ಬಾ ಬಾ ನಾ ರೆಡಿ ಹಾಡಿನ ಮೂಲಕ ರಾಬರ್ಟ್ ಸೆಕೆಂಡ್ ಹಾಫ್ ಶುರುವಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು twists and turns ಇದೆ. ಫಸ್ಟ್ ಹಾಫ್ ಗಿಂತಲೂ ಸೆಕೆಂಡ್ ಹಾಫ್ ಸಖತ್ ಕಿಕ್ ಕೊಡುತ್ತದೆ. ಡಿ ಬಾಸ್ ಹೊಸಾ ಅವತಾರ ಬಹಳ ಅಚ್ಚರಿ ಜೊತೆಗೆ ಅದ್ಧೂರಿಯಾಗಿದೆ.
ತರುಣ್ ಸುಧೀರ್ ಡೈರೆಕ್ಷನ್ ನಲ್ಲಿ ರಾಬರ್ಟ್ ಮಾಸ್ & ಕ್ಲಾಸ್ ಎರಡೂ ವರ್ಗದ ವೀಕ್ಷಕರಿಗೆ ಮೆಚ್ಚುಗೆಯಾಗುತ್ತದೆ. ಸೂಪರ್ ಹಿಟ್ ಸಾಂಗ್ಸ್ ಅಷ್ಟೇ ಅದ್ಧೂರಿಯಾಗಿ ಸೆರೆಹಿಡಿದಿದ್ದಾರೆ. ಅರ್ಜುನ್ ಜನ್ಯ ಸಂಗೀತ ರಾಬರ್ಟ್ ಹೈಲೈಟ್. ಈಗಾಗಲೇ ಎಲ್ಲಾ ಹಾಡುಗಳೂ ಸಖತ್ ಸೌಂಡ್ ಮಾಡುತ್ತಿದ್ದು ಚಿತ್ರದ ಕತೆಯ ಜೊತೆಗೇ ಅವುಗಳನ್ನು ನೋಡಿದಾಗ ಬೇರೆಯೇ ಫೀಲ್ ಕೊಡುತ್ತದೆ.
ಇಡೀ ಚಿತ್ರದ main attraction ಡಿ ಬಾಸ್ ದರ್ಶನ್. ಶಿವರಾತ್ರಿ ಸಂದರ್ಭಕ್ಕೆ ತಕ್ಕಂತೆ ಬಂದಿದ್ದಾನೆ ರಾಬರ್ಟ್. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ. ಪಕ್ಕಾ ಫ್ಯಾಮಿಲಿ ಎಂಟರ್ಟೇನರ್ ಕೂಡಾ ಆಗಿರೋದ್ರಿಂದ ಭರ್ಜರಿ ಗೆಲುವು ಗ್ಯಾರಂಟಿ. ಚಿತ್ರತಂಡ ಮೊದಲೇ ಹೇಳಿದಂತೆ ಶಬರಿ ಮುಂದೆ ಸೋಲುವ ರಾವಣನ ಮುಂದೆ ಗೆಲ್ಲುವ ರಾಬರ್ಟ್ ಇಲ್ಲಿದ್ದಾನೆ.