ಸೋನು ಸೂದ್ ಬಹಳಷ್ಟು ಮಂದಿಯ ಪಾಲಿಗೆ ತೆರೆಮೇಲಷ್ಟೇ ಅಲ್ಲ, ತೆರೆಯ ಹಿಂದೆನೂ ಹೀರೋ. ಕೊರೊನಾ ಮೊದಲ ಅಲೆಯಲ್ಲಿ ತಾವೇ ಸ್ವತ: ಫೀಲ್ಡಿಗಿಳಿದು, ತಮ್ಮದೇ ಖರ್ಚಿನಲ್ಲಿ ಕಾರ್ಮಿಕರನ್ನು ತಮ್ಮ ಊರಿಗೆ ಕಳುಹಿಸಲು ನೆರವಾಗಿದ್ದರು. ಎರಡನೇ ಅಲೆಯಲ್ಲಿ ಮತ್ತಷ್ಟು ಸಕ್ರಿಯರಾಗಿರೋ ಸೋನು ಸೂದ್ ತಮ್ಮ ಚಾರಿಟೆಬಲ್ ಟ್ರಸ್ಟ್ ವತಿಯಿಂದ ತಮ್ಮ ಕೈಲಾದಷ್ಟು ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಆಕ್ಸಿಜನ್ ಬೇಕು ಅಂದೋರಿಗೆ ಆಕ್ಸಿಜನ್.. ಔಷಧಿ ಬೇಕು ಅಂದೋರಿಗೆ ಔಷಧಿಯನ್ನು ವದಗಿಸುತ್ತಿದ್ದಾರೆ. ಇದೇ ವೇಳೆ ಅಪದ್ಬಾಂದವ ಎನಿಸಿಕೊಂಡಿರೋ ಸೋನು ಸೂದ್ ವಿರುದ್ಧ ವೈದ್ಯರು ತಿರುಗಿಬಿದ್ದಿದ್ದಾರೆ.
ಸೋನು ಸೂದ್ ಇತ್ತೀಚೆಗೆ ಮಾಡಿದ ಒಂದು ಟ್ವೀಟ್ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದೆ. ‘‘ಒಂದು ಸರಳ ಪ್ರಶ್ನೆ. ಒಂದು ಇಂಜೆಕ್ಷನ್ ಎಲ್ಲಿವೂ ಲಭ್ಯವಿಲ್ಲವೆಂದಾದರೆ ಅದೇ ಔಷಧಿಯನ್ನು ಶಿಫಾರಸ್ಸು ಮಾಡುವುದೇಕೆ? ಅದಕ್ಕೆ ಬದಲಾಗಿ ಬೇರೆ ಔಷಧಿಯನ್ನು ಯಾಕೆ ಬಳಸುವುದಿಲ್ಲ’’ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಕೆಲವು ವೈದ್ಯರ ನಿದ್ದೆಕೆಡಿಸಿದೆ. ಸೋನು ಸೂದ್ ಟ್ವೀಟ್ ಮಾಡುತ್ತಿದ್ದಂತೆ ಕೆಂಡಾಮಂಡಲವಾಗಿರೋ ವೈದ್ಯರ ಸೋನು ಸೂದ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ವೈದ್ಯರು ಈಗಾಗ್ಲೇ ಅನುಮತಿ ನೀಡಿರುವ ಔಷಧಿಯನ್ನು ಮಾತ್ರ ನೀಡಲು ಸಾಧ್ಯ. ಸುಖಾಸುಮ್ಮನೆ ಏನೇನೋ ಬರೆಯಲು ಸಾಧ್ಯವಿಲ್ಲ. ಸಾವಿರಾರ ವೈದ್ಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪುತ್ತಿದ್ದಾರೆ ಅದು ನೆನಪಿರಲಿ. ಸುಮ್ಮನೆ ಏನೇನೋ ಹೇಳಿ ವೈದ್ಯರು ಹಾಗೂ ಪಬ್ಲಿಕ್ ನಡುವೆ ಭಿನ್ನಾಭಿಪ್ರಾಯ ತರಬೇಡಿ’’ ಎಂದು ಸಿಟ್ಟು ಹೊರಹಾಕಿದ್ದಾರೆ.
ಈ ಟ್ವೀಟ್ ವಿಚಾರದಲ್ಲಿ ವೈದ್ಯರ ಪಾಲಿಗೆ ಸೋನು ಸೂದ್ ವಿಲನ್ ಆಗಿರ್ಬಹುದು. ಆದ್ರೆ, ಜನರ ಪಾಲಿಗೆ ಸೋನು ರಿಯಲ್ ಹೀರೋ ಆಗಿದ್ದಾರೆ. ಒಬ್ಬ ಸಾಮಾನ್ಯ ನಟನಾಗಿ ಜನರ ಜೀವ ಉಳಿಸಲು ಮುಂದಾಗಿರೋದು ಸಾಮಾನ್ಯ ಕೇಸವೇನಲ್ಲ. ಈ ನಟನಿಂದ ಮತ್ತಷ್ಟು ಸೇವೆ ಮುಂದುವರೆಯಲಿ ಎಂದು ಜನರು ಬಯಸುತ್ತಿದ್ದಾರೆ.