ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಲಿರೋ ಶಾಸಕರು ಯಾರು? ಯಾರಿಗೆ ಸಚಿವ ಸ್ಥಾನ ಸಿಗುತ್ತೆ? ಅನ್ನೋ ಚರ್ಚೆ ಕಳೆದ ಕೆಲವು ದಿನಗಳಿಂದ ಆಗ್ತಾನೇ ಇತ್ತು. ಅದಕ್ಕೆ ತಕ್ಕಂತೆ ಆಗಸ್ಟ್ 03 ರಂದು ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿ ಹೈಕಮಾಂಡ್ ಜೊತೆ ಕೂತು ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಆ ಪಟ್ಟಿಯನ್ನು ಆಗಸ್ಟ್ 04 ರಂದು 11 ಗಂಟೆಯಿಂದ 11.30ರ ಸುಮಾರಿಗೆ ರಾಜಭವನದಿಂದ್ಲೇ ಅಧಿಕೃತ ಘೋಷಣೆಯಾಗಲಿದೆ. ಬಳಿಕ ಮದ್ಯಾಹ್ನ 2.15ಕ್ಕೆ ಪಟ್ಟಿಯಲ್ಲಿರೋ ಶಾಸಕರೆಲ್ಲಾ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಸಚಿವ ಸಂಪುಟದಲ್ಲಿ ಯಾರು ಯಾರಿಗೆ ಸ್ಥಾನ ಸಿಕ್ಕಿದೆ ಅನ್ನುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೊರ ಹಾಕಿಲ್ಲ. ಆದ್ರೆ, ಕೆಲ ಶಾಸಕರಿಗೆ ಫೋನ್ ಕರೆ ಮಾಡಿ ಪ್ರಮಾಣ ವಚನಕ್ಕೆ ಸಿದ್ಧರಾಗಿ ಎಂದು ಸೂಚನೆ ನೀಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಈಗಾಗ್ಲೇ ಗೋವಿಂದ ಕಾರಜೋಳ ಫೋನ್ ಕರೆ ಬಂದಿದ್ದನ್ನು ಖಾಸಗಿ ಸುದ್ದಿವಾಹಿನಿಗೆ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧಕ್ಕೆ ಆಗಮಿಸಿದ ಸಿಎಂ 10 ಗಂಟೆಯ ಬಳಿಕ ಮಂತ್ರಿಸ್ಥಾನ ಸಿಕ್ಕಿರೋರಿಗೆ ಕರೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಆದ್ರೆ, ಎರಡು ವಿಷಯಗಳ ಬಗ್ಗೆ ಚರ್ಚೆಯಾಗಿದ್ದು, ಅದು 10 ಗಂಟೆಯ ಬಳಿಕ ಹೊರಬೀಳುವ ಸಾಧ್ಯತೆಯಿದೆ. ಯಾರು ಮಂತ್ರಿಯಾಗ್ತಾರೆ ಅನ್ನೋದನ್ನು ರಾಜಭವನದಿಂದ್ಲೇ ಅಧಿಕೃತ ಪಟ್ಟಿ ಹೊರಬೀಳಲಿದೆ ಎಂದಿದ್ದಾರೆ.
ಡಿಸಿಎಂ ಸ್ಥಾನದ ಬಗ್ಗೆ ಎದ್ದಿದ್ದ ಗೊಂದಲದ ಬಗ್ಗೆ ಸ್ಪಷ್ಟಪಡಿಸಿದ ಸಿಎಂ ಪಟ್ಟಿಯಲ್ಲೇ ಎಲ್ಲವೂ ಗೊತ್ತಾಗಲಿದೆ. ಆದ್ರೆ, ಎರಡು ವಿಷಯಗಳು ಚರ್ಚೆ ಯಾವುದು ಅನ್ನೋದು ಗೊಂದಲಕ್ಕೀಡು ಮಾಡಿದೆ. ಬಿಎಸ್ಬೈ ಪುತ್ರ ವಿಜಯೇಂದ್ರ ಮಂತ್ರಿ ಸ್ಥಾನ ನೀಡ್ಬೇಕಾ ಬೇಡವಾ? ಡಿಸಿಎಂ ಸ್ಥಾನ ಬೇಕಾ? ಇಂತಹದ್ದೇ ಒಂದಿಷ್ಟು ವಿಷಯಗಳು ಚರ್ಚೆಯಲ್ಲಿದೆ. ಸಾಧ್ಯಕ್ಕೆ 11 ಗಂಟೆ ಬಳಿಕ ಈ ಗೊಂದಲಕ್ಕೆ ತೆರೆಬೀಳುವ ಸಾಧ್ಯತೆಯಿದೆ.