ಕ್ರೇಜಿಸ್ಟಾರ್ ರವಿಚಂದ್ರನ್ ಮೇ 30 ರಂದು 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೊರೊನಾದಿಂದಾ ಅಭಿಮಾನಿಗಳಿಂದ ದೂರ ಉಳಿದಿದ್ದ ಕ್ರೇಜಿಸ್ಟಾರ್ ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮನೆಯಲ್ಲೇ ಕೇಕ್ ಕತ್ತರಿಸಿ ಬರ್ತ್ಡೇ ಸೆಲೆಬ್ರೆಟ್ ಮಾಡಲಾಗಿದೆ. ಈ ವೇಳೆ ಮಕ್ಕಳು, ಪತ್ನಿ, ಸೇರಿದಂತೆ ಇಡೀ ಕುಟುಂಬ ಜೊತೆಯಲ್ಲಿತ್ತು.
ಇತ್ತ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲೇ ತಮ್ಮ ನೆಚ್ಚಿನ ನಟ ಕ್ರೇಜಿಸ್ಟಾರ್ಗೆ ಶುಭಾಶಯ ಕೋರಿದ್ರು. ಈ ವೇಳೆ ಪುತ್ರ ಮನೋರಂಜನ್ ಹಾಗೂ ವಿಕ್ರಮ್ ಕೂಡ ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ರು.
ಹುಟ್ಟುಹಬ್ಬಕ್ಕೆ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಗಾಢ, 60, ಬಾಡ್ಬಾಯ್ಸ್ ಚಿತ್ರ ನಿರ್ದೇಶನ ಮಾಡೋ ಸುಳುವು ನೀಡಿದ್ದಾರೆ.
ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಂಡಿದ್ದಾರೆ. ಗಿರಿರಾಜ್ ನಿರ್ದೇಶನದ ಕನ್ನಡಿಗ ಸಿನಿಮಾ ಟೀಸರ್ ರಿಲೀಸ್ ಆಗಿದೆ.