ಕನ್ನಡ ಬಿಗ್ ಬಾಸ್ ಮನೆ ದಿನೇ ದಿನೇ ಸಾಕಷ್ಟು ಚರ್ಚೆಯಲ್ಲಿದೆ. ಇಲ್ಲಿ ರಾಗ ದ್ವೇಷಗಳೆಲ್ಲಾ ಯಥೇಚ್ಛವಾಗಿ ನಡೆಯುತ್ತಿದೆ. ಈಗ ಸದ್ಯಕ್ಕೆ ಬಿಗ್ ಬಾಸ್ ಅಭಿಮಾನಿಗಳಿಗೆ ಕುತೂಹಲ ಹುಟ್ಟಿಸ್ತಿರೋದು ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ನಡುವಿನ ಸಂಬಂಧ. ಇದೊಂಥರಾ ದಿವ್ಯಾ ವರ್ಸಸ್ ದಿವ್ಯಾ ಎನ್ನುವಂತೆ ಮೇಲ್ನೋಟಕ್ಕೆ ಕಾಣ್ತಿದೆ.
ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ನಡುವೆ ಕುಛ್ ಕುಛ್ ಹೋ ರಹಾ ಹೈ ಅಂತ ಎಲ್ಲರಿಗೂ ಅನಿಸುತ್ತಲೇ ಇದೆ. ಬಿಗ್ ಬಾಸ್ ಮನೆಯೊಳಗೆ ಬಂದ ಮೊದಲ ವಾರದಿಂದಲೂ ಇವರಿಬ್ಬರೂ ಸ್ವಲ್ಪ ಜಾಸ್ತಿನೇ ಕ್ಲೋಸ್ ಆಗಿದ್ದಾರೆ. ನಿರಂತರವಾಗಿ ಮೂರು ವಾರಗಳವರಗೆ ಇದೇ ಕದ್ದು ಕದ್ದು ಪ್ರೇಮಗೀತೆ ಹಾಡೋ ಕೆಲಸ ನಡೆಯುತ್ತಿದೆ ಎನ್ನುವಂತೆಯೇ ಇತ್ತು. ಆದ್ರೆ ಈಗ ನಾಲ್ಕನೇ ವಾರಕ್ಕೆ ಧಿಡೀರನೆ ವಾತಾವರಣ ಬದಲಾದಂತಿದೆ.
ಯಾಕಂದ್ರೆ ದಿವ್ಯಾ ಸುರೇಶ್ ಗೆ ಈಗ ಮಂಜು ಮೇಲೆ ಆಸಕ್ತಿ ಕಡಿಮೆ ಆದಂತಿದೆ. ಇಲ್ಲಿವರಗೆ ಇವರು ಆಡಿದ್ದೆಲ್ಲಾ ನಾಟಕವಾ ಎಂದು ಎನಿಸುವಂತಿದೆ. ಈ ನಡುವೆ ದಿವ್ಯಾ ಉರುಡುಗ ಮತ್ತು ಅರವಿಂದ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇವರಿಬ್ಬರೂ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ನಿಜ, ಆದರೆ ತಮಗೆ ಆಸಕ್ತಿ ಇರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ಆದರೆ ಯಾಕೋ ದಿವ್ಯಾ ಉರುಡುಗ ಮತ್ತು ಅರವಿಂದ್ ನಡುವಿನ ಪ್ರೇಮ ಪ್ರಕರಣದಲ್ಲಿ ದಿವ್ಯಾ ಸುರೇಶ್ ವಿಲನ್ ಆಗುವ ಎಲ್ಲಾ ಲಕ್ಷಣಗಳಿವೆ. ದಿವ್ಯಾ ಸುರೇಶ್ ಅರವಿಂದ್ ಮೈಮೇಲೆ ಬಿದ್ದು ಮಾತಾಡ್ತಿದ್ದಾರೆ. ಅರವಿಂದ್ ಮೇಲೆ ಅವರ ಆಸಕ್ತಿ ಹೆಚ್ಚಾದಂತಿದೆ. ಅಷ್ಟೇ ಅಲ್ಲ, ದಿವ್ಯಾ ಉರುಡುಗ ಮತ್ತು ಅರವಿಂದ್ ಜೊತೆಗಿದ್ದಾಗೆಲ್ಲಾ ಮಧ್ಯ ನುಸುಳುತ್ತಿದ್ದಾರೆ ದಿವ್ಯ. ಈ ವಿಚಾರ ಮನೆಯವರ ಗಮನಕ್ಕೂ ಬಂದಿದೆ, ಜೊತೆಗೆ ಪ್ರೇಕ್ಷಕರಲ್ಲೂ ಸಾಕಷ್ಟು ಗೊಂದಲ ಮೂಡಿಸುವಂತಾಗಿದೆ. ಎಲ್ಲಾ ಬೆಳವಣಿಗೆ ಎಲ್ಲಿವರೆಗೆ ಹೋಗಿ ತಲುಪುತ್ತೋ ಎನ್ನುವುದು ಮಾತ್ರ ಕಾದು ನೋಡಲೇಬೇಕಾದ ವಿಚಾರ.