ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಟ್ಟಿಕೊಳ್ತಿದ್ದಾರೆ. ಯುವರತ್ನ ಬಿಡುಗಡೆ ಬಳಿಕ ಆ ಸಿನಿಮಾಗಳಿಗೆಲ್ಲಾ ಚಾಲನೆ ಸಿಗುತ್ತಿದೆ. ಯುಗಾದಿ ಹಬ್ಬಕ್ಕೊಂದು ಸಿನಿಮಾ ಅನೌನ್ಸ್ ಆಗಿದ್ದು, ಅಪ್ಪು ಅಭಿಮಾನಿಗಳಿಗೆ ಬೇವಿಗಿಂತ ಬೆಲ್ಲವೇ ಸಿಕ್ಕಿದೆ.
ಕಳೆದ ಕೆಲವು ದಿನಗಳಿಂದ ಪುನೀತ್ ರಾಜ್ಕುಮಾರ್ ಹಾಗೂ ಲೂಸಿಯಾ ಪವನ್ ಸಿನಿಮಾ ಮಾಡ್ತಾರೆ ಅನ್ನೋ ಸಂಗತಿ ಎಲ್ಲೆಡೆ ಹರಿದಾಡಿತ್ತು. ಆದ್ರೆ, ಯಾವ ನಿರ್ಮಾಣ ಸಂಸ್ಥೆಗೆ ಸಿನಿಮಾ ಮಾಡ್ತಾರೆ ಅನ್ನೋದು ಮಾತ್ರ ಗೊತ್ತಿರಲಿಲ್ಲ. ಕೊನೆಗೂ ಈಗ ಕೆಜಿಎಫ್ ಸಂಸ್ಥೆ ಇಬ್ಬರ ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದೆ.
ಪುನೀತ್ ರಾಜ್ಕುಮಾರ್ ಹಾಗೂ ಯುಟರ್ನ್ ಪವನ್ ಕಾಂಬಿನೇಷನ್ ಬಗ್ಗೆ ಸಾಕಷ್ಟು ಕುತೂಹಲ ಕೆರಳಿದಿದೆ. ಪವನ್ ನಿರ್ದೇಶಿಸೋ ಸಿನಿಮಾಗಳಲ್ಲಿ ಕಥೆಯೇ ಪ್ರದಾನವಾಗಿರುತ್ತೆ. ಇನ್ನೊಂದ್ಕಡೆ ಅಪ್ಪು ಸಿನಿಮಾ ಅಂದ್ರೆ, ಡ್ಯಾನ್ಸ್, ಫೈಟ್ ಅಂತೂ ಇರ್ಲೇಬೇಕು. ಹೀಗಾಗಿ ಈ ಅಪರೂಪದ ಕಾಂಬಿನೇಷನ್ ಬಗ್ಗೆ ಪುನೀತ್ ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ.
2021 ಜುಲೈ ತಿಂಗಳಿಂದ ಪುನೀತ್, ಪವನ್ ಹಾಗೂ ವಿಜಯ್ ಕಿರಗಂದೂರು ಸಿನಿಮಾ ಕೆಲಸ ಶುರುವಾಗಲಿದೆ. ಮೊದಲು ಫೋಟೋಶೂಟ್ನಿಂದ ಸಿನಿಮಾ ಕೆಲಸ ಆರಂಭ ಆಗಲಿದೆ. ಹೊಂಬಾಳೆ ಸಂಸ್ಥೆ ಈಗ ಪ್ರಭಾಸ್ ಚಿತ್ರ ಸಲಾರ್ ನಿರ್ಮಿಸುತ್ತಿದೆ. ಇನ್ನೊಂದ್ಕಡೆ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತ ಪುನೀತ್ ಕೂಡ ಭರ್ಜರಿ ಚೇತನ್ ನಿರ್ದೇಶಿಸ್ತಿರೋ ಜೇಮ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.