ಕಠಿಣ ರೂಲ್ಸ್ ಜಾರಿ ಆದಲ್ಲಿಂದ ಡಿ ಬಾಸ್ ದರ್ಶನ್ ಮೈಸೂರಿನಲ್ಲಿಯೇ ನೆಲೆಯೂರಿದ್ದಾರೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ರು. ಅವರ ಆಶ್ರಮದಲ್ಲಿರೋ ಗಿಣಿಗಳನ್ನೆಲ್ಲಾ ನೋಡಿ ಸಂಭ್ರಮಿಸಿದ್ರು. ಜಗ್ಗುದಾದ ಮೈಸೂರಿನ ತೋಟದ ಮನೆಯಲ್ಲಿ ಈಗಾಗ್ಲೇ ಹಲವು ರೀತಿಯ ಪಕ್ಷಿಗಳನ್ನ ಸಾಕಿದ್ದಾರೆ. ಈಗ ಅವರ ಫಾರಂ ಹೌಸ್ಗೆ ಗಣಪತಿ ಸಚ್ಚಿದಾನಂದ ಆಶ್ರಮದ ಗಿಣಿಯು ಹೊಸ ಅತಿಥಿಯಾಗಿ ಸೇರ್ಪಡೆಯಾಗಿದೆ.
ದರ್ಶನ್ ಕೆಲ ಹೊತ್ತು ಗಣಪತಿ ಸಚ್ಚಿದಾನಂದ ಆಶ್ರಮದ ಸಚ್ಚಿದಾನಂದ ಶ್ರೀಗಳ ಜೊತೆ ಮಾತುಕತೆ ನಡೆಸಿ, ಆಶೀರ್ವಾದ ಪಡೆದ್ರು. ಈ ವೇಳೆ ಶ್ರೀಗಳು ಐರಾವತನಿಗೆ ಆಶ್ರಮದ ಗಿಣಿಯನ್ನು ಉಡುಗೊರೆಯಾಗಿ ನೀಡಿದ್ರು.
ಅಂದ್ಹಾಗೆ ಈ ಗಿಣಿ ರೆಡ್ ಹೆಡೆಡ್ ಅಮೆಜಾನ್ ಜಾತಿಗೆ ಸೇರಿದೆ. ಶ್ರೀಗಳು ಕೊಟ್ಟ ಗಿಣಿಯನ್ನು ದರ್ಶನ್ ವಿನಯದಿಂದ ಸ್ವೀಕರಿಸಿದ್ದು ತಮ್ಮ ಫಾರಂ ಹೌಸ್ಗೆ ಕೊಂಡೊಯ್ಯಲಿದ್ದಾರೆ. ದರ್ಶನ್ ಫಾರಂ ಹೌಸ್ನಲ್ಲಿ ಈಗಾಗ್ಲೇ ಕುದುರೆ, ಹಸು, ಎತ್ತು, ಕುರಿ ಸೇರಿಂದ ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ.
ಇನ್ನು ದರ್ಶನ್ ರಾಬರ್ಟ್ ಭರ್ಜರಿ ಯಶಸ್ಸಿನ ಬಳಿಕೆ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಹೀಗಾಗಿ ಯಾವ ಸಿನಿಮಾ ಮೊದಲು ಸೆಟ್ಟೇರುತ್ತೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಅದ್ರಲ್ಲೂ ‘ರಾಜ ವೀರ ಮದಕರಿ ನಾಯಕ’ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದೆ. ಗೋಲ್ಡ್ ರಿಂಗ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಅನ್ನೋ ಮಾತು ಕೇಳಿಬರ್ತಿದೆ. ಹೀಗಾಗಿ ದರ್ಶನ್ ಮುಂದಿನ ಸಿನಿಮಾ ಯಾವುದು ಅಂತ ಡಿ ಬಾಸ್ ಕಾತುರದಿಂದ ಎದುರು ನೋಡ್ತಿದ್ದಾರೆ.