ದಿಯಾ ಮಿರ್ಜಾ ಎರಡನೇ ಬಾರಿ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಪತಿ ವೈಭವ್ ರೇಖಿ ಜೊತೆ ಮಾಲ್ಟೀವ್ಸ್ನಲ್ಲಿ ಹನಿಮೂನ್ ಮೂಡ್ನಲ್ಲಿದ್ದಾರೆ. ಪತಿ ವೈಭವ್ ರೇಖಿಯ ಮೊದಲ ಪತ್ನಿಯ ಪುತ್ರಿಯನ್ನೂ ತಮ್ಮ ಹನಿಮೂನ್ಗೆ ಕರೆದುಕೊಂಡು ಹೋಗಿದ್ದಾರೆ. ಇದು ಜನರ ಮೆಚ್ಚುಗೆಗೂ ಪಾತ್ರವಾಗಿದೆ. ಆದ್ರೆ, ಇದೇ ವೇಳೆ ಪುರುಷರ ಖಾಸಗಿ ಅಂಗದ ಬಗ್ಗೆ ಹೇಳಿಕೆಯೊಂದನ್ನ ಪೋಸ್ಟ್ ಮಾಡಿ ಪೇಚಿಗೆ ಸಿಲುಕಿದ್ದಾರೆ.
ಅಂತರಾಷ್ಟ್ರೀಯ ಸುದ್ದಿವಾಹಿನಿ ಸ್ಕೈ ನ್ಯೂಸ್ ಸುದ್ದಿಯೊಂದನ್ನ ಟ್ವಿಟ್ಟರ್ನಲ್ಲಿ ಶೇರ್ ಮಾಡಿತ್ತು. ಮಾಲಿನ್ಯದಿಂದ ಪುರುಷರ ಶಿಶ್ನದ ಗಾತ್ರ ಕುಗ್ಗುತ್ತಿದೆ. ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆಂದು ಹೇಳಿತ್ತು. ಅದೇ ಟ್ವೀಟ್ ಅನ್ನ ದಿಯಾ ಮಿರ್ಜಾ ಮರು ಟ್ವೀಟ್ ಮಾಡಿ ವಾಯು ಮಾಲೀನ್ಯದ ಬಗ್ಗೆ ಎಚ್ಚರಿಕೆ ನೀಡಿದ್ದರು.
‘ಈಗಲಾದ್ರೂ ವಿಶ್ವ ಪರಿಸರ ಮಾಲಿನ್ಯ ಹಾಗೂ ವಾಯು ಮಾಲಿನ್ಯವನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾ?’ ಎಂದು ಟ್ವಿಟ್ಟರ್ನಲ್ಲಿ ಪ್ರಶ್ನೆ ಮಾಡಿದ್ದರು. ದಿಯಾ ಮಿರ್ಜಾ ವಾಯು ಮಾಲಿನ್ಯವನ್ನ ಗಮನದಲ್ಲಿಟ್ಟುಕೊಂಡು ಟ್ವೀಟ್ ಮಾಡಿದ್ದರು. ಆದ್ರೆ, ದಿಯಾ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.
ಬರಿ ಪುರುಷರು ಮಾಲಿನ್ಯ ಉಂಟು ಮಾಡುತ್ತಿದ್ದಾರೆಯೆ. ಅದರಿಂದ ಜನನಾಂಗ ಕಿರಿದಾಗುವುದಾದರೆ ಅದರ ಪರಿಣಾಮ ಮಹಿಳೆಯರ ಮೇಲೂ ಪ್ರಭಾವ ಬೀರುತ್ತದೆ ಅಲ್ಲವೇ.. ಅಂತ ಒಬ್ಬರು ಪ್ರಶ್ನೆ ಮಾಡಿದ್ರೆ, ಮತ್ತೊಬ್ಬರು ನೀವು ಪೆಟ್ರೋಲ್ ಹಾಗೂ ಡೀಸಲ್ ಕಾರು ಬಳಸುವುದನ್ನ ನಿಲ್ಲಿಸಿ. ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬಕ್ಕೂ ತಿಳಿಸಿ ಅಂತ ಬಿಟ್ಟಿ ಸಲಹೆ ನೀಡಿದ್ದಾರೆ.
ದಿಯಾ ಮಿರ್ಜಾ ಸದ್ಯ ಮಾಲ್ಟೀವ್ಸ್ನಲ್ಲಿ ಹನಿಮೂನ್ಗೆ ಹೋಗಿದ್ದಾರೆ. ಪ್ರತಿ ದಿನ ಮಾಲ್ಡೀವ್ಸ್ನಲ್ಲಿ ಕಳೆದ ಒಂದೊಂದು ಫೋಟೊವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.