ಕಳೆದೊಂದು ವರ್ಷದಿಂದ ರಾಬರ್ಟ್ ಸಿನಿಮಾ ನೋಡೋಕೆ ಕಾದು ಕೂತಿದ್ದ ಅಭಿಮಾನಿಗಳಿಗೆ ಇಂದು ಸಂಭ್ರಮ. ಡಿ ಬಾಸ್ ರಾಬರ್ಟ್ ಅವತಾರದಲ್ಲಿ ನೋಡ್ಬೇಕು ಅಂತ ಕಾದುಕೂತಿದ್ದವರು ಇಂದು ಬೆಳಗ್ಗೆಯಿಂದ್ಲೇ ಥಿಯೇಟರ್ ಮುಂದೆ ಜಮಾಯಸಿದ್ದರು. ದರ್ಶನ್ ಡೈ ಹಾರ್ಡ್ ಫ್ಯಾನ್ಸ್ಗಾಗೇ ಬೆಂಗಳೂರಿನ 12 ಥಿಯೇಟರ್ಗಳಲ್ಲಿ ಬೆಳ್ಳಬೆಳಗ್ಗೆ 6 ಗಂಟೆಯಿಂದ್ಲೇ ಮೊದಲ ಶೋ ಆರಂಭ ಆಗಿದೆ.
ತರುಣ್ ಸುಧೀರ್ ನಿರ್ದೇಶಿಸಿರೋ ರಾಬರ್ಟ್ ಎರಡು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ 1500ಕ್ಕೂ ಅಧಿಕ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ಬೆಳಗಿನ ಶೋ ಗೆ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಬೆಂಗಳೂರಿನಲ್ಲಿ ಬಹುತೇಕ 12 ಚಿತ್ರಮಂದಿರಗಳೂ ಫಸ್ಟ್ ಡೇ ಫಸ್ಟ್ ಶೋ ಹೌಸ್ಫುಲ್ ಆಗಿವೆ.
ಈಗಾಗ್ಲೇ ಸಿನಿಮಾ ನೋಡುತ್ತಿರುವವರ ಪ್ರಕಾರ ದರ್ಶನ್, ಹೆಡ್ ಕುಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ದಾಸನ ಒಂದು ಅವತಾರವಷ್ಟೇ.. ಇನ್ನೊಂದು ಅವತಾರಕ್ಕಾಗಿ ದರ್ಶನ್ ಫ್ಯಾನ್ಸ್ ಕಾತುರದಿಂದ ಕಾದು ಕೂತಿದ್ದಾರೆ. ಹೀಗಾಗಿ ಸೆಕೆಂಡ್ ಹಾಫ್ನಲ್ಲಿ ರಾಬರ್ಟ್ ಅಸಲಿ ಅವತಾರ ಅನಾವರಣ ಗೊಳ್ಳಲಿದೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಬರ್ಟ್ ಭವಿಷ್ಯನೂ ಫ್ಯಾನ್ಸ್ ಶೋ ನಿಂದ್ಲೇ ಹೊರಬೀಳಲಿದೆ. ಡಿ ಬಾಸ್ ಎರಡು ಅವತಾರ ನೋಡಿ ಫ್ಯಾನ್ಸ್ ಖುಷಿ ಹೇಗಿದೆ? ರಾಬರ್ಟ್ ಹೈಲೈಟ್ ಏನು? ಏನಿಷ್ಟ? ಏನಿಷ್ಟ ಆಗ್ಲಿಲ್ಲ. ಇವೆಲ್ಲವೂ ತಿಳಿಯೋಕೆ ಹೆಚ್ಚು ಸಮಯವೇನಿಲ್ಲ.