ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನನ್ನ ನೋಡಿ ಕೇಕ್ ಕತ್ತರಿಸಿ, ಕೈಕುಲುಕಿ ವಿಶ್ ಮಾಡಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ಈ ವರ್ಷವೂ ನಿರಾಸೆಯಾಗಿದೆ. ಕೊರೋನಾ ಹಾವಳಿ ಹಿನ್ನಲೆ ಕಳೆದ ವರ್ಷವೂ ಅಪ್ಪು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ವರ್ಷವೂ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂತ ಪುನೀತ್ ರಾಜ್ ಕುಮಾರ್ ಕೆಲ ದಿನಗಳಿಂದ ಹೇಳಿಕೊಂಡು ಬಂದಿದ್ರು. ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಭೇಟಿಕೊಡುವ ಮೂಲಕ ಅಪ್ಪು ಹುಟ್ಟುಹಬ್ಬ ಆಚರಿಸಿದ್ದಾರೆ. ಅಭಿಮಾನಿಗಳಿಗೆ ಸಿಗದೇ ಇದ್ರೂ, ಬೊಂಬಾಟ್ ಗಿಫ್ಟ್ಗಳು ಸಿಕ್ಕಿದೆ.


ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಎರಡು ಹೊಸ ಸಿನಿಮಾಗಳು ಘೋಷಣೆಯಾಗಿದೆ. ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ನಟಿಸಲಿರೋ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಈ ಚಿತ್ರವನ್ನ ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ. ಕೆಲ ದಿನಗಳ ಹಿಂದೆಯೇ ಈ ಸಿನಿಮಾ ವಿಚಾರ ಸುದ್ದಿಯಾಗಿತ್ತು. ಇದೀಗ ದಿನಕರ್ ಪ್ರೊಡಕ್ಷನ್ ನಂ. 24 ಸಿನಿಮಾ ಘೋಷಿಸಿದ್ದಾರೆ. ಇನ್ನು ‘ಹೆಬ್ಬುಲಿ’ ಸಿನಿಮಾ ನಿರ್ದೇಶಕ ಕೃಷ್ಣ ನಿರ್ದೇಶನದಲ್ಲೂ ಪುನೀತ್ ಸಿನಿಮಾ ಪೈನಲ್ ಆಗಿದ್ದು, ಪ್ರೊಡಕ್ಷನ್ #2 ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಬೇಹುಗಾರಿಕೆ ಮತ್ತು ಭಾರತದ ಗುಪ್ತಚರ ವ್ಯವಸ್ಥೆಯ ಕುರಿತಾದ ಕಥೆ ಈ ಚಿತ್ರದಲ್ಲಿ ಇರಲಿದೆ.


New movie of Punith Rajkumar
ಪುನೀತ್ ರಾಜ್ ಕುಮಾರ್ ಬರ್ತಡೇ ಸ್ಪೆಷಲ್ಲಾಗಿ ‘ಜೇಮ್ಸ್’ ಚಿತ್ರದ ಬೊಂಬಾಟ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಬಹದ್ದೂರ್ ಚೇತನ್ ನಿರ್ದೇಶನದ ಜೇಮ್ಸ್ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಇನ್ನು ‘ಯುವರತ್ನ’ ಚಿತ್ರದಿಂದಲೂ ಅಪ್ಪು ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಕ್ಕಿದೆ. ‘ಫೀಲ್ ದ ಪವರ್’ ಸಾಂಗ್ ವೀಡಿಯೋ ಪ್ರೋಮೋ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಗಡ್ಡ ಬಿಟ್ಟು ಸ್ಟೈಲಿಶ್ ಲುಕ್ ನಲ್ಲಿ ಪುನೀತ್, ಪವರ್ ಫುಲ್ ಸ್ಟೆಪ್ಸ್ ಹಾಕಿದ್ದು ಹಾಡು ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಬರ್ತ್ ಡೇ ದಿನ ನೆಚ್ಚಿನ ನಟನನ್ನ ನೋಡೋಕೆ ಆಗಲಿಲ್ಲ, ವಿಶ್ ಮಾಡೋಕೆ ಸಾಧ್ಯವಾಗಲಿಲ್ಲ ಅನ್ನೋ ಬೇಸರದ ನಡುವೆಯೂ ಈ ಉಡುಗೊರೆಗಳು ಅಭಿಮಾನಿಗಳಿಗೆ ಖುಷಿಕೊಡ್ತಿದೆ. ಏಪ್ರಿಲ್ 1ಕ್ಕೆ ‘ಯವರತ್ನ’ ರಿಲೀಸ್ ಗೆ ಕಾಯ್ತಿದ್ದಾರೆ. ಅದಕ್ಕೂ ಮೊದಲು ಚಿತ್ರದ ಪ್ರಮೋಷನ್ ಗಾಗಿ ಪುನೀತ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಡ್ತಿದ್ದಾರೆ.