ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿದ ಪೊಗರು ಲಾಕ್ಡೌನ್ ಬಳಿಕ ಅದ್ಧೂರಿಯಾಗಿ ಬಿಡುಗಡೆಯಾಗದ ಮೊದಲ ಸಿನಿಮಾ ಆಗಿತ್ತು. ನಿರೀಕ್ಷೆಯಂತೆ ಜನರು ಮುಗಿಬಿದ್ದು ಸಿನಿಮಾ ನೋಡಿದ್ರು. ಸಿನಿಮಾ ಬಿಡುಗಡೆಯಾಗಿ 50 ದಿನ ಪೂರೈಸುವುದರೊಳಗೆ ಪೊಗರು ಕಿರುತೆರೆಯಲ್ಲಿ ಪ್ರಸಾರ ಆಗಿತ್ತು. ಯುಗಾದಿ ಹಬ್ಬಕ್ಕೆ ಭರ್ಜರಿ ಮನರಂಜನೆ ನೀಡಿದ ಪೊಗರುಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.
ಕಿರುತೆರೆಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಕಾರ್ಯಕ್ರಮವನ್ನು ಎಷ್ಟು ಮಂದಿ ವೀಕ್ಷಿಸಿದ್ದಾರೆ? ಅದು ಯಾವ ಸ್ಥಾನದಲ್ಲಿದೆ ಅನ್ನೋದನ್ನ ಹೇಳುವ ಸಂಸ್ಥೆ ಬಾರ್ಕ್. ಇದರ ಪ್ರಕಾರ ಏಪ್ರಿಲ್ 10 ರಿಂದ 16ರ ವರೆಗೆ ಪ್ರಸಾರವಾದ ಕಾರ್ಯಕ್ರಮಗಳ ಪೈಕಿ ಪೊಗರುಗೆ ಮೊದಲ ಸ್ಥಾನವಿದೆ. ಯುಗಾದಿ ಹಬ್ಬಕ್ಕೆ ಪ್ರಸಾರವಾಗಿದ್ದ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಸಿನಿಮಾ ನಂ1 ಸ್ಥಾನದಲ್ಲಿದೆ.
ಮೊದಲ ಸ್ಥಾನ KFF-POGARU ಉದಯ ಟಿವಿ 8785
2ನೇ ಸ್ಥಾನ Zee Kutumba Utsava ಜೀ ಕನ್ನಡ 5518
3ನೇ ಸ್ಥಾನ Sathya ಜೀ ಕನ್ನಡ 4363
4ನೇ ಸ್ಥಾನ Naagini 2 ಜೀ ಕನ್ನಡ 3616
5ನೇ ಸ್ಥಾನ Mangala Gowri Maduve ಕಲರ್ಸ್ ಕನ್ನಡ 3602
Source: BARC
ಪೊಗರು ಸಿನಿಮಾವನ್ನ ಅತೀ ಹೆಚ್ಚು ಮಂದಿ ವೀಕ್ಷಿಸಿದ್ದು, ಕೇವಲ ಬಿಗ್ ಸ್ಕ್ರೀನ್ನಲ್ಲಿ ಅಷ್ಟೇ ಅಲ್ಲ. ಸ್ಮಾಲ್ ಸ್ಕ್ರೀನ್ನಲ್ಲೂ ಜನರಿಗೆ ಇಷ್ಟ ಆಗಿದೆ. ಧ್ರುವ , ರಶ್ಮಿಕಾ ಮಂದಣ್ಣ ಮೊದಲ ಕಾಂಬಿನೇಷನ್, ನಂದಕಿಶೋರ್ ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ಪ್ರೇಕ್ಷಕರಿಗೆ ಮಜಾ ಕೊಟ್ಟಿದೆ.