ಸಿನಿಮಾದ ಟೈಟಲ್ ವ್ಯಕ್ತಿಯ ಹೆಸರಾಗಿದ್ದರೆ, ಅದು ಬಹುತೇಕ ಸಿನಿಮಾದಲ್ಲಿನ ಹೀರೋ ಹೆಸರೇ ಆಗಿರುತ್ತೆ. ಹೀಗಾಗಿ ಧ್ರುವ ಸರ್ಜಾ ಹೊಸ ಸಿನಿಮಾದ ಟೈಟಲ್ ಮಾರ್ಟಿನ್ ಅನೌನ್ಸ್ ಆದಾಗಲೂ ಸಿನಿಮಾದಲ್ಲಿ ಧ್ರುವ ಹೆಸರೇ ಇರ್ಬೇಕು ಅಂತ ಎಲ್ಲೂ ಭಾವಿಸಿದ್ದರು. ಆದ್ರೆ, ಆರಂಭದಲ್ಲೇ ಮಾರ್ಟಿನ್ ಅನ್ನೋದು ನಾಯಕನ ಹೆಸರಲ್ಲ ಎಂದು ಸ್ವತ: ಧ್ರುವ ಸ್ಪಷ್ಟ ಪಡಿಸಿದ್ದಾರೆ. ಹಾಗಿದ್ರೆ, ಮಾರ್ಟಿನ್ ಯಾರು? ಅನ್ನೋ ಪ್ರಶ್ನೆ ಧ್ರುವ ಅಭಿಮಾನಿಗಳನ್ನು ಕಾಡೋಕೆ ಶುರುವಾಗಿದೆ.
ಪೊಗರು ಬಳಿಕ ಧ್ರುವ ಸರ್ಜಾ 5ನೇ ಸಿನಿಮಾ ಮಾರ್ಟಿನ್ ಸೆಟ್ಟೇರಿದೆ. 9 ವರ್ಷಗಳ ಬಳಿಕ ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಮತ್ತೆ ಒಂದಾಗಿದ್ದಾರೆ. ಧ್ರುವ ಮೊದಲ ಸಿನಿಮಾ ಅದ್ಧೂರಿ ನಿರ್ದೇಶಿಸಿದ್ದ ಅರ್ಜುನ್ ಮತ್ತೆ ಈಗ ಆ್ಯಕ್ಷನ್ ಪ್ರಿನ್ಸ್ಗಾಗಿ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಅದೇ ಈ ಮಾರ್ಟಿನ್.. ಈಗಾಗ್ಲೇ ಸಿನಿಮಾದ ಚಿಕ್ಕ ಟೀಸರ್ ಅನ್ನೂ ರಿಲೀಸ್ ಮಾಡಲಾಗಿದೆ. ಆ ಟೀಸರ್ನಲ್ಲೇ ಧ್ರುವ who is martin ಅನ್ನೋ ಡೈಲಾಗ್ ಇದೆ.
ಮಾರ್ಟಿನ್ ಅನ್ನೋದು ಹೀರೋ ಹೆಸರಲ್ಲ. ಅಂದ್ಮೇಲೆ ವಿಲನ್ ಹೆಸರಿರಬಹುದಾ? ಇಂತಹದ್ದೊಂದು ಪ್ರಶ್ನೆ ಮೂಡೋದು ಸಹಜ. ಒಂದ್ವೇಳೆ ವಿಲನ್ ಹೆಸರಾಗಿದ್ದರೆ, ಅದನ್ನೂ ಸ್ಪಷ್ಟಪಡಿಸುತ್ತಿದ್ದರು. ಸಿನಿಮಾ ಕೆಲವು ಮೂಲಗಳ ಪ್ರಕಾರ, ಮಾರ್ಟಿನ್ನಲ್ಲಿ ಸರ್ಪ್ರೈಸ್ ಕ್ಯಾರೆಕ್ಟರ್ವೊಂದಿದೆ. ಅದರ ಹೆಸರೇ ಮಾರ್ಟಿನ್. ಇದನ್ನು ಚಿತ್ರತಂಡ ಸರ್ಪ್ರೈಸಿಂಗ್ ಆಗೇ ಇಟ್ಟಿದೆ. ಸಿನಿಮಾ ಬಿಡುಗಡೆ ಆಗೋವರೆಗೂ ಯಾರಿಗೂ ಈ ಗುಟ್ಟು ಬಿಟ್ಟು ಕೊಡೋದಿಲ್ಲ ಎನ್ನಲಾಗಿದೆ.
ಮಾರ್ಟಿನ್ಗಾಗಿ ದೊಡ್ಡ ತಂಡವೇ ಸೇರ್ಕೊಂಡಿದೆ. ಸತ್ಯ ಹೆಗಡೆ ಕ್ಯಾಮರಾ ಹಿಡಿದಿದ್ದಾರೆ. ತೆಲುಗಿನ ಮಣಿಶರ್ಮಾ ಸಂಗೀತ ನೀಡ್ತಿದ್ದಾರೆ. ರವಿವರ್ಮಾ ಸಾಹಸ ನಿರ್ದೇಶನವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಐದು ಭಾಷೆಗಳಲ್ಲಿ ಮಾರ್ಟಿನ್ ರಿಲೀಸ್ ಮಾಡೋಕೆ ಟೀಮ್ ಮುಂದಾಗಿದಾಗಿದೆ. ಈಗಾಗ್ಲೇ ಮಾರ್ಟಿನ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಎರಡೇ ದಿನಕ್ಕೆ 9.4 ಮಿಲಿಯನ್ ವೀವ್ಸ್ ಸಿಕ್ಕಿದೆ.