ಮಾಜಿ ಕೇಂದ್ರ ಸಚಿವ ಥಾವರ್ ಚಂದ್ ಗೆಹಲೋತ್ ಕರ್ನಾಟಕ ರಾಜ್ಯದ 19ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ನಿರ್ಗಮಿತ ರಾಜ್ಯಪಾಲ ವಜುಬಾಯ್ ಆರ್ ವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಉಪಸ್ಥಿತಿ ಇತ್ತು.
ರಾಜ್ಯದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಪ್ರತಿಜ್ಞಾ ವಿಧಿಯನ್ನು ಥಾವರ್ ಚಂದ್ ಗೆಹಲೋಟ್ಗೆ ಬೋಧಿಸಿದ್ರು. ರಾಜಭವನದ ಗಾಜಿನ ಮನೆಯಲ್ಲಿ ಈಶ್ವರನ ಹೆಸರಿನಲ್ಲಿ ನೂತನ ರಾಜ್ಯಪಾಲ ಅಧಿಕಾರ ಸ್ವೀಕರ ಮಾಡಿದ್ರು. ಈ ವೇಳೆ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಹೂಗುಚ್ಚ ನೀಡಿದ ಸ್ವಾಗತಿಸಿದ್ರು.
‘‘ಭಾರತ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಹಾಗೂ ಕರ್ನಾಟಕ ರಾಜ್ಯದ ಜನತೆಯ ಸೇವೆ ಮತ್ತು ಯೋಗಕ್ಷೇಮಕ್ಕಾಗಿ ಪ್ರತಿಬದ್ಧನಾಗಿರುತ್ತೇನೆಂದು ನಾನು ಇಂದು ಕರ್ನಾಟಕ ರಾಜ್ಯದ ರಾಜ್ಯಪಾಲನಾಗಿ ಪ್ರಮಾಣ ವಚನ ಸ್ವೀಕರಿಸಿರುತ್ತೇನೆ.’’ ಎಂದು ನೂತನ ರಾಜ್ಯಪಾಲ ಟ್ವೀಟ್ ಮಾಡಿದ್ದಾರೆ.
ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ 6 ವರ್ಷ 10 ತಿಂಗಳು ಕರ್ನಾಟಕ ರಾಜ್ಯಪಾಲರಾಗಿದ್ದರು. ಅವರ ಅವಧಿ ಮುಗಿದು 2 ವರ್ಷಗಳಾಗಿತ್ತು. ಹೀಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ್ಯಕ್ಕೆ ನೂತನ ರಾಜ್ಯಪಾಲರಾಗಿ ಗೆಹಲೋತ್ ಅವರನ್ನು ನೇಮಕ ಮಾಡಿದ್ದಾರೆ.