ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿರೋ the story of ರಾಯಗಢ ಪೋಸ್ಟರ್ ಬಹಳ ಕುತೂಹಲ ಮೂಡಿಸಿದೆ. ಮಳೆಹುಡುಗ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಗನ್ ಹಿಡಿದು ದರ್ಶನ ಕೊಟ್ಟಿದ್ದಾರೆ. ಬರೀ ಲವ್ ಸ್ಟೋರಿಗಳನ್ನ ಹೇಳುತ್ತ ಚಮ್ಕಾಯಿಸುತ್ತಾ ಬರ್ತಿರೋ ಸುನಿ ಮೊದಲ ಬಾರಿಗೆ ಒಂದು ಎಪಿಕ್ ಫಿಕ್ಷನಲ್ ಆ್ಯಕ್ಷನ್ ಡ್ರಾಮಾ ಹೇಳೋಕೆ ಬರ್ತಿರೋದು ಗೊತ್ತಾಗ್ತಿದೆ. ಈ ಹಿಂದೆ ಬಹುಪಾರಾಕ್ ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಕೊಂಚ ರಗಡ್ ಸ್ಟೋರಿ ಹೇಳಿದ್ದ ಸುನಿ ಈ ಬರೀ ಕಂಪ್ಲೀಟ್ ಆಗಿ ಅದೇ ರೀತಿಯ ಕಥೆ ಹೇಳೋಕೆ ಹೊರಟಿರೊದು ಗೊತ್ತಾಗ್ತಿದೆ.
ಗಣಿ ತಲೆಗೆ ಕಂಬಳಿ ಸುತ್ತಿಕೊಂಡು ಬಂಡುಕೋರನ ರೀತಿ ದರ್ಶನ ಕೊಟ್ಟಿದ್ದಾರೆ. ಸುನಿ- ಗಣಿ ಇಬ್ಬರು ಈ ಹಿಂದೆ ಮಾಡ್ದೇ ಇರೋ ಜಾನರ್ ನ ಇಲ್ಲಿ ಟ್ರೈ ಮಾಡ್ತಿರೋದು ಗೊತ್ತಾಗ್ತಿದೆ. ಇನ್ನು ಪೋಸ್ಟರ್ ನಲ್ಲಿರೋ ಗನ್ ನ ಝೂಮ್ ಮಾಡಿ ನೋಡಿದ್ರೆ, ಒಂದು ಕಾರ್ಖಾನೆಯ ಮುಂದೆ ಕುದುರೆಗಳ ಮೇಲೆ ಬರುತ್ತಿರುವರು ಮತ್ತು ಕಾರಿನಲ್ಲಿ ಬರುತ್ತಿರುವವರ ನಡುವೆ ಗಲಾಟೆ ನಡೆಯುವಂತೆ ಚಿತ್ರಿಸಲಾಗಿದೆ. ಇದನ್ನ ನೋಡ್ತಿದ್ರೆ, ಅಭಿಮಾನಿಗಳು ಒಂದು ಅದ್ಭುತ ಆ್ಯಕ್ಷನ್ ಸಿನಿಮಾ ನಿರೀಕ್ಷೆ ಮಾಡಬಹುದು. ಪೋಸ್ಟರ್ ಗಮನಿಸಿದ್ರೆ, ಇದು 50-60ರ ದಶಕದ ಕಥೆ ಅನ್ನಿಸ್ತಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಿನಿಮಾಗಳು ಇತ್ತೀಚೆಗೆ ದೊಡ್ಡದಾಗಿ ಸೌಂಡ್ ಮಾಡ್ತಿಲ್ಲ. ಇಂತಹ ಹೊತ್ತಲ್ಲಿ ಅವರಿಗೆ ದೊಡ್ಡದೊಂದು ಬ್ರೇಕ್ ಬೇಕಿದೆ. ಗಣಿ- ಸುನಿ ಕಾಂಬಿನೇಷನ್ ನಲ್ಲಿ ಬರ್ತಿರೋ ‘ಸಖತ್’ ಸಿನಿಮಾ ಪೋಸ್ಟರ್ ಕೂಡ ಮಜಾವಾಗಿದೆ. ಅದ್ರಲ್ಲಿ ಒಂದು ಸಸ್ಪೆನ್ಸ್ ಕಥೆ ಹೇಳ್ತಿರುವಂತೆ ಕಾಣ್ತಿದ್ದು, The story of ರಾಯಗಢ ಚಿತ್ರದಲ್ಲಿ ಅದಕ್ಕಿಂತ ರೋಚಕವಾದ ಮನರಂಜನೆ ಸಿಗುತ್ತೆ ಅನ್ನೋದು ಗೊತ್ತಾಗ್ತಿದೆ.