ಧ್ರುವ ಸರ್ಜಾ ಪೊಗರು ಲಾಕ್ಡೌನ್ ಬಳಿಕ ಬಿಡುಗಡೆಯಾಗಿದ್ದ ಮೊದಲ ಸ್ಟಾರ್ ಸಿನಿಮಾ. ಹೀಗಾಗಿ ಆರಂಭದಲ್ಲಿ ಸಿನಿಮಾ ಹೇಗಾಗುತ್ತೋ? ಫೆಬ್ರವರಿಯಲ್ಲಿ ರಿಲೀಸ್ ಮಾಡೋದ್ರು ಜನ ಬರ್ತಾರಾ? ಅನ್ನೋ ಒಂದಿಷ್ಟು ಗೊಂದಲದಲ್ಲೇ ಸಿನಿಮಾ ಫೆಬ್ರವರಿ 19 ರಂದು ರಿಲೀಸ್ ಆಗಿತ್ತು. ಆದ್ರೆ, ಪೊಗರು ನೋಡೋಕೆ ಪ್ರೇಕ್ಷಕರು ನುಗ್ಗಿಬಂದ್ರು. ಆ್ಯಕ್ಷನ್ ಪ್ರಿನ್ಸ್ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ್ರು.
ಪೊಗರು ಸಿನಿಮಾ ಗಮನ ಸೆಳೆದಿದ್ದು ಚಂದನ್ ಶೆಟ್ಟಿ ಹಾಡುಗಳು, ಧ್ರುವ, ರಶ್ಮಿಕಾ ಮಂದಣ್ಣ ಕಾಂಬಿನೇಷನ್. ಪಕ್ಕಾ ಲೋಕಲ್ ಹುಡುಗನಾಗಿ ರಗಡ್ ಲುಕ್ ಕೊಟ್ಟಿದ್ದ ಆ್ಯಕ್ಷನ್ ಪ್ರಿನ್ಸ್ಗೆ ಪೊಗರು ಹೊಸ ಇಮೇಜ್ ಕೊಟ್ಟಿದ್ದಂತೂ ನಿಜ. ಲಾಕ್ಡೌನ್ನಿಂದ ಕಂಗಾಲಾಗಿದ್ದ ಚಿತ್ರರಂಗಕ್ಕೆ ಪೊಗರು ಆರಂಭಿಕ ಬೂಸ್ಟ್ ಕೊಟ್ಟಿದ್ದಂತೂ ಸುಳ್ಳಲ್ಲ.
ಪೊಗರು ನೋಡೋಕೆ ಮೊದಲ ಮೂರು ದಿನ ಜನ ಕ್ಕಿಕ್ಕಿರಿದು ಸೇರಿದ್ದರು. ಹೀಗಾಗಿ ಫಸ್ಟ್ ವೀಕ್ನಲ್ಲಿ, ಅಂದ್ರೆ ಮೂರು ದಿನಕ್ಕೆ 30 ಕೋಟಿ ಕಲೆಹಾಕಿತ್ತು. ಹಾಗೇ 6 ದಿನಗಳಲ್ಲಿ 46 ಕೋಟಿ ಗಳಿಸಿ, ಕಲೆಕ್ಷನ್ ವಿಚಾರದಲ್ಲಿ ಧ್ರುವ ಕರಿಯರ್ನ ಬೆಸ್ಟ್ ಸಿನಿಮಾ ಅನ್ನೋ ಹೆಗ್ಗಳಿಕೆನೂ ಗಳಿಸಿಬಿಡ್ತು.
ಪೊಗರುಗೆ ಸಿಕ್ಕ ಯಶಸ್ಸಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ಸ್ಟಾರ್ ಪುನೀತ್ ಸಿನಿಮಾಗಳಿಗೆ ಧೈರ್ಯ ಬಂತು. ಜನ ಥಿಯೇಟರ್ಗೆ ಬರ್ತಾರೆ ಅನ್ನೋದು ಪ್ರೂವ್ ಆಯ್ತು. ಹೀಗಾಗಿ ರಾಬರ್ಟ್ ಹಾಗೂ ಯುವರತ್ನ ಸಿನಿಮಾಗಳು ರಿಲೀಸ್ ಆದ್ವು. ಈ ಸಿನಿಮಾಗಳ ಜೊತೆ ಪೊಗರು ಈಗ 50 ದಿನಗಳನ್ನ ಪೂರೈಸಿದೆ. ಗಾಂಧಿನಗರದ ಮೂಲಗಳು ಪ್ರಕಾರ, ಪೊಗರು 50 ದಿನಕ್ಕೆ 50 ಕೋಟಿ ಕಲೆಹಾಕಿದೆ.
ಧ್ರುವ ಪೊಗರು ಹಿಂದೆನೇ ನಂದ ಕಿಶೋರ್ ಸಿನಿಮಾ ಮಾಡ್ಬಹುದಿತ್ತು. ಆದ್ರೀಗ ದುಬಾರಿಯನ್ನ ಪಕ್ಕಕ್ಕಿಟ್ಟು ಜಗ್ಗುದಾದ ನಿರ್ದೇಶಕನ ಸಿನಿಮಾ, ಇಲ್ಲವೇ ಪುರಿಜಗನ್ನಾಥ್ ಸಿನಿಮಾವನ್ನ ಕೈಗೆತ್ತಿಗೊಳ್ಳಲಿದ್ದಾರೆ ಅನ್ನೋ ಮಾತು ಕೇಳಿಬರ್ತಿದೆ.