ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’ ಶಿವರಾತ್ರಿಯ ದಿನ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಜೈ ಶ್ರೀರಾಮ್ ಹಾಡಿನ ಮೂಲಕ ಸಿನಿಮಾ ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಶುರುವಾಗಿದೆ.ಬೆಂಗಳೂರಿನ ಸುಮಾರು 12 ಥಿಯೇಟರ್ ಗಳಲ್ಲಿ ರಾಬರ್ಟ್ ಮುಂಜಾನೆ 6 ಗಂಟೆಗೆ ಮೊದಲ ಶೋ ಶುರುವಾಗಿದೆ. ಮುಂಗಡವಾಗಿ ಟಿಕೆಟ್ ಕೊಂಡಿದ್ದ ಅಭಿಮಾನಿಗಳು ಹನುಮನ ವೇಷದಲ್ಲಿ ದರ್ಶನ್ ಎಂಟ್ರಿ ಕೊಡುತ್ತಿದ್ದಂತೆ ಹುಚ್ಚೆದ್ದು ಕುಣಿದಾಡಿದ್ದಾರೆ.
ರಾಬರ್ಟ್ ಸಿನಿಮಾ ಕತೆ ಉತ್ತರ ಪ್ರದೇಶದಲ್ಲಿ ಶುರುವಾಗುತ್ತದೆ. ಫಸ್ಟ್ ಹಾಫ್ ನಲ್ಲಿ ಮುಗ್ಧ ರಾಘವನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ದು ಬಾಣಸಿಗನ ಪಾತ್ರ..ಕೇಟರಿಂಗ್ ಸರ್ವಿಸ್ ಒಂದರ ಹೆಡ್ ಕುಕ್ ಆಗಿ ಮಿಂಚಿದ್ದಾರೆ ದಾಸ. ಅದೇ ಕೇಟರಿಂಗ್ ಸೆಂಟರ್ ನಲ್ಲಿ ಚಿಕ್ಕಣ್ಣ, ಶಿವರಾಜ್ ಕೆ. ಆರ್ ಪೇಟೆ, ಧರ್ಮಣ್ಣ ಸಹಾಯಕ ಅಡುಗೆ ಭಟ್ಟರಾಗಿ ಕಾಣಿಸಿಕೊಂಡಿದ್ದಾರೆ. ಈ ತಂಡ ಇದ್ಮೇಲೆ ಇಡೀ ಚಿತ್ರದಲ್ಲಿ ಕಾಮಿಡಿಗೇನೂ ಮೋಸ ಇಲ್ಲ. ಕೇಟರಿಂಗ್ ಸೆಂಟರ್ ಮಾಲೀಕನಾಗಿ ಹಿರಿಯ ನಟ ಅಶೋಕ್ ಕಾಣಿಸಿಕೊಂಡಿದ್ದಾರೆ. ನಾಯಕಿ ಆಶಾ ಭಟ್ ಮಾಲೀಕನ ಮಗಳು. ರಾಬರ್ಟ್ ಮುಗ್ಧತೆ ಕಂಡು ನಾಯಕಿಗೆ ಲವ್ ಆಗುತ್ತೆ.
ಸುತ್ತ ಇರುವವರ ನಡುವೆ ಮಗ್ಧನಂತೆ ಕಾಣಿಸುವ ರಾಘವ, ತನ್ನವರ ತಂಟೆಗೆ ಬಂದ್ರೆ ಮಾತ್ರ ಸೈಲೆಂಟ್ ಆಗಿ ಬೆಂಡೆತ್ತಿ ಬ್ರೇಕ್ ಹಾಕ್ತಾನೆ. ದರ್ಶನ್ ಸಿನಿಮಾ ಅಂದ್ಮೇಲೆ ಫೈಟ್ ಇಲ್ಲದೇ ಇದ್ರೆ ಹೇಗೆ? ಕಾಶಿಯಲ್ಲಿ ಜನರ ನಡುವೆಯೇ ನಡೆಯೋ ಸೈಲೆಂಟ್ ಫೈಟ್ ರಾಬರ್ಟ್ ಚಿತ್ರದ ಫಸ್ಟ್ ಹಾಫ್ ನ ಹೈಲೈಟ್. ಉತ್ತರ ಪ್ರದೇಶದಲ್ಲಿ ಇರುವ ರಾಘವ, ನಿಜವಾಗ್ಲೂ ರಾಘವನಾ? ಅಥವಾ ಅವನೇ ರಾಬರ್ಟಾ? ಇಂಟರ್ವಲ್ ನಲ್ಲಿ ಉತ್ತರ ಸಿಗುತ್ತೆ.
ರಾಬರ್ಟ್ ಪಕ್ಕಾ ಕರ್ಮಷಿಯಲ್ ಸಿನಿಮಾ. ಆದರೂ ಬಹಳ ಡಿಫರೆಂಟ್ ಆಗಿ ತಯಾರಾಗಿದೆ. ಬಿಕ್ಕಳಿಸಿಕೊಂಡು ಮಾತನಾಡುವ ನಾಯಕನ ಪಾತ್ರದಲ್ಲಿ ದರ್ಶನ್ ಆಕ್ಟಿಂಗ್ ಸೂಪರ್ ಆಗಿದೆ. ನಾಯಕನ ಕ್ಯಾರೆಕ್ಟರೈಸೇಶನ್ ಬೊಂಬಾಟ್ ಆಗಿದ್ದು ಅದೇ ಚಿತ್ರವನ್ನು ಗೆಕುವಿನ ಹಾದಿಗೆ ಕೊಂಡೊಯ್ಯುತ್ತಿದೆ. ಒಂದು ದೊಡ್ಡ ಗ್ಯಾಪ್ ನಂತರ ದರ್ಶನ್ ನ್ನು ಥಿಯೇಟರ್ ನಲ್ಲಿ ನೋಡ್ತಿರೋ ಅಭಿಮಾನಿಗಳು ಡಿ ಬಾಸ್ ಖದರ್ ನೋಡಿಯೇ ಫಿದಾ ಆಗ್ಬಿಟ್ಟಿದ್ದಾರೆ.ಸುತ್ತ ಇರುವವರ ನಡುವೆ ಮಗ್ಧನಂತೆ ಕಾಣಿಸುವ ರಾಘವ, ತನ್ನವರ ತಂಟೆಗೆ ಬಂದ್ರೆ ಮಾತ್ರ ಸೈಲೆಂಟ್ ಆಗಿ ಬೆಂಡೆತ್ತಿ ಬ್ರೇಕ್ ಹಾಕ್ತಾನೆ.