ಧ್ರುವ ಸರ್ಜಾ ಪೊಗರು ಸಿನಿಮಾ ರಿಲೀಸ್ ಆಗಿ ಇತ್ತೀಚೆಗೆ 50 ದಿನಗಳನ್ನ ಪೂರೈಸಿದೆ. ಲಾಕ್ಡೌನ್ ಬಳಿಕ 50 ದಿನಗಳನ್ನ ಪೂರೈಸಿರೋ ಮೊದಲ ಸ್ಟಾರ್ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪೊಗರು ಪಾತ್ರವಾಗಿದೆ. ಸರಿ, ಪೊಗರು ಆಯ್ತು.. ದುಬಾರಿ ಯಾವಾಗಾ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ನಂದಕಿಶೋರ್ ನಿರ್ದೇಶಿಸ್ಬೇಕಿದ್ದ ದುಬಾರಿ ಸಿನಿಮಾವನ್ನ ಪಕ್ಕಕ್ಕಿಟ್ಟಿದ್ದಾರೆ ಅಂತ ಗುಲ್ಲೆದ್ದಿದೆ.
ಇತ್ತೀಚೆಗೆ ನಂದಕಿಶೋರ್ ನಿರ್ಮಾಪಕ ಕೆ ಮಂಜು ಪುತ್ರನ ಕಾಣಿಸಿಕೊಂಡಿದ್ದರು. ಶ್ರೇಯಸ್ ಕೆ ಮಂಜು ಸಿನಿಮಾನಕ್ಕೂ ಮುಂದಾಗಿದ್ದಾರೆ. ಆ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಆಗಲೇ ಧ್ರುವ ಸರ್ಜಾ ಅಭಿಮಾನಿಗಳಿಗೆ ಡೌಟ್ ಬಂದಿತ್ತು. ಅತ್ತ ಆ್ಯಕ್ಷನ್ ಪ್ರಿನ್ಸ್ ಕೂಡ ನಂದ ಕಿಶೋರ್ ಸಿನಿಮಾಗೆ ಬ್ರೇಕ್ ಕೊಟ್ಟು, ಇಬ್ಬರು ನಿರ್ದೇಶಕರಲ್ಲಿ ಒಬ್ಬರನ್ನ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ.
ಪುರಿಜಗನ್ನಾಥ್, ರಾಘವೇಂದ್ರ ಹೆಗಡೆ ಇಬ್ಬರಲ್ಲಿ ಮೊದಲ್ಯಾರು?
ಧ್ರುವ ಸರ್ಜಾ ಜೊತೆ ಸಿನಿಮಾ ಮಾಡೋಕೆ ಜಗ್ಗುದಾದ ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ ಕ್ಯೂನಲ್ಲಿ ನಿಂತಿದ್ದಾರೆ. ದುಬಾರಿ ಬಳಿಕ ಜಗ್ಗುದಾದ ನಿರ್ದೇಶಕರ ಸಿನಿಮಾ ಸೆಟ್ಟೇರಬೇಕಿತ್ತು. ಆದ್ರೆ, ದುಬಾರಿ ನಿಂತಿದ್ದರಿಂದ ರಾಘವೇಂದ್ರ ಹೆಗಡೆಗೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಇನ್ನೊಂದ್ಕಡೆ ಪುರಿಜಗನ್ನಾಥ್ ಹೆಸರು ಕೂಡ ಕೇಳಿಬರುತ್ತಿದೆ. ಆದ್ರೆ, ಪುರಿ ಸದ್ಯಕ್ಕೀಗ ವಿಜಯ್ ದೇವರಕೊಂಡ ಅವ್ರ ಮೊದಲ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಾಘವೇಂದ್ರ ಹೆಗಡೆ ಸಿನಿಮಾ ಶುರು ಮಾಡ್ಬಹುದು ಅನ್ನೋ ಮಾತಿದೆ.
ಆ್ಯಕ್ಷನ್ ಪ್ರಿನ್ಸ್ ದುಬಾರಿಯನ್ನ ಪಕ್ಕಕ್ಕಿಟ್ಟಿದ್ಯಾಕೆ?
ದುಬಾರಿ ಸಿನಿಮಾ ಇಷ್ಟೊತ್ತಿಗಾಗ್ಲೇ ಸೆಟ್ಟೇರಬೇಕಿತ್ತು. ಆದ್ರೆ, ಪೊಗರು ಪ್ರಮೋಷನ್, ಕೊರೊನಾ ಹಾವಳಿಯಿಂದಾಗಿ ಸಿನಿಮಾ ಶುರುವಾಗಿರಲಿಲ್ಲ. ಆದ್ರೀಗ ಒಂದೇ ಕಾಂಬಿನೇಷನ್ ಬ್ಯಾಕ್ ಟು ಬ್ಯಾಕ್ ಬರೋದು ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಮಾತು ಚಿತ್ರರಂಗದಲ್ಲಿದೆ. ಒಂದು ಗ್ಯಾಪ್ ಕೊಟ್ಟು ಮತ್ತೆ ಸಿನಿಮಾ ಮಾಡೋಕೆ ಈ ಜೋಡಿ ನಿರ್ಧರಿಸಿದೆ ಎನ್ನಲಾಗಿದೆ.