ಅಂತಿದ್ದಾರೆ ಆಪ್ತ ಮೂಲಗಳು.
ದರ್ಶನ್ಗೆ ಉಮಾಪತಿ ಕ್ಲೋಸ್ ಆಗಿದ್ದು, ಪ್ರತಿಯೊಂದಕ್ಕೂ ಮೂಗು ತೂರಿಸೋದು ಮೈಸೂರಿನ ಸ್ನೇಹಿತರಿಗೂ ಇಷ್ಟ ಆಗುತ್ತಿರಲಿಲ್ಲ ಅನ್ನೋ ಮಾತಿದೆ. ಹೀಗಾಗಿ ದರ್ಶನ್ಗೆ ಗೊತ್ತಿಲ್ಲದಂತೆ ಮೈಸೂರಿನ ಗ್ಯಾಂಗ್ಗೂ, ನಿರ್ಮಾಪಕ ಉಮಾಪತಿಗೂ ಒಳಗೊಳಗೆ ವೈಮನಸ್ಸು ಶುರುವಾಗಿದೆ. ಆದ್ರೆ, ಇದನ್ನೆಲ್ಲಾ ದರ್ಶನ್ ಎಂಟರ್ಟೈನ್ ಮಾಡೋದಿಲ್ಲ. ಹೀಗಾಗಿ ಎರಡೂ ಕಡೆಯಿಂದ ಡಿ ಬಾಸ್ಗೆ ಗೊತ್ತಿಲ್ಲದಂತೆ ಕಿತ್ತಾಡಿಕೊಳ್ಳುತ್ತಿದ್ದರು ಅನ್ನೋದು ಚರ್ಚೆಯಾಗುತ್ತಿದೆ. ಈ ವೇಳೆ ಉಮಾಪತಿಯನ್ನು ದೂರವಿಡೋ ಮೈಸೂರು ತಂಡವೋ, ಮೈಸೂರು ತಂಡವನ್ನು ದೂರವಿಡು ಉಮಾಪತಿಯೋ ಅರುಣಾಕುಮಾರಿಯನ್ನು ಧಾಳವಾಗಿ ಬಳಸಿಕೊಂಡಿರಬಹುದೆಂಬ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಈ ಮಧ್ಯೆ ದರ್ಶನ್ಗೆ ಮೈಸೂರು ಫ್ರೆಂಡ್ಸ್ ಹಾಗೂ ಉಮಾಪತಿ ನಡುವಿನ ಕಿತ್ತಾಟ ಅರಿವಿಗೆ ಬಂದೆ. ಹೀಗಾಗಿ ₹25 ಕೋಟಿ ಪ್ರಕರಣವನ್ನು ಪಕ್ಕಕ್ಕಿಟ್ಟು ಇಬ್ಬರನ್ನೂ ಸಂಧಾನ ಮಾಡೋ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣ ನಿಲ್ಲೋದಿಲ್ಲ. ನಮ್ಮ ನಿರ್ಮಾಪಕರನ್ನು ಬಿಟ್ಟುಕೊಡೋದಿಲ್ಲ ಅಂತ ದರ್ಶನ್ ಹೇಳಿದ್ದು ಅಂತಿ ಬಲ್ಲ ಮೂಲಗಳು.
ಸದ್ಯ ದರ್ಶನ್ ಹಾಗೂ ಉಮಾಪತಿ ಒಂದಾಗಿರೋ ಫೋಟೋಗಳು ಪರಿದಾಡುತ್ತಿದೆ. ಆಪ್ತ ಮೂಲಗಳ ಪ್ರಕಾರ ಎರಡೂ ಒಟ್ಟಿಗೆ ಸೇರಿಸಿ, ಪಾರ್ಟಿ ಕೊಟ್ಟು, ಇನ್ಮುಂದೆ ಹೀಗೆ ನಡೆಯಕೂಡದೆಂದು ದರ್ಶನ್ ವಾರ್ನಿಂಗ್ ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಈ ಮಧ್ಯೆ ಉಮಾಪತಿ ವಿರುದ್ಧ ಅರುಣಾಕುಮಾರಿ ಸಿಡಿದೆದ್ದಿದ್ದಾರೆ. ಹೀಗಾಗಿ ಈ ಪ್ರಕರಣ ಇಲ್ಲಿಗೆ ಅಂತ್ಯವಾಗುತ್ತೋ..? ಇಲ್ಲಾ ಹೊಸ ತಿರುಗಳೇನಾದ್ರೂ ಪಡೆದುಕೊಳ್ಳುತ್ತೋ ಗೊತ್ತಿಲ್ಲ.