ಕಳೆದ ನಾಲ್ಕೈದು ದಿನಗಳಿಂದ ದರ್ಶನ್ ಒಂದಲ್ಲ ಒಂದು ವಿವಾದಗಳಲ್ಲಿ ಚರ್ಚೆಯಾಗುತ್ತಲೇ ಇದ್ದಾರೆ. ಆದ್ರೆ, ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಕಿತ್ತಾಟ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಮೈಸೂರಿನ ಸಂದೇಶ್ ಹೊಟೇಲ್ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ. ಈ ವಿಚಾರದಿಂದ ಆರಂಭವಾದ ಗಲಾಟೆ ಇಂದು ಪುನೀತ್ ರಾಜ್ಕುಮಾರ್ ಹಾಗೂ ಪ್ರೇಮ್ವರೆಗೂ ಬಂದು ನಿಂತಿದೆ. ಜುಲೈ 17ರಂದು ತನ್ನ ಫಾರ್ಮ್ ಹೌಸ್ನಲ್ಲಿ ಪ್ರೆಸ್ ಮೀಟ್ ಮಾಡಿದ ದರ್ಶನ್ ಮಾತಿನ ಭರಾಟೆಯಲ್ಲಿ ಪ್ರೇಮ್ರನ್ನೂ ಎದುರಾಕಿಕೊಂಡಿದ್ದಾರೆ. 100 ದಿನ ಕಾಲ್ ಶೀಟ್ ಕೊಡೋಕೆ ಪ್ರೇಮ್ ಯಾವುದೇ ಪುಡಂಗನೂ ಅಲ್ಲ.. ಕೊಂಬೂ ಎಂದಿದ್ದರು. ಅದಕ್ಕೀಗ ನಿರ್ದೇಶಕ ಪ್ರೇಮ್ ಪತ್ರ ಬರೆದು ತಿರುಗೇಟು ನೀಡಿದ್ದಾರೆ.
ರಾಜ್ಕುಮಾರ್ ಕುಟುಂಬಕ್ಕೆ ಸೇರಿದ ಆಸ್ತಿಯೊಂದನ್ನು ನಿರ್ಮಾಪಕ ಉಮಾಪತಿ ಖರೀದಿ ಮಾಡಿದ್ದರು. ಅದನ್ನು ದರ್ಶನ್ ತನಗೆ ಕೊಡುವಂತೆ ಒತ್ತಡ ಹೇರಿದ್ದರು ಅನ್ನೋ ವಿಷ್ಯ ಉಮಾಪತಿ ಹೊರ ಹಾಕಿದ್ದರು. ಆ ವಿಚಾರಕ್ಕೆ ಸಮಜಾಯಿಷಿ ಕೊಡೋಕೆ ದರ್ಶನ್ ತನ್ನ ಫಾರ್ಮ್ ಹೌಸ್ನಲ್ಲಿ ಪ್ರೆಸ್ಮೀಟ್ ಮಾಡಿದ್ರು. ಈ ವೇಳೆ ಉಮಾಪತಿಯವರನ್ನು ಭೇಟಿ ಮಾಡಿಸಿದ್ದೇ ಪ್ರೇಮ್. ಸಿನಿಮಾ ಮಾಡೋ ದೃಷ್ಟಿಯಿಂದ ನಾನು, ಪ್ರೇಮ್ ಹಾಗೂ ಉಮಾಪತಿ ಭೇಟಿಯಾಗಿದ್ದೇವು. ಆಗ ಪ್ರೇಮ್ 100 ದಿನ ಕಾಲ್ ಶೀಟ್ ಕೇಳಿದ್ದರು. ಆಗ ಯಾವುದೇ ನಿರ್ದೇಶಕರಿಗೂ 70ದಿನಗಳ ಮೇಲೆ ಕಾಲ್ಶೀಟ್ ಕೊಡೋದಿಲ್ಲವೆಂದು ಹೇಳಿದ್ದೆ. ಪ್ರೇಮ್ಗೆ 100 ದಿನ ಕಾಲ್ಶೀಟ್ ಕೋಡೋಕೆ ಅವರೇನು ಯಾವುದೇ ಪುಡಂಗೂ ಅಲ್ಲ.. ಕೊಂಬೂ ಇಲ್ಲವೆಂದು ಹೇಳಿದ್ದರು. ಆವೇಶದಲ್ಲಿ ದರ್ಶನ್ ಈ ಮಾತನ್ನು ಹೇಳುತ್ತಿದ್ದಂತೆ, ಪ್ರೇಮ್ ಸಿಡಿದೆದ್ದಿದ್ದಾರೆ.
‘‘ ದರ್ಶನ್ ಅವರೇ ನಾನು ಕರಿಯಾ ಸಿನಿಮಾ ಮಾಡಬೇಕಾದರೆ ನಾನು ಯಾವ ಪುಡಂಗನೂ ಆಗಿರಲಿಲ್ಲ. ನಂಗೆ ಕೊಂಬೂ ಇರಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್, ರಜನಿಕಾಂತ್ ನನ್ನನು ಒರ್ವ ಒಳ್ಳೆ ನಿರ್ದೇಶಕನೆಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಎಂದು ಬಿರುದು ಕೊಟ್ಟಾಗ ನನಗೆ ಕೊಂಬು ಬರಲಿಲ್ಲ.’’ ಎಂದು ಟ್ವಿಟರ್ನಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ.
‘‘ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಷನ್ನಲ್ಲಿ ಯಾವಾಗ ಸಿನಿಮಾ ಮಾಡುತ್ತೀರಿ ಅಂತ ಕೇಳ್ತಾನೇ ಇದ್ರು. ಇದರ ಬಗ್ಗೆ ನಿಮಗೂ ಗೊತ್ತು. ನಮಗೂ ಗೊತ್ತು. ನಾವು ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ. ಆದ್ರೆ, ನನ್ನ ದಿ ವಿಲನ್ ಸಿನಿಮಾ ಲೇಟಾಗಿತ್ತು. ಹೀಗಾಗಿ ಉಮಾಪತಿಯವರಿಗೆ ನಾನು ಬೇರೆ ನಿರ್ದೇಶಕರನ್ನು ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ’’ ಎಂದಿದ್ದಾರೆ.
ದರ್ಶನ್, ಇಂದ್ರಜಿತ್ ಹಾಗೂ ಉಮಾಪತಿ ಗಲಾಟೆಯಲ್ಲಿ ತಮ್ಮ ಹೆಸರು ಎಳೆದು ತಂದಿದ್ದಕ್ಕೆ ಪ್ರೇಮ್ ಗರಂ ಆಗಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತಾಡ್ಬೇಕಾದ್ರೆ ಯೋಚನೆ ಮಾಡಿ ಮಾತಾಡಿ ಅಂತ ಸಲಹೆಯನ್ನೂ ನೀಡಿದ್ದಾರೆ.