ತಮಿಳು ಸಿನಿಮಾ ನಿರ್ದೇಶಕ ಶಂಕರ್ ದೊಡ್ಡ ಮಗಖ ಮದುವೆ ನಿಶ್ಚಯವಾಗಿದೆ. ಕೊರೊನಾ ಆತಂಕದ ನಡುವೆ ಕೆಲವೇ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ಮಾಡಲು ಸಿದ್ಧತೆ ನಡೀತಿದೆ. ಜಂಟಲ್ ಮನ್, ಮೊದಲ್ವನ್, ಇಂಡಿಯನ್, ಅನ್ನಿಯನ್, ಶಿವಾಜಿ, ರೋಬೋ ರೀತಿಯ ಟ್ರೆಂಡ್ ಸೆಟ್ಟರ್ ಸಿನಿಮಾಗಳನ್ನ ಕೊಟ್ಟ ಸ್ಟಾರ್ ಡೈರೆಕ್ಟರ್ ಶಂಕರ್ ಅವರಿಗೆ ಮೂವರು ಮಕ್ಕಳು. ದೊಡ್ಡ ಮಗಳು ಅದಿತಿ, ಚಿಕ್ಕವಳು ಐಶ್ವರ್ಯ ಮಗನ ಹೆಸರು ಅರ್ಜಿತ್. ಇದೀಗ ದೊಡ್ಡ ಮಗಳ ಅದಿತಿ ಮದುವೆ ಸಿದ್ಧತೆಯಲ್ಲಿ ಶಂಕರ್ ಬ್ಯುಸಿ ಆಗಿದ್ದಾರೆ.
ಶಂಕರ್ ಮಗಳು ಅದಿತಿ ಕೈ ಹಿಡಿಯಲಿರೋ ಹುಡುಗ ತಮಿಳುನಾಡು ಕ್ರಿಕೆಟ್ ಆಟಗಾರ. ತಮಿಳುನಾಡು ಪ್ರೀಮಿಯರ್ ಲೀಗ್ ಆಟಗಾರ ರೋಹಿತ್ ದಾಮೋದರನ್ ಜೊತೆ ಅದಿತಿ ಶಂಕರ್ ಮದುವೆ ಫಿಕ್ಸ್ ಆಗಿದೆ. ಹುಡುಗನ ತಂದೆ ದೊಡ್ಡ ಬ್ಯುಸಿನೆಸ್ ಮನ್. ಅಷ್ಟೇ ಅಲ್ಲ ಮಧುರೆ ಪ್ಯಾಂಥರ್ಸ್ ತಂಡದ ಮಾಲೀಕ. ಅದೇ ತಂಡದಲ್ಲಿ ರೋಹಿತ್ ಸಹ ಆಡುತ್ತಿದ್ದಾರೆ. ಮಧುಮಗಳು ಅದಿತಿ ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ.
ಪೊಲ್ಲಾಚ್ಚಿಯಲ್ಲಿ ರೋಹಿತ್, ಅದಿತಿ ಮದುವೆಗಾಗಿ ದೊಡ್ಡ ಸೆಟ್ ನಿರ್ಮಾಣವಾಗಿದೆ. ಇನ್ನು ಮದುವೆಗೆ ಕೆಲವೇ ಆಪ್ತರನ್ನು ಆಹ್ವಾನಿಸಲಾಗಿದೆ. ಕೊರೊನಾ ಹಾವಳಿ ಕಮ್ಮಿ ಆದ ಮೇಲೆ ಗ್ರ್ಯಾಂಡ್ ರಿಸೆಪ್ಷನ್ ಪಾರ್ಟಿಗೆ ಪ್ಲಾನ್ ಮಾಡಲಾಗಿದೆ. ಇನ್ನು ಶಂಕರ್ ಸಿನಿಮಾಗಳ ವಿಚಾರಕ್ಕೆ ಬಂದ್ರೆ, ಸೆಟ್ ನಲ್ಲಿ ದುರಂತದಿಂದ ಇಂಡಿಯನ್- 2 ಸಿನಿಮಾ ನಿಂತು ಹೋಗಿದೆ. ಇನ್ನು ರಾಮ್ ಚರಣ್ ಅಭಿನಯದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದಾಗಿ ಕ್ರಿಯೇಟಿವ್ ಡೈರೆಕ್ಟರ್ ಘೋಷಿಸಿದ್ದಾರೆ. ತಮಿಳಿನ ಸೂಪರ್ ಹಿಟ್ ‘ಅನ್ನಿಯನ್’ ಕಥೆಯನ್ನ ರಣ್ವೀರ್ ಸಿಂಗ್ ಹೀರೋ ಮಾಡಿ ಬಾಲಿವುಡ್ ನಲ್ಲಿ ರೀಮೇಕ್ ಮಾಡೋದಾಗಿ ತಿಳಿಸಿದ್ದಾರೆ.