ದಕ್ಷಿಣ ಭಾರತೀಯರಿಗೆ ಫಿಲ್ಟರ್ ಕಾಫಿ ಮೇಲೆ ಅದ್ಯಾವ ಪರಿ ವ್ಯಾಮೋಹ ಇದೆ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಇದಕ್ಕೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಕೂಡಾ ಹೊರತಲ್ಲ. ಬಾಜಿರಾವ್ ನ ಮಸ್ತಾನಿಯ ಈ ಒಳಗುಟ್ಟು ಅಭಿಮಾನಿಗಳಿಗೆ ಇವತ್ತು ಗೊತ್ತಾಗಿದೆ. ದೀಪಿಕಾ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಒಂದಷ್ಟು ವಿಡಿಯೋಗಳನ್ನು ಹಾಕ್ತಾ ಇರ್ತಾರೆ. ಅದ್ರಲ್ಲಿ ಒಂದು ವಿಡಿಯೋ Rapid Fire ನಂಥದ್ದು. ಅದ್ರಲ್ಲಿ ಆಕೆ ತನಗೆ ಏನಿಷ್ಟ ಏನು ಇಷ್ಟವಿಲ್ಲ…ಇರುವ ಎರಡು ಆಯ್ಕೆಗಳಲ್ಲಿ ತನ್ನ ಆಯ್ಕೆ ಏನು ಅನ್ನೋ ರೀತಿಯ ಒಂದು ಫನ್ ವಿಡಿಯೋ ಮಾಡಿದ್ದಾರೆ.


ಈ ವಿಡಿಯೋದಲ್ಲಿ ಲಾಂಗ್ ವಾಕ್ ಗಿಂತ ತನಗೆ ಮೂವಿ ನೈಟ್ ಇಷ್ಟ ಎಂದಿದ್ದಾರೆ. ಆರಾಮಾಗಿ ನಡೆಯೋಕ್ಕಿಂತ ಒಂದು ಕಡೆ ಕುಳಿತು ಸಿನಿಮಾ ನೋಡುತ್ತಾ ಸಮಯ ಕಳೆಯೋದು ತನಗೆ ಇಷ್ಟ ಎಂದಿದ್ದಾರೆ ಈ ಪೀಕೂ ನಟಿ. ಅದೇ ರೀತಿ ಕೋಲ್ಡ್ ಕಾಫಿನಾ ಅಥವಾ ಫಿಲ್ಟರ್ ಕಾಫಿನಾ ಅಂದಿದ್ದಕ್ಕೆ ಫಿಲ್ಟರ್ ಕಾಫಿಯನ್ನೇ ಆರಿಸಿಕೊಂಡಿದ್ದಾರೆ ಡಿಪ್ಪಿ. ದೀಪಿಕಾಗೂ ಫಿಲ್ಟರ್ ಕಾಫಿ ಫೇವರಿಟ್ ಅಂತ ಗೊತ್ತಾಗಿ ಆಕೆಯ ದಕ್ಷಿಣ ಭಾರತದ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರಂತೆ.


ಎಷ್ಟು ಸಾಧನೆ ಮಾಡಿ, ಎಷ್ಟು ಹೆಸರು ಮಾಡಿದರೂ ಒಂದಿಷ್ಟಾದ್ರೂ ನಮ್ಮ ಬೇರುಗಳಿಗೆ ಹೊಂದಿಕೊಂಡ ಇಷ್ಟಗಳು ನಮ್ಮೊಂದಿಗೇ ಉಳಿಯುತ್ತವೆ. ಫಿಲ್ಟರ್ ಕಾಫಿ ಇಲ್ಲ ಅಂದ್ರೆ ನಾವು ದಕ್ಷಿಣ ಭಾರತೀಯರಿಗೆ ದಿನ ಕಂಪ್ಲೀಟ್ ಆಗೋಕೆ ಸಾಧ್ಯವೇ ಇಲ್ಲ. ದೀಪಿಕಾ ಕೂಡಾ ಇದಕ್ಕೆ ಹೊರತಲ್ಲ ಅನ್ನೋದೇ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ…ಹಾಗಾಗೇ ಇದರ ಬಗ್ಗೆ ಬಾರೀ ಚರ್ಚೆಗಳೂ ನಡೆಯುತ್ತಿವೆ.