ಒಂದು ಸಿನಿಮಾ ಹಿಟ್ ಆದರೆ ಸ್ಟಾರ್ಸ್ ಸಂಭಾವನೆ ಹೆಚ್ಚಿಸಿಕೊಳ್ಳೋದು ಸಹಜ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹಾವಳಿ ಶುರುವಾಗಿದೆ. ಎಲ್ಲಾ ಭಾಷೆಯ ಪ್ರೇಕ್ಷಕರಿಗೆ ಚಿರಪರಿಚಿತರಾಗಿರೋ ಹೀರೋನ ಕಾಸ್ಟ್ ಮಾಡಿ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ, 100, 200 ಕೋಟಿ ಬ್ಯುಸಿನೆಸ್ ಮಾಡಬಹುದು. ಇದೇ ಲೆಕ್ಕಾಚಾರ ಈಗ ಎಲ್ಲೆಲ್ಲೂ ನಡೀತಿದೆ. ಧನುಷ್ (Dhanush) ಅಭಿನಯದ ‘ಕರ್ಣನ್’ (Karnan) ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಇದೀಗ ಓಟಿಟಿ ಪ್ಲ್ಯಾಟ್ ಫಾರ್ಮ್ಗಳಲ್ಲಿ ರಜಿನಿಕಾಂತ್ (Rajinikanth) ಅಳಿಯನ ‘ಜಗಮೇತಂತಿರಂ’ (Jagame thandhiram) ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ಇದೇ ವೇಳೆ ಮುಂದಿನ ಚಿತ್ರಕ್ಕೆ ಧನುಷ್ 50 ಕೋಟಿ ಸಂಭಾವನೆ ಪಡಿತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಧನುಷ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಡ್ತಿದ್ದಾರೆ. ಲಾಕ್ಡೌನ್ ಸಮಯದಲ್ಲೂ ಡಿಜಿಟಲ್ ಪ್ಲ್ಯಾಟ್ ಫಾರ್ಮ್ಗಳಲ್ಲಿ ಕರ್ಣನ್ ಮತ್ತು ಜಗಮೇತಂತಿರಂ ಸಿನಿಮಾಗಳು ಬೇಜಾನ್ ಸೌಂಡ್ ಮಾಡ್ತಿದ್ದಾವೆ. ಇದೀದ ಧನುಷ್ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಲಿರೋ ಚಿತ್ರಕ್ಕೆ ಪುಸ್ಕುರ್ ರಾಮ್ ಮೋಹನ್ ರಾವ್ ಮತ್ತು ನಾರಾಯಣ್ ದಾಸ್ ಕೆ ನಾರಂಗ್ ಬಂಡವಾಳ ಹಾಕ್ತಿದ್ದಾರೆ. ಧನುಷ್ ಬರೀ ತೆಲುಗು, ತಮಿಳು ಅಷ್ಟೇ ಅಲ್ಲ ಬಾಲಿವುಡ್ ಪ್ರೇಕಷಕರಿಗೂ ಚಿರಪರಿಚಿತ ನಟ. ಹಾಗಾಗಿ ಎಷ್ಟೇ ಸಂಭಾವನೆ ಕೊಟ್ಟರು, ಎಷ್ಟೇ ಬಂಡವಾಳ ಹಾಕಿದ್ರು, ಮರಳಿ ಪಡೆಯಬಹುದು ಅನ್ನೋ ಲೆಕ್ಕಾಚಾರ ನಡೀತಿದೆ.
ಬಾಲಿವುಡ್ನ ಅತರಂಗಿ ರೇ, ಕಾರ್ತಿಕ್ ನರೇನ್ ನಿರ್ದೇಶನದ ಒಂದು ಸಿನಿಮಾ ಮತ್ತು ದಿ ಗ್ರೇ ಮ್ಯಾನ್ ಅನ್ನೋ ಹಾಲಿವುಡ್ ಪ್ರಾಜೆಕ್ಟ್ನಲ್ಲಿ ಧನುಷ್ ಕೆಲಸ ಮಾಡ್ತಿದ್ದಾರೆ. ಇದೆಲ್ಲದರ ಜೊತೆಗೆ ಶೇಖರ್ ಕಮ್ಮುಲ ನಿರ್ದೇಶನದ ಚಿತ್ರಕ್ಕೆ ಸೈ ಅಂದಿದ್ದಾರೆ. ಇಷ್ಟು ಬ್ಯುಸಿ ಇರೋ ನಟ ಎಷ್ಟು ಸಂಭಾವನೆ ಕೇಳಿದ್ರು, ನಿರ್ಮಾಪಕರು ಒಲ್ಲೆ ಅನ್ನಲ್ಲ. ಧನುಷ್ ಸಂಭಾವನೆ 50 ಕೋಟಿಗೆ ಏರಿರೋದು ನಿಜ ಅನ್ನೋ ಮಾತುಗಳೇ ಕೇಳಿಬರ್ತಿದೆ. ಧನುಷ್ ಸಿನಿಕರಿಯರ್ನಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಮೊತ್ತದ ಸಂಭಾವನೆ ಪಡೀತಿದ್ದಾರೆ.