ಕಸ್ತೂರಿ ನಿವಾಸ ಕೇವಲ ಸಿನಿಮಾ ಅಷ್ಟೇ ಅಲ್ಲ. ಅದು ದೊಡ್ಮನೆಯ ಗುರುತು. ಭಾಷೆ, ನೆಲ, ಜಲ ಜನ ಅಂತ ಬಂತ ಬಂದ್ರೆ ದೊಡ್ಮನೆ ಕುಟುಂಬ ಸದಾ ಮುಂದಿರುತ್ತೆ. ಕೊರೊನಾ ಲಾಕ್ಡೌನ್ ಅನ್ನೋ ಈ ಸಂಕಷ್ಟದ ಸಮಯದಲ್ಲಿ ಶಿವಣ್ಣ ಹಾಗೂ ಅವರ ಪತ್ನಿ ಹಸಿವರ ಹೊಟ್ಟೆ ತುಂಬಿಸೋಕೆ ಮುಂದಾಗಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗೂ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ನಾಗಾವರದ ಸುತ್ತಮುತ್ತ ಹಸಿದ ಬಡವರಿಗೆ ಊಟ, ತಿಂಡಿ ನೀಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಇವರಿಗೆ ಶಿವಣ್ಣನ ಅಭಿಮಾನಿಗಳು ಜೊತೆಯಾಗಿದ್ದಾರೆ.
ಶಿವಣ್ಣ ನೆಲೆಸಿರೋ ನಾಗಾವರ ಏರಿಯಾದ ಸುತ್ತಮುತ್ತ ಪ್ರತಿನಿತ್ಯ 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆಯನ್ನ ಮಾಡಿದ್ದಾರೆ. ಬೊಲೇರೋ ಕ್ಯಾಂಟ್ರೋ ವಾಹನವನ್ನ ಶಿವಣ್ಣ ಆರೇಂಜ್ ಮಾಡಿದ್ದು, ಈ ವಾಹನದಲ್ಲೇ ಪ್ರತಿನಿತ್ಯ ಊಟ ತಿಂಡಿ ಬಡವರಿಗೆ ತಲುಪಿಸಲಾಗುತ್ತಿದೆ.
ಅಂದ್ಹಾಗೆ ‘ಆಸರೆ’ ಅನ್ನೋ ಕಾರ್ಯಕ್ರಮದಡಿ ಈ ಹಸಿದವರಿಗೆ ಊಟ ಶಿವಣ್ಣ ಮತ್ತು ಅವ್ರ ತಂಡ ಊಟ ನೀಡುತ್ತಿದ್ದಾರೆ. ಇದು ಇನ್ನೂ 10ದಿನಗಳವರೆಗೂ ಮುಂದುವರೆಯಲಿದೆ. ಲಾಕ್ಡೌನ್ ಹೀಗೆ ಮುಂದುವರೆದ್ರೆ ಇನ್ನೂ ಪ್ರತಿ ದಿನ ಸಾವಿರ ಜನರಿಗೆ ಊಟ, ತಿಂಡಿ ನೀಡಲು ಶಿವಣ್ಣ ಮುಂದಾಗಿದ್ದಾರೆ.