2013ರಲ್ಲಿ ಮಿಲ್ಕಾ ಸಿಂಗ್ ಸಿಂಗ್ ಜೀವನಾಧಾರಿತ ಚಿತ್ರ ಭಾಗ್ ಮಿಲ್ಕಾ ಭಾಗ್ ತೆರೆಕಂಡಿತ್ತು. ಅಥ್ಲೆಟ್ ಆಗಿ ಮಿಲ್ಕಾ ಸಿಂಗ್ ಮಾಡಿದ ಸಾಧನೆಯನ್ನು ಆ ಸಿನಿಮಾ ತೆರೆಮೇಲೆ ತಂದಿಟ್ಟಿತ್ತು. ಈ ಸಿನಿಮಾ ನೋಡಿವ್ರುಗೆ ಮಿಲ್ಕಾ ಸಿಂಗ್ ಸಾಧನೆಯ ಹಾದಿ ತುಳಿದಿದ್ದೇಗೆ ಅನ್ನೋದನ್ನು ಕಣ್ತುಂಬಿಕೊಂಡಿದ್ದರು. ಮತ್ತೆ ಮಿಲ್ಕಾ ಸಿಂಗ್ಗೆ ತೆರೆಮೇಲೆ ಜೀವ ತುಂಬಿದ್ದು, ಬಾಲಿವುಡ್ ನಟ ಫರ್ಹಾನ್ ಅಖ್ತರ್
ಈಗ ರಿಯಲ್ ಮಿಲ್ಕಾ ಸಿಂಗ್ ಬದುಕಿನ ಆಟ ಮುಗಿಸಿದ್ದಾರೆ. ಜೀವನದಲ್ಲಿ ಮಿಲ್ಕಾ ಸಿಂಗ್ರಿಂದ ಸ್ಪೂರ್ತಿ ಪಡೆದ ಫರ್ಹಾನ್ ಅಖ್ತರ್ ಈ ಸಂದರ್ಭದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ. ‘‘ಮಿಲ್ಕಾ ಅವ್ರೇ ನೀವು ಇನ್ನಿಲ್ಲ ಅನ್ನೋದನ್ನು ನನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಬಹುಶ: ಇದು ನಿಮ್ಮಿಂದಲೇ ಗಿಟ್ಟಿಸಿಕೊಂಡ ಹಠಮಾರಿ ಬದುಕದು. ನೀವು ಸದಾ ಜೀವಂತವಾಗಿರುತ್ತೀರಿ. ನೀವು ವಿನಯವಂತ ಹಾಗೂ ಹೃದಯವಂತ ವ್ಯಕ್ತಿಯಾಗಿದ್ರಿ.’’
‘‘ನೀವು ಕನಸುಗಳ ಪ್ರತಿನಿಧಿ. ಪ್ರಾಮಾಣಿಕತೆ, ಪರಿಶ್ರಮ ಮತ್ತು ಬದ್ಧತೆಯುಳ್ಳ ವ್ಯಕ್ತಿಯನ್ನು ಶಿಖರದೆತ್ತರಕ್ಕೆ ಕರ್ಕೊಂಡು ಹೋಗುತ್ತೆ ಎಂಬುದನ್ನು ಸಾಭೀತು ಪಡಿಸಿದ್ದೀರಿ. ನಿಮ್ಮನ್ನು ಪಡೆದ ಆತ್ಮೀಯರು ನಿಜಕ್ಕೂ ಧನ್ಯರು. ಉಳಿದವ್ರಿಗೆ ನಿಮ್ಮ ಜೀವನಗಾಥೆಯೇ ಸ್ಪೂರ್ತಿ, ಹೃದಯದಿಂದ ನಿಮ್ಮ ಪ್ರೀತಿಸುತ್ತೇನೆ.’’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಿಲ್ಕಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ‘‘ ಕೆಲವು ದಿನಗಳ ಹಿಂದೆ ನಾನು ಮಿಲ್ಕಾ ಸಿಂಗ್ ಅವರ ಜೊತೆ ಮಾತನಾಡಿದ್ದೆ. ಅದೇ ಕೊನೆಯ ಕರೆಯಾಗುತ್ತೆಂದು ನಾನು ಊಹಿಸಿರಲಿಲ್ಲ. ಮಿಲ್ಕಾ ಸಿಂಗ್ ಜೀವನ ಕ್ರೀಡಾಪಟುಗಳಿಗೆ ಸ್ಫೂರ್ತಿ. ಅವರ ಅಭಿಮಾನಿಗಳಿಗೆ ನಾನು ಸಂತಾಪ ಸೂಚಿಸುತ್ತೇನೆ.’’ ಎಂದು ಟ್ವೀಟ್ ಮಾಡಿದ್ದಾರೆ.